ಮಸ್ಕಿ : ತಾಲ್ಲೂಕಿನ ಹಾಲಾಪೂರ ಗ್ರಾಮ ಪಂಚಾಯತಿಯ ಎಂ ರಾಮಲದಿನ್ನಿ ಗ್ರಾಮದಲ್ಲಿ ಕಳೆದ ಹಲವಾರು ತಿಂಗಳ ನಿಂದ ಎರಡು ಕೊಮಿನ ನಡುವಿನ ಹಳೆ ವೈಷಮ್ಯ ಘಟನೆ ಕುರಿತು ಶಾಂತಿ ಸಭೆ ನಡೆಯಿತು. ಸಭೆಯ ಕುರಿತು ಡಿವಾಯ್ ಎಸ್ ಪಿ ಚಂದ್ರಶೇಖರ ಜಿ ಭಾಗವಹಿಸಿ ಮಾತನಾಡಿ ಗ್ರಾಮದಲ್ಲಿರುವ ಯಾವುದೇ ದ್ವೇಷ, ಸಿಟ್ಟು,ಕೊಪ ಗಳನ್ನು ಮರೆತು ಸಹೊದರತ್ವ ಭಾವನೆಯಿಂದ ಬದುಕಬೇಕು,ಕಾನೂನು ದೊಡ್ಡದು, ಕಾನೂನಿಗೆ ಯಾರು ದೊಡ್ಡವರಲ್ಲ,ಎಲ್ಲರೂ ನೀತಿನಿಯಮದಿಂದ ಬದುಕಬೇಕೆಂದು ಕೆರೆ ನೀಡಿದರು.ಈ ವೇಳೆ ತಾಲ್ಲೂಕ ಪಂಚಾಯತ ಸಹಾಯಕ ನಿರ್ದೆಶಕ ಸೊಮನಗೌಡ ಪಾಟೀಲ್, ಅಕ್ಷರ ದಾಸೋಹ ಅಧಿಕಾರಿ ಕುಬೇರಪ್ಪ,ಉಪ ತಹಶಿಲ್ದಾರ ಸುನೀಲಕುಮಾರ,ಪಿಎಸ್ಐ ಗುರುಚಂದ್ರ ಯಾದವ್,ಮಹೇಶ ಪಾಟೀಲ್ ಕಂದಾಯ ನಿರೀಕ್ಷಕ, ಪಂಚಾಯತ ಅಭಿವೃದ್ಧಿ ಅಧಿಕಾರಿ ವಿಶ್ವನಾಥ ಹೂಗಾರ,ಅಬುಬೂಕರ್ ಗ್ರಾಮಲೆಕ್ಕಾದಿಕಾರಿ,ಮುಖ್ಯಗುರುಗಳಾದ ಸುಭಾಷ್ ಸಿಂಗ್ ಮಂಜುನಾಥ ಹಾಲಾಪೂರ ,ನಿಂಗಪ್ಪ ಹಾಲಾಪೂರ ಹಾಗೂ ಗ್ರಾಮಸ್ಥರು ಇದ್ದರು.

Leave a Reply

Your email address will not be published. Required fields are marked *