ದೇವದುರ್ಗ, ಜುಲೈ 12: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ದೇವದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಸಮಿತಿ ಹಾಗೂ ದೇವದುರ್ಗ ಮತ್ತು ಅರಕೇರಾ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿಗಳ ವತಿಯಿಂದ ಎಸ್.ಐ.ಆರ್. (Special Intensive Revision) ಕುರಿತು ವಿಶೇಷ ಜಾಗೃತಿ ಹಾಗೂ ಕಾರ್ಯಕಾರಣಿ ಸಭೆ ಯಶಸ್ವಿಯಾಗಿ ನಡೆಯಿತು.

ಸಭೆಯಲ್ಲಿ ಎಸ್.ಐ.ಆರ್. ಪ್ರಕ್ರಿಯೆ, ಮತದಾರರ ಪಟ್ಟಿಯ ಸಮಗ್ರ ಪರಿಷ್ಕರಣೆ, ಹೊಸ ಮತದಾರರ ನೋಂದಣಿ, ಮತದಾರರ ಹೆಸರು ಮತ್ತು ವಿಳಾಸ ತಿದ್ದುಪಡಿ ಸೇರಿದಂತೆ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ಕುರಿತು ಸಮಗ್ರ ಚರ್ಚೆ ನಡೆಸಲಾಯಿತು. ಬೂತ್ ಮಟ್ಟದಲ್ಲಿ ಯುವ ಕಾಂಗ್ರೆಸ್ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಸಕ್ರಿಯವಾಗಿ ಕಾರ್ಯನಿರ್ವಹಿಸಿ ಪ್ರತಿಯೊಬ್ಬ ಅರ್ಹ ಮತದಾರರಿಗೂ ಅಗತ್ಯ ನೆರವು ಒದಗಿಸುವಂತೆ ಮುಖಂಡರು ಕರೆ ನೀಡಿದರು.

ಸಭೆಯಲ್ಲಿ ರಾಜ್ಯ ಕಾರ್ಯದರ್ಶಿ ಡಾ. ಕೆ.ಆರ್. ದಾದಾಪೀರ್, ರಾಜ್ಯ ಪ್ರಧಾನ ಕಾರ್ಯದರ್ಶಿ ಹುಸೇನ್ ಭಾಷಾ, ಜಿಲ್ಲಾ ಅಧ್ಯಕ್ಷ ಮರಿಸ್ವಾಮಿ, ದೇವದುರ್ಗ ವಿಧಾನಸಭಾ ಕ್ಷೇತ್ರ ಯುವ ಕಾಂಗ್ರೆಸ್ ಅಧ್ಯಕ್ಷ ಲಿಂಗಣ್ಣ ನಾಯಕ, ದೇವದುರ್ಗ ಬ್ಲಾಕ್ ಅಧ್ಯಕ್ಷ ಕುಮಾರ ರಾಠೋಡ್, ಉಪಾಧ್ಯಕ್ಷ ರಮೇಶ್ ಬಾಗೂರು, ಕಾರ್ಯದರ್ಶಿಗಳಾದ ಗೋಪಾಲ್ ನಾಯಕ ಹಾಗೂ ಮೌನೇಶ ನಾಯಕ ಸೇರಿದಂತೆ ಬೂದಿವಸವ, ಬಾಬು, ರಂಗನಾಥ್ ಟೇಲರ್, ರಂಗನಾಥ್ ಕಾಮದಳ್, ಪೋಮಣ್ಣ, ಹನುಮಂತ ಮಸರಕಲ್, ನರಸಣ್ಣ ನಾಯಕ (ಮಲ್ಲಾಪುರ), ಕರೆಪ್ಪ ಬಡಗನ್, ಮೌನೇಶ್, ಖಾಜಾ ಸಾಬ್, ಖಾಸಿಂ ಸಾಬ್, ರಂಗಣ್ಣ ಗಾಲಿ (ಸಲೀಕೇಪುರ), ಮಲ್ಲಿಕಾರ್ಜುನ ಉಲ್ಕಬಂಡ್, ದೇವರಾಜ್ ವಗಡಂಬಳಿ ಸೇರಿದಂತೆ ಯುವ ಕಾಂಗ್ರೆಸ್ ಸಮಿತಿಯ ಅನೇಕ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಭಾಗವಹಿಸಿ ಸಭೆಯನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *