ತಾಲೂಕಿನ ದೇವರಭೂಪೂರ ಗ್ರಾಮದಲ್ಲಿ ಶ್ರೀ ಅಮರೇಶ್ವರ ಗುರು ಅಭಿನವ ಗಜದಂಡ ಶಿವಾಚಾರ್ಯರು 21ನೇ ಗುರು ಪಟ್ಟಾಧಿಕಾರ ಮಹೋತ್ಸವದ ಅಂಗವಾಗಿ ಪಂಚವಟಿ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರ ಲಿಂಗಸಗೂರು ಇವರಿಂದ ಉಚಿತ ಆರೋಗ್ಯ ಹಾಗೂ ಉಚಿತ ಔಷಧಿ ವಿತರಣಾ ಕೇಂದ್ರ ಮಾಜಿ ಕೇಂದ್ರ ಸಚಿವ ಬಸವರಾಜ ಪಾಟೀಲ್ ಆನ್ವರಿ ಅವರು ಉದ್ಘಾಟಿಸಿದರು.

ಜಗದ್ಗುರು ಶ್ರೀ ಶಿವಶಕ್ತಿ ಪೀಠ ಸುಕ್ಷೇತ್ರ ಇರಕಲ್ ಮಠದ ಪೂಜ್ಯ ಶ್ರೀ ಬಸವ ಪ್ರಸಾದ ಮಹಾಸ್ವಾಮಿಗಳು ಸಾಮುಖ್ಯವನ್ನು ವಹಿಸಿಕೊಂಡು ಪಂಚವಟಿ ಆಯುರ್ವೇದ ಪಂಚಕರ್ಮ ಚಿಕಿತ್ಸಾ ಕೇಂದ್ರ ಲಿಂಗಸಗೂರಿನ ಮುಖ್ಯ ವೈದ್ಯರಾದ ಡಾ.ಪವಿತ್ರ ವಿರಕ್ತಮಠ ಹಾಗೂ ಡಾ. ಶಶಿಕಾಂತ್ ರವರ ನೇತೃತ್ವದಲ್ಲಿ ಪಾರಂಪರಿಕ ವೈದ್ಯರಾದ ವೈದ್ಯ ಸಿ ಕುಮಾರಸ್ವಾಮಿ ಹಾಗೂ ವೈದ್ಯರ ತಂಡವು ಆರೋಗ್ಯ ಸೇವೆ ಸಲ್ಲಿಸಿದರು. ಶಿಬಿರದಲ್ಲಿ ನಾಲ್ಕು ನೂರಕ್ಕೂ ಹೆಚ್ಚು ಜನ ಶಿಬಿರದ ಸದುಪಯೋಗವನ್ನು ಪಡೆದುಕೊಂಡು ವಿವಿಧ ವಾತ ರೋಗಗಳು ಕೀಲು ನೋವು ಮಂಡೆ ನೋವು ಸೇರಿದಂತೆ ಚರ್ಮರೋಗ ಮೂಲವ್ಯಾಧಿ ಹಳೆಯ ಗಾಯಗಳ ಚಿಕಿತ್ಸೆ ಸೇರಿದಂತೆ ಇನ್ನು ಹಲವಾರು ರೋಗಗಳಿಗೆ ಸುತ್ತಮುತ್ತಲಿನ ಹಾಗೂ ಗ್ರಾಮದ ಜನರು ಚಿಕಿತ್ಸೆ ಸೌಲಭ್ಯವನ್ನು ಪಡೆದುಕೊಂಡರು.
ಅಮರೇಶ್ವರ ದೇವಸ್ಥಾನದ ಮುಖ್ಯ ಅರ್ಚಕ ಗಂಗಾಧರಯ್ಯ ಸ್ವಾಮಿ ಮಾರ್ಗದರ್ಶನದಲ್ಲಿ ಶಿಬಿರವನ್ನು ಆಯೋಜಿಸಲಾಗಿತ್ತು ಈ ಸಂದರ್ಭದಲ್ಲಿ ಪಂಚವಟಿ ಮುಖ್ಯಸ್ಥ ಜಗನ್ನಾಥ್ ಚಿತ್ತಾಪುರ ಹಾಗೂ ಪಂಚಕರ್ಮ ಚಿಕಿತ್ಸೆಯ ತರಪಿಸ್ಟ್ ಫಕ್ರುದ್ದೀನ್ , ರಮೇಶ್ ಚಕ್ರಸಾಲಿ , ಮಂಜುನಾಥ್ , ವಿಶ್ವನಾಥ್ ಹಾಗೂ ಮಹಿಳಾ ತರಪಿಸ್ಟ್ ದೇವಿಕ. ನಿಂಗಮ್ಮ ಹಾಗೂ ಪಂಚವಟಿ ಆಯುರ್ವೇದ ಸಿಬ್ಬಂದಿಗಳು , ಸುತ್ತಮುತ್ತಲಿನ ಗ್ರಾಮದ ಜನರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *