ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ಇವರ ಆದೇಶದ ಪ್ರಕಾರ ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ತೆರದ ನ್ಯಾಯಾಲಯದಲ್ಲಿ ಜುಲೈ 11 ರಂದು ರಾಷ್ಟ್ರೀಯ ಲೋಕಾ ಅದಾಲತ್ ಹಮ್ಮಿಕೊಳ್ಳಲಾಗಿದೆ. ರಾಜಿ ಸಂಧಾನದ ಮೂಲಕ ವ್ಯಾಜ್ಯಗಳ ಇತ್ಯರ್ಥಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸೋಮಶೇಖರ ಎ, ಹೇಳಿದರು.
ನಗರದ ತಾಲೂಕು ನ್ಯಾಯಾಲಯದಲ್ಲಿ ಮಂಗಳವಾರ ಸಾಯಂಕಾಲ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜೀ ಮಾಡಿಕೊಳ್ಳಬಹುದಾದ ಸಿವಿಲ್ ಮತ್ತು ಕ್ರಿಮಿನಲ್ ಪ್ರಕರಣ, ಸಂಚಾರ ನಿಯಮ ಉಲ್ಲಂಘನೆ ಪ್ರಕರಣ, ಬ್ಯಾಂಕ್ ಸಾಲ ಮರುಪಾವತಿ ಮತ್ತು ಹಣಕಾಸು ವಿವಾದಗಳು, ಕೌಟುಂಬಿಕ ವ್ಯಾಜ್ಯಗಳು ಮತ್ತು ವಿವಾಹ ವಿಚ್ಛೇದನ ಪ್ರಕರಣಗಳು, ಭೂಸ್ವಾಧೀನ ಮತ್ತು ಕಾರ್ಮಿಕ ವಿವಾದಗಳು, ಮೋಟಾರು ಅಪಘಾತ ಪರಿಹಾರ ಮತ್ತು ವಿಮೆ ವಿವಾದಗಳು, ವಿದ್ಯುತ್ ಚ್ಚಕ್ತಿ, ಕಂದಾಯ ವಸೂಲಿ, ನೀರಿನ ವಸೂಲಾತಿ, ಪ್ರಕರಣಗಳನ್ನು ರಾಜೀ ಸಂಧಾನದ ಮೂಲಕ ಕಕ್ಷಿದಾರರು ಲೋಕ ಅದಾಲತ್ನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಕಕ್ಷಿದಾರರ ಸಮಯ ಮತ್ತು ಹಣ ಎರಡೂ ಉಳಿಯುತ್ತದೆ. ಪ್ರಕರಣದ ಇತ್ಯಾರ್ಥಕ್ಕೆ ಯಾವುದೇ ಶುಲ್ಕ ಇರುವುದಿಲ್ಲ. ಕಕ್ಷಿದಾರರ ನಡುವೆ ಯಾವುದೇ ವೈಮನಸ್ಸಿಗೆ ಅವಕಾಶವಿಲ್ಲದೆ, ಪರಸ್ಪರ ಒಪ್ಪಿಗೆಯಿಂದ ವಿವಾದ ಬಗೆಹರಿಯುವುದರಿಂದ ಸಂಬಂಧಗಳು ಗಟ್ಟಿಯಾಗಿ ಉಳಿಯುತ್ತವೆ. ಕಕ್ಷಿದಾರರು ತಮ್ಮ ದೀರ್ಘಕಾಲದ ವಿವಾದಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬಹುದು ಎಂದರು.
ಈ ಸಂದರ್ಭದಲ್ಲಿ: ಪ್ರಧಾನ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ರೂಪಾ ಸಿ.ವಗ್ಗಾ 1ನೇ ಅಪಾರ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರಾದ ಸರಸ್ವತಿ ಹೋಟಕರ್, ನ್ಯಾಯವಾದಿಗಳ ಸಂಘದ ತಾಲೂಕು ಅಧ್ಯಕ್ಷ ಕೆ.ಭೀಮನಗೌಡ ವಕೀಲರು, ಸೇರಿದಂತೆ ಹಿರಿಯ ಮತ್ತು ಕಿರಿಯ ವಕೀಲರು ಇದ್ದರು.
