ಸಿಂಧನೂರು ಜುಲೈ 08: ಜಿಲ್ಲಾ ಆಡಳಿತ ಜಿಲ್ಲಾ ಪಂಚಾಯತ ರಾಯಚೂರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಿಂಧನೂರು ಆರೋಗ್ಯ ಮತ್ತು ಕ್ಷೇಮ ಮಂದಿರ ಗೌಡನ ಬಾವಿ ಇವರ ಸಂಯುಕ್ತ ಆಶ್ರಯದಲ್ಲಿ ಆರಂಭಿಕ ಬಾಲ್ಯದ ಆರೈಕೆ ಮತ್ತು ಆರೋಗ್ಯ ಶಿಕ್ಷಣ ದಿನಾಚರಣೆ ಕುರಿತು ಅಂಗನವಾಡಿ ಕೇಂದ್ರದಲ್ಲಿ ತಾಯಿಂದಿರಿಗೆ ಜಾಗೃತಿ ಮೂಡಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ತಾಯಿಂದಿರಿಗೆ ಆರೋಗ್ಯ ಆರೈಕೆ ಮತ್ತು ಪೋಷಣೆ ಕುರಿತು ಮಾತನಾಡಿದರು ಬಾಲ್ಯಾವಸ್ಥೆಯಲ್ಲಿ ಮಕ್ಕಳಿಗೆ ಬರಬಹುದಾದ ಖಾಯಿಲೆಗಳನ್ನು ತಡೆಯಬಹುದಾಗಿದೆ ಅದನ್ನು ತೆಡೆಗಟ್ಟಲು ಮಕ್ಕಳಿಗೆ ಬ್ಯಾಲ್ಯದಲ್ಲಿ ತಪ್ಪದೇ ಹಾಕಿಸಿ ಹಾಗೂ ಮಕ್ಕಳ ಬೆಳವಣಿಗೆ ಆರು ತಿಂಗಳ ತಪ್ಪದೇ ಎದೇ ಹಾಲು ಕೂಡಬೇಕು ನಂತರದ ದಿನಗಳಲ್ಲಿ ಲಘುವಾದ ದ್ರವರೂಪದ ಆಹಾರ ಕೊಡಬೇಕು ಮಕ್ಕಳ ದೈಹಿಕ ಮಾನಸಿಕ ಆರೋಗ್ಯದ ಬೆಳವಣಿಗೆ ತಾಯಿಯ ಪ್ರೀತಿ ಮತ್ತು ಕಾಳಜಿ ಮಹತ್ವ ಪಡೆದಿದೆ ಎಂದರು.
ನಂತರ ಮಾತನಾಡಿದ ಸರಕಾರಿ ಪ್ರೌಢಶಾಲೆ ಮುಖ್ಯ ಗುರುಗಳಾದ ನಂದೀಶ ಎಚ್ ಅವರು ಬೆಳೆಯುವ ಸಿರಿ ಮೊಳಕೆಯಲ್ಲಿ ಎಂಬಂತೆ ಮಕ್ಕಳ ಆರೋಗ್ಯದ ಬಗ್ಗೆ ಬಾಲ್ಯಾವಸ್ಥೆಯಲ್ಲಿ ಜಾಗೃತಿ ವಹಿಸಬೇಕು ಮಕ್ಕಳ ಬಾಲ್ಯದಲ್ಲಿ ಬೆಳವಣಿಗೆ ಉತ್ತಮ ಪೌಷ್ಟಿಕ ಆಹಾರವನ್ನು ಕೊಡಬೇಕು ಮಕ್ಕಳು ಚಟುವಟಿಕೆಯಿಂದ ಅವರಿಗೆ ಅಕ್ಷರ ಜ್ಞಾನವನ್ನು ಮಾಡಿಸುವುದು ಮುಖ್ಯವಾಗಿದೆ ಎಂದರು.
ನಂತರ ಅಂಗನವಾಡಿ ಶಾಲಾ ಮಕ್ಕಳಿಂದ ಅಕ್ಷರ ದಾಸೋಹ ಕಾರ್ಯಕ್ರಮ ಹಾಗೂ ನೃತ್ಯ ಪ್ರದರ್ಶನ ನೀಡಿದರು ವಿದ್ಯಾರ್ಥಿಗಳು ಅಂಗನವಾಡಿ ಕಾರ್ಯಕರ್ತೆಯಾದ ಸರಸ್ವತಿ ಮಕ್ಕಳಿಂದ ಪ್ರದರ್ಶನವನ್ನು ಏರ್ಪಡಿಸಲಾಗಿತ್ತು.
ಈ ಸಂದರ್ಭದಲ್ಲಿ ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಪಾರ್ವತಿ. ಸಮುದಾಯ ಆರೋಗ್ಯ ಅಧಿಕಾರಿಗಳಾದ ಶೋಭಾ ಮಕ್ಕಳ ತಾಯಿಂದಿರು ಉಪಸ್ಥಿತರಿದ್ದರು.

