ಅರಕೇರಾ : ತಾಲ್ಲೂಕಿನ ಗಂಗಾನಾಯಕ ತಾಂಡದಲ್ಲಿ ಸುಮಾರು ₹2 ಕೋಟಿ ರೂಪಾಯಿ ವೆಚ್ಚದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗೆ ಶಾಸಕಿ ಕರೆಮ್ಮ ಜಿ. ನಾಯಕ ಅವರು ಶನಿವಾರ ಭೂಮಿ ಪೂಜೆ ನೆರವೇರಿಸಿದರು.
ಬಳಿಕ ಶಾಸಕಿ ಕರೆಮ್ಮ ಜಿ ನಾಯಕ ಮಾತನಾಡಿ,
ಕೆಕೆಆರ್‌ಡಿಬಿ ಹಾಗೂ ಮೈಕ್ರೋ ಯೋಜನೆಯ ಅನುದಾನದಡಿ ಈ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ. ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡಲಾಗುತ್ತಿದೆ. ಪ್ರತಿ ಗ್ರಾಮದಲ್ಲೂ ಮೂಲ ಸೌಕರ್ಯ ಒದಗಿಸುವುದು ನಮ್ಮ ಗುರಿ. ಅದರಂತೆ ಗಂಗಾನಾಯ್ಕ ತಾಂಡದಲ್ಲಿ ಅಗತ್ಯವಿರುವ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ” ಎಂದು ತಿಳಿಸಿದರು.
“ಗ್ರಾಮೀಣ ಭಾಗದ ಜನರಿಗೆ ಸಂಪರ್ಕ ವ್ಯವಸ್ಥೆ ಹಾಗೂ ನೈರ್ಮಲ್ಯ ಕಾಪಾಡುವುದು ಅತಿ ಮುಖ್ಯ. ಗುಣಮಟ್ಟದ ಕಾಮಗಾರಿ ನಡೆಸುವಂತೆ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಸಾರ್ವಜನಿಕರು ಕೂಡ ಕಾಮಗಾರಿಯ ಮೇಲೆ ನಿಗಾ ವಹಿಸಬೇಕು” ಎಂದರು.
ದೇವದುರ್ಗ ತಾಲ್ಲೂಕು ಜೆಡಿಎಸ್ ಅಧ್ಯಕ್ಷ
ಬಸನಗೌಡ ದೇಸಾಯಿ, ಸಿದ್ದಣ್ಣ ತಾತ ಮುಂಡರಗಿ, ಅರಕೇರಾ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಸಿದ್ದಣ್ಣ ದೊಂಡಂಬಳಿ, ಶರಣಪ್ಪ ಬಳೆ, ಶಾಲಂ ಉದ್ದಾರ್, ಜಯಪ್ಪ ಗಲಗ,ಸಂತೋಷ ನಾಯಕ, ವೆಂಕಟೇಶಗೌಡ,ರಾಮನಗೌಡ ದೊಂಡಂಬಳಿ,ನರಸಣ್ಣ,ರವಿ,ವೆಂಕಟೇಶ ವಕೀಲ, ದೇವಣ್ಣ ಸಮುದ್ರ ಸೇರಿದಂತೆ ಸ್ಥಳೀಯ ಮುಖಂಡರು ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

