ಮಸ್ಕಿ: ಮಸ್ಕಿ ತಾಲೂಕು ಕೇಂದ್ರವಾಗಿ
ಕಾರ್ಯನಿರ್ವಹಿಸುತ್ತಿದೆ ಆದರೆ ಪಟ್ಟಣದಲ್ಲಿ ಹಲವು ವರ್ಷಗಳಿಂದ ಕಾರ್ಯ
ನಿರ್ವಹಿಸುತ್ತಿದ್ದ ಸಂಚಾರ
ನ್ಯಾಯಾಲಯವನ್ನು ಶಾಶ್ವತ
ನ್ಯಾಯಾಲಯವನ್ನಾಗಿ ಮಾಡುವಂತೆ ಇಲ್ಲಿನ ಸಾರ್ವಜನಿಕರು ವಕೀಲರು ಸೇರಿದಂತೆ ತಾಲೂಕಿನ ಜನರ ಬೇಡಿಕೆಯಾಗಿತ್ತು ಸರ್ಕಾರ ಮಸ್ಕಿ ತಾಲೂಕಿಗೆ ಶಾಶ್ವತ ನ್ಯಾಯಾಲಯ
ನಿರ್ವಹಿಸುವಂತೆ ಆದೇಶ ಹೊರಡಿಸಿದ್ದು ತಾಲೂಕಿನ ಸಾರ್ವಜನಿಕರಲ್ಲಿ ಸಂತಸ ಮೂಡಿಸಿದೆ ಎಂದು ಮಸ್ಕಿ ತಾಲೂಕು ವಕೀಲರ ಸಂಘದ ಅಧ್ಯಕ್ಷ ವೀರಭದ್ರಪ್ಪ ರಂಗಾಪುರ್, ವಕೀಲರಾದ ಬಸವರಾಜ್ ಯತ್ನಟ್ಟಿ ತಿಳಿಸಿದರು.

ಮಸ್ಕಿ ಪಟ್ಟಣದಲ್ಲಿ ಕಳೆದ ಹಲವಾರು ವರ್ಷಗಳಿಂದ ಇಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಚಾರ ನ್ಯಾಯಾಲಯ ಬದಲಿಗೆ
ಕಾಯಂ ಕೋರ್ಟ್‌ ಸ್ಥಾಪಿಸುವಂತೆ ತಾಲೂಕಿನ ವಕೀಲರು,
ಸರ್ಕಾರಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆ, ಸರ್ಕಾರ ಈ ಕುರಿತು ಮಹತ್ವದ ಆದೇಶ ಹೊರಡಿಸಿದೆ. ಅಲ್ಲದೆ ನ್ಯಾಯಾಲಯಕ್ಕೆ ಬೇಕಾದ ಅಗತ್ಯ ಸಿಬ್ಬಂದಿಗಳನ್ನು ನೇಮಕಾತಿ ಮಾಡಿಕೊಳ್ಳಲು ಸಹ ಆದೇಶ ನೀಡಿದ್ದು, ತಾಲೂಕಿನ
ಜನರ ಬಹು ದಿನಗಳ ಶಾಶ್ವತ ಕೋರ್ಟ್ ಬೇಡಿಕೆ
ಈಡೇರಿದಂತಾಗಿದೆ ಇದರಿಂದ ಇಲ್ಲಿನ ಕಕ್ಷಿದಾರರಿಗೆ ಸಕಾಲದಲ್ಲಿ ನ್ಯಾಯ ದೊರೆತು ಅನುಕೂಲವಾಗಲಿದೆ ಎಂದು ತಿಳಿಸಿದರು.

Leave a Reply

Your email address will not be published. Required fields are marked *