ಪುರಸಭೆ ವ್ಯಾಪ್ತಿಯ ವಾರ್ಡ್ ನಂ. 05 ರ ಆಸ್ತಿ ಸಂಖ್ಯೆ: 2-6-205 ಸಂಬಂಧಿಸಿದ ಸಿವಿಲ್ ಪ್ರಕರಣ ಕುರಿತು ಹಿರಿಯ ಆರೋಗ್ಯ ನಿರೀಕ್ಷ ಶಹನವಾಜ, ಮತ್ತು ದ್ವಿ.ದ.ಸ ಹಾಗೂ ಈ ಸಂಘದ ಅಧ್ಯಕ್ಷ ಪುರಸಭೆ ಮುಖ್ಯಧಿಕಾರಿಗೆ ಠಾಣೆಗೆ ಕರೆಯಿಸಿ ನಮ್ಮ ಸ್ಪಷ್ಟಿಕರಣವನ್ನು ಕೇಳದೇ ಈ ಪ್ರಕಣದಲ್ಲಿ ರಾಜಿಯಾಗದಿದ್ದಲ್ಲಿ, ನಿಮ್ಮನ್ನು ಒದ್ದು ಒಳಗೆ ಹಾಕುತ್ತೇನೆಂದು ಭಯ ಹುಟ್ಟಿಸಿರುತ್ತಾರೆಂದು ಕರ್ನಾಟಕ ರಾಜ್ಯ ಪೌರಾ ಸೇವಾ ನೌಕರರ ಸೇವಾ ಸಂಘ ದ ಸಂಘಟನಾ ಕಾರ್ಯದರ್ಶಿ ಹಂಪಯ್ಯ ಪಾಟೀಲ್ ಸಹಾಯಕ ಆಯುಕ್ತರಿಗೆ ಮನವಿ ಸಲ್ಲಿಸಿ ನಂತರ ಮಾತನಾಡಿದ ಅವರು
ಇಲಾಖೆಯಿಂದ ಅಧಿಕೃತ ಅನುಮತಿ ಪಡೆಯದೇ ಮತ್ತು ದಾಖಲೆಗಳನ್ನು ಪರಿಶೀಲಿಸದೇ ದೂರು ದಾರರ ಪರವಾಗಿ ಏಕ ಪಕ್ಷೀಯವಾಗಿ, ಸರ್ವೋಚ್ಚ ನ್ಯಾಯಾಲಯ ಮತ್ತು ಉಚ್ಚ ನ್ಯಾಯಾಲಯದ ಆದೇಶಗಳನ್ನು ಉಲ್ಲಂಘಿಸಿ ತಮ್ಮ ಮೇಲೆ ಮತ್ತು ಇತರ ಸಿಬ್ಬಂದಿಗಳ ಮೇಲೆ ಎಫ್ ಐ ಆರ್ ದಾಖಲಾಗಿದ್ದು ಕರ್ತವ್ಯ ನಿರ್ವಹಿಸಲು ಬಯವಾಗುತ್ತಿದೆ
ಪುರಸಭೆಯಲ್ಲಿ ಆಸ್ತಿಗೆ ಸಂಬಂದ ಪಟ್ಟಂತೆ ಹಲವಾರು ಸಿವಿಲ್ ಪ್ರಕರಣಗಳು ಇರುತ್ತವೆ. ನಾಳೇ ಸಾರ್ವಜನಿಕರು ಪ್ರಕರಣದ ಆಧಾರದ ಮೇಲೆ ದೂರು ನೀಡಿದಂತೆ ಸ್ಥಳೀಯ ಪೋಲಿಸ್ ಇನ್ಸ್ಪೆಕ್ಟರ್ ಏಕ ಪಕ್ಷೀಯವಾಗಿ ಪ್ರಕರಣ ದಾಖಲಿಸುತ್ತಾ ಹೊದರೇ ಪುರಸಭೆಯಲ್ಲಿ ನೌಕರಿ ಮಾಡುವುದು ಕಷ್ಟ ವಾಗುತ್ತದೆ. ಕಾನೂನು ಸುವ್ಯವಸ್ಥೆ ಕಾಪಡುವವರೇ ಕಾನೂನು ಉಲ್ಲಂಘಿಸಿ, ಕಾನೂನು ಸುವ್ಯವಸ್ಥೆ ಹಾಳಮಾಡುವ ಹೊಣೆಗಾರಿಕೆ ಕಾರಣರಾಗಿದ್ದಾರೆ ಒಂದು ವೇಳೆ ಇದೆ ರೀತಿಯಾಗಿ ಸಿವಿಲ್ ಪ್ರಕರಣದಲ್ಲಿ ಪುರಸಬೆ ಯಿಂದ ಸ್ಪಷ್ಟಿಕರಣ ಕೇಳದೆ ಏಕ ಪಕ್ಷಿಯವಾಗಿ ಪ್ರಕರಣ ದಾಖಲಿಸಿದ್ದಲ್ಲಿ ಪುರಸಭೆ ಯಿಂದ ಸಾರ್ವಜನಿಕರಿಗೆ ನೀಡುವ ಎಲ್ಲಾ ಸೇವೆಗಳನ್ನು ಬಂದ್ ಮಾಡಿ ಹೋರಾಟವನ್ನು ಹಮ್ಮಿಕೊಳ್ಳಲಾಗುವುದೆಂದು ಈ ವಿಷಯವನ್ನು ಗಂಭೀರವಾಗಿ ಪರಿಗೀಣಿಸಿ ಸದರಿ ಪ್ರಕರಣದ ವರದಿಯನ್ನು ಇಲಾಖೆಯ ಉನ್ನತ ಅಧಿಕಾರಿಗಳಾದ ಜಿಲ್ಲಾಧಿಕಾರಿಗಳಿಗೆ ಮತ್ತು ಪ್ರಾದೇಶಿಕ ಆಯುಕ್ತರು, ಕಲಬುರಗಿ ಹಾಗೂ ಸುಪ್ರೀಡೆಂಟ್ ಆಫ್ ಪೋಲಿಸ್ ರಾಯಚೂರು ಇವರಿಗೆ ವರದಿಯನ್ನು ಸಲ್ಲಿಸಿ ಸುಳ್ಳು ಪ್ರಕರಣ ದಾಖಲಿಸಿರುವ ಸ್ಥಳೀಯ ಪೋಲಿಸ್ ಠಾಣೆಯ ಪೋಲಿಸ್ ಇನ್ಸಪೇಕ್ಟರ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳ ಬೇಕೆಂದು ಮನವಿಯ ಮೂಲಕ ಒತ್ತಾಯಿಸಿದರು . ಈ ಸಂದರ್ಭದಲ್ಲಿ ಪುರಸಭೆಯ ಮುಖ್ಯಧಿಕಾರಿ ನಟರಾಜ್,
ಶಿವಲಿಂಗ ಮ್ಯಾಗಳ ಮನಿ , ಅಶೋಕ್ , ಶಾನವಾಜ್ , ರಮೇಶ್ , ಮಾನಪ್ಪ , ವೀರೇಶ್ , ಮಂಜುನಾಥ್ , ಜಾಗೀರ್ , ಗಿರಿಜಾ , ಸುವರ್ಣ , ಅಶ್ವಿನಿ , ಮಲ್ಲೇಶ್ , ಭಾಗ್ಯಜ್ಯೋತಿ ಸೇರಿದಂತೆ ಪುರಸಭೆಯ ಎಲ್ಲ ಸಿಬ್ಬಂದಿಗಳು ಹಾಗೂ ಪೌರಾ ಕಾರ್ಮಿಕರು ಇದ್ದರು .

