ಮಾನ್ವಿ : ಸಿಂದನೂರು ನಗರದ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ ಜಿಲ್ಲಾ ಮತ್ತು ತಾಲೂಕು ಘಟಕಗಳ ನೂತನ ಪದಾಧಿಕಾರಿಗಳ ಪದಗ್ರಹಣ ಹಾಗೂ ಸನ್ಮಾನ ಸಮಾರಂಭವು ಯಶಸ್ವಿಯಾಗಿ ಜರುಗಿತು.
ಮಾನ್ವಿ ತಾಲೂಕ ಯುವ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ಆಂಜನೇಯ್ಯ ಸುಂಕೇಶ್ವರ ಪದಗ್ರಹಣ ಸ್ವೀಕರಿಸಿದರು.
ನಂತರ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರಾದ ಅರ್ಜುನ್ ಗೋಳಸಂಗಿ ಅವರು ಮಾತನಾಡಿ ದೇಶದಲ್ಲಿ ಅಸ್ಪೃಶ್ಯತೆಯ ನಿರ್ಮೂಲನೆ ಮತ್ತು ಸಾಮಾಜಿಕ ಸಮಾನತೆ ಯ ಅಗತ್ಯತೆಯನ್ನು ಬಲವಾಗಿ ಪ್ರತಿಪಾದಿಸಿದರು. ಸ್ವಾತಂತ್ರ್ಯ ಬಂದು 80 ವರ್ಷ ಸನಿಹದಲ್ಲಿದ್ದರೂ ಬದಲಾಗದ ವ್ಯವಸ್ಥೆ ಸೃಷ್ಟಿಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪದಾಧಿಕಾರಿಗಳಿಗೆ ಪದಗ್ರಹಣ ಮತ್ತು ಗೌರವ ಸನ್ಮಾನದ ಮೂಲಕ ಅಧಿಕಾರ ಹಸ್ತಾಂತರಿಸಿಲಾಯಿತು. ಇದೇ ಸಂದರ್ಭದಲ್ಲಿ ಸಂಘಟನೆ ಹಾಗೂ ಸಮಾಜದ ಪ್ರಮುಖರಾದ ಸಿಂದನೂರಿನ ಹಿರಿಯ ಪತ್ರಕರ್ತ ಡಿ.ಎಸ್.ಕಂಬಳಿ, ರಾಮಣ್ಣ ಸಿಂದನೂರು, ಲಕ್ಷ್ಮಣ ಜಾನೇಕಲ್ ಸೇರಿದಂತೆ ಹಲವು ಗಣ್ಯರನ್ನು ಅತ್ಯಂತ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಸಮಾರಂಭದಲ್ಲಿ ಎಚ್.ಎಫ್. ಸಂಯೋಜಕರು , ಕಲ್ಬುರ್ಗಿ ವಿಭಾಗ, ಹುಸೇನಪ್ಪ ಅಮರಪುರ ಜಿಲ್ಲಾಧ್ಯಕ್ಷರು ದಲಿತ ಸಾಹಿತ್ಯ ಪರಿಷತ್ ರಾಯಚೂರು, ರಾಘವೇಂದ್ರ ಚೌಡ್ಕಿ ಜಿಲ್ಲಾ ಉಪಾಧ್ಯಕ್ಷರು ದಲಿತ ಸಾಹಿತ್ಯ ಪರಿಷತ್ ರಾಯಚೂರು, ಸನ್ಮಾನಿತರಾದ ಕರಿಗೂಳಿ ಸಹಾಯಕ ಪ್ರಾಧ್ಯಾಪಕರು ಹಾಗೂ ಹಿರಿಯ ಚಿಂತಕರು ಗಂಗಾವತಿ, ತಾಲೂಕು ಪ್ರಮುಖ ಮುಖಂಡರು,ಅಮರೇಶ ವೆಂಕಟಾಪುರ, ಸುರೇಶ ಮಾಚನೂರು,ಸುಭಾಷ್ ಚಿಂಚರಕಿ ಪತ್ರಕರ್ತರು, ಮಲ್ಲಿಕಾರ್ಜುನ ಕಡರ್ಚು, ಚನ್ನಬಸಪ್ಪ ಯಲಘಟ್ಟ ಪತ್ರಕರ್ತರು, ಬಾಬು ಹಟ್ಟಿ ಹಾಗೂ ರಾಯಚೂರು ಜಿಲ್ಲೆಯ ವಿವಿಧ ತಾಲೂಕುಗಳಿಂದ ಆಗಮಿಸಿದ ನೂರಾರು ಸಾಹಿತ್ಯಾಸಕ್ತರು, ದಲಿತ ಸಂಘಟನೆಯ ಪದಾಧಿಕಾರಿಗಳು ಹಾಗೂ ಚಿಂತಕರು ದಲಿತ ಸಾಹಿತ್ಯ ಪರಿಷತ್ ಪ್ರಮುಖ ನಾಯಕರು, ಪದಾಧಿಕಾರಿಗಳು ಹಾಗೂ ವಿವಿಧ ಪಕ್ಷಗಳ ಮುಖಂಡರು ಭಾಗವಹಿಸಿದ್ದರು.

