ಸೊಳ್ಳೆಯಿಂದ ಹರಡುವ ಕಾಯಿಲೆಗಳಲ್ಲಿ ಮಲೇರಿಯಾವು ಗಂಭೀರವಾಗಿದ್ದು, ಈ ದಿಶೆಯಲ್ಲಿ ಕುಟುಂಬದ ಸದಸ್ಯರಲ್ಲಿ ಯಾರಿಗಾದರೂ ಜ್ವರ ಕಂಡುಬಂದಲ್ಲಿ ನಿರ್ಲಕ್ಷ್ಯ ಮಾಡದೆ, ರಕ್ತಲೇಪನ ಪರೀಕ್ಷೆ ಮಾಡಿಸಬೇಕು. ಇದರಿಂದ ಮಲೇರಿಯಾ ಸೇರಿದಂತೆ ಸೋಂಕಿತ ಸೊಳ್ಳೆಗಳ ಕಚ್ಚು ವಿಕೆಯಿಂದ ಹರಡುವ ರೋಗಗಳ ನಿಯಂತ್ರಣಕ್ಕೆ ಸಹಕಾರವಾಗುವುದು ಎಂದು ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ ಚಂದ್ರಶೇಖರಯ್ಯ ತಿಳಿಸಿದರು.

ಅವರಿಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ತಾಲೂಕಾ ಆರೋಗ್ಯಾಧಿಕಾರಿಗಳ ಮೂಲಕ ಕೃಷ್ಣಾ ನದಿ ಕೊಳ್ಳದ ಈಚನಾಳ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯ, ಹಂಚಿನಾಳ.ಯಳಗುಂದಿ. ಕಡದರಗಡ್ಡಿ. ಶೀಲಹಳ್ಳಿ. ಗೋರೆಬಾಳ, ಯರಗೊಡಿ ಗ್ರಾಮ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮಲೇರಿಯಾ ರೋಗ ನಿರ್ಮೂಲನೆಗಾಗಿ ಮನೆಯ ಒಳಗೆ, ವಾರ್ಷಿಕವಾಗಿ ಎರಡು ಬಾರಿ ಕೈಗೊಳ್ಳುವ ಕೀಟನಾಶಕ ಸಿಂಪರಣೆ ಕೈಗೊಂಡ ಚಟುವಟಿಕೆ ಕಾರ್ಯದಲ್ಲಿ ಖುದ್ದು ಭಾಗಿಯಾಗಿ, ಜನತೆಗೆ ಮಾಹಿತಿ ನೀಡುತ್ತಾ, ಎಲ್ಲರ ಪರಿಶ್ರಮದಿಂದ ನಮ್ಮ ತಾಲೂಕಿನ ಕೃಷ್ಣಾ ನದಿಯ ತೀರ ಪ್ರದೇಶದಲ್ಲಿ ನಿರಂತರವಾಗಿ ಜಿಲ್ಲಾ ಎನ್‌ವಿಬಿಡಿಸಿಪಿ ಮಾರ್ಗದರ್ಶನದಲ್ಲಿ ನಿಗಾವಹಿಸಿ ನಿಯಂತ್ರಣ ಮಾಡಲಾಗಿದೆ. ದಯವಿಟ್ಟು ಮನೆಯ ಸುತ್ತಲಿನ ಜಾಗಗಳಲ್ಲಿ ಶಾಶ್ವತ ನೀರು ನಿಲ್ಲುವ ಸ್ಥಳಗಳಿದ್ದರೆ, ನೀರು ನಿಲ್ಲಿಸದಂತೆ ವಿನಂತಿಸಿದರು. ತಾಲ್ಲೂಕು ಆರೋಗ್ಯಾಧಿಕಾರಿ ಡಾ ಅಮರೇಶ ಪಾಟೀಲ್ ಮಾತನಾಡಿ ಮಲೇರಿಯಾ ಹರಡುವ ಅನಾಪೀಲಿಸ್‌ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರ್ತಿಸಲಾಗುತ್ತಿದ್ದು, ನಿವಾರಣೆಗೆ ಜನರ ಸಹಕಾರ ಹಾಗೂ ಕೀಟ ನಾಶಕ ಸಿಂಪರಣೆಗೆ ಸಾರ್ವಜನಿಕರು ಬೆಂಬಲ ನೀಡುತ್ತಿದ್ದು ದಯವಿಟ್ಟು ಮನೆಯ ಪ್ರತಿ ಭಾಗದಲ್ಲಿ ಸಿಂಪರಣೆ ಮಾಡಿಸಿ, ಮಲೇರಿಯಾ ಜ್ವರ ಹರಡುವ ಹೆಣ್ಣು ಅನಾಫಿಲೀಸ್ ಸೊಳ್ಳೆಯ ನಿರ್ಮೂಲನೆಗೆ ಕೈಜೊಡಿಸಲು ತಿಳಿಸಿದರು.

ಮಲೇರಿಯಾ ರೋಗ ಲಕ್ಷಣಗಳು :

ಚಳಿ, ನಡುಕ, ಬಿಟ್ಟು ಬಿಟ್ಟು ಜ್ವರ ಬರುವುದು, ವಾಕರಿಕೆ, ಮೈ ಬೆವರುವುದು ಲಕ್ಷಣಗಳಾಗಿವೆ.
ಈ ಲಕ್ಷಣಗಳು ಕಂಡು ಬಂದಲ್ಲಿ ಮಲೇರಿಯಾ ಜ್ವರ ಇರಬಹುದು ಎಂದು ಭಾವಿಸಿ ಹತ್ತಿರದ ಸರ್ಕಾರಿ ಆಸ್ಪತ್ರೆಯಲ್ಲಿ ರಕ್ತ ಲೆಪನ ಪರೀಕ್ಷೆಗೆ ಒಳಪಟ್ಟು ಖಚಿತಪಟ್ಟಲ್ಲಿ ಸೂಕ್ತ ಉಚಿತ ಚಿಕಿತ್ಸೆ ಪಡೆದು ಗುಣ ಹೊಂದಬಹುದಾಗಿದೆ ಎಂದು ಹೇಳಿದರು. ಈ ಸಂದರ್ಭದಲ್ಲಿ ಈಚನಾಳ ಪ್ರಾ. ಆ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ ಹನುಮಂತರಾಯ ತಳ್ಳಳ್ಳಿ, ಡಾ: ರಾಜೇಶ್ವರಿ . ಉಪ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಪ್ರಾಣೇಶ್‌ ಜೋಶಿ ಹಿರಿಯ ಆರೋಗ್ಯ ನೀರಿಕ್ಷಣಾಧಿಕಾರಿ ಕರಿಬಸಪ್ಪ, ಶರಣಬಸವ ಪಾಟೀಲ್‌, ಬಸವರಾಜ್‌, ಹೇಮಂತರಾಜ್ ಇವರು ಮನೆ ಮನೆ ಭೇಟಿ ನೀಡಿ ಮತ್ತು ಸಾರ್ವಜನಿಕರ ಗುಂಪು ಸಭೆ ಮೂಲಕ ಕೀಟನಾಶಕ ಲ್ಯಾಂಬ್ಡಾ ಸೈಲೋಥ್ರಿನ್ ತಪ್ಪದೇ ಎಲ್ಲ ಮನೆಗಳು ಹಾಗೂ ಪ್ರತಿಯೊಂದು ಕೋಣೆಗಳಿಗೂ ಒಳಾಂಗಣ ಸಿಂಪರಣೆ ಮಾಡಿಸುವ ಕುರಿತು ಆರೋಗ್ಯ ಶಿಕ್ಷಣ ಮಾಹಿತಿ ನೀಡಿದರು. ಎಲ್‌ಟಿಓ ಅಡಿವೆಪ್ಪ, ಆರೋಗ್ಯ ನೀರಿಕ್ಷಣಾಧಿಕಾರಿ ಅಮರೇಶ್‌, ಜಗದೀಶ್‌, ಅಲಿ, ಶಿವಕುಮಾರ್, ಸಿದ್ದಯ್ಯ, ಕರಣ್. ಕಾಸೀಂಅಲಿ , ಮಹೇಶ, ಅಲಂಪಾಶಾ , ಹಸೇನಪ್ಪ , ರಾಜಾ ರಾಮ್ ಸಿಂಗ್ , ಕಿರಣ , ಶರಣಬಸವ ಪಿಹೆಚ್‌ಸಿಓ ರಾಧಾ, ಹುಲಿಗೆಮ್ಮ, ಮಲ್ಲಮ್ಮ, ಅಂಬಮ್ಮ ಸೇರಿದಂತೆ ಗ್ರಾಮ ಪಂಚಾಯತ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹಾಜರಿದ್ದರು .

Leave a Reply

Your email address will not be published. Required fields are marked *