ಕವಿತಾಳ: ಇಲ್ಲಿನ ಮಸ್ಕಿ ಕ್ರಾಸ್ ಬಳಿ ಜುಲೈ 14ರಂದು ಸಂಜೆ 4 ಗಂಟೆಗೆ ಕೆ.ಎಸ್.ಎನ್. ಜನ ಕಲ್ಯಾಣ ಸಮಿತಿ ವತಿಯಿಂದ *’ಸಂಕಲ್ಪ ಸಮಾಗಮ’* ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ತಿಳಿಸಿದೆ. ಕೆ.ಎಸ್.ಎನ್. ಅವರ 49ನೇ ಹುಟ್ಟುಹಬ್ಬದ ಆಚರಣೆಯ ಅಂಗವಾಗಿ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ನಾಲ್ಕು ಜಿಲ್ಲೆಗಳ ರೈತರ ಬಹುದಿನಗಳ ಕನಸಾದ ಸಮಗ್ರ ನೀರಾವರಿ ಯೋಜನೆಗಳ ಅನುಷ್ಠಾನ ಹಾಗೂ ರಾಯಚೂರಿಗೆ ಏಮ್ಸ್ (AIIMS) ಮಂಜೂರಾತಿಗಾಗಿ ಒತ್ತಾಯಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಪ್ರಮುಖ ಬೇಡಿಕೆಗಳು:

ನವಲಿ ಜಲಾಶಯ ನಿರ್ಮಾಣ:* ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳ ರೈತರಿಗೆ ಅನುಕೂಲವಾಗುವಂತೆ ನವಲಿ ಜಲಾಶಯವನ್ನು ತಕ್ಷಣ ನಿರ್ಮಿಸಬೇಕು.
*ತಿಂಥಣಿ ಬ್ರಿಡ್ಜ್ ಜಲಾಶಯ:* ಯಾದಗಿರಿ, ಗುಲ್ಬರ್ಗ (ಕಲಬುರಗಿ) ಮತ್ತು ರಾಯಚೂರು ಜಿಲ್ಲೆಗಳ ಜನರಿಗೆ ಅನುಕೂಲವಾಗುವಂತೆ ತಿಂಥಣಿ ಬ್ರಿಡ್ಜ್ ಬಳಿ ಜಲಾಶಯ ನಿರ್ಮಾಣ ಮಾಡಬೇಕು. ಈ ಯೋಜನೆಗಳಿಗಾಗಿ ರಾಜ್ಯ ಸರ್ಕಾರಕ್ಕೆ ಒತ್ತಾಯ ಮಾಡಲಾಗುವುದು.
ರಾಯಚೂರಿಗೆ ಏಮ್ಸ್ (AIIMS):* ಹಿಂದುಳಿದ ರಾಯಚೂರು ಜಿಲ್ಲೆಗೆ ಏಮ್ಸ್ ಸಂಸ್ಥೆಯನ್ನು ಮಂಜೂರು ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲು ಈ ಕಾರ್ಯಕ್ರಮದ ಮೂಲಕ ಸಂಕಲ್ಪ ಮಾಡಲಾಗುತ್ತಿದೆ. ಇದು ಸಂಪೂರ್ಣವಾಗಿ ಪಕ್ಷಾತೀತವಾಗಿ ನಡೆಯುತ್ತಿರುವ ಕಾರ್ಯಕ್ರಮವಾಗಿದೆ.

# ದಿವ್ಯ ಸನ್ನಿಧಿ ಮತ್ತು ಉದ್ಘಾಟನೆ:
ಈ ಬೃಹತ್ ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕಮಗಳೂರಿನ ಶ್ರೀ ಗೌರಿಗದ್ದೆ ಆಶ್ರಮದ ಅವಧೂತ *ಶ್ರೀ ವಿನಯ ಗುರೂಜಿ* ಅವರು ನೆರವೇರಿಸಲಿದ್ದಾರೆ. ತುರವಿಹಾಳದ ಅಮೋಘಸಿದ್ದೇಶ್ವರ ಮಠದ *ಶ್ರೀ ಮಾದಯ್ಯ ಗುರುಗಳು* ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ಘನ ಉಪಸ್ಥಿತಿಯಲ್ಲಿ ಕವಿತಾಳ ಕಲ್ಮಠ ಮಹಾಸಾಸ್ವಾಮಿಗಳಾದ *ಮ.ನಿ.ಪ್ರ ಅಬಿನವ ಸಿದ್ದಲಿಂಗ ಸ್ವಾಮಿಗಳು* ಹಾಗೂ ಮುಂಡರಗಿಯ *ಶಿವಣ್ಣ ತಾತನವರು* ಪಾಲ್ಗೊಳ್ಳಲಿದ್ದಾರೆ.

ರಾಯಚೂರು, ಕೊಪ್ಪಳ, ಯಾದಗಿರಿ ಮತ್ತು ಗುಲ್ಬರ್ಗ ಜಿಲ್ಲೆಗಳಿಂದ ಸುಮಾರು 20 ಸಾವಿರಕ್ಕೂ ಅಧಿಕ ಸಾರ್ವಜನಿಕರು ಹಾಗೂ ರೈತರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ನಿರೀಕ್ಷೆಯಿದೆ.

ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದವರು:
ಕೆ.ಎಸ್.ಎನ್ ಜನ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ತಿಮ್ಮರೆಡ್ಡಿ ಗೌಡ ಭೋಗವತಿ, ಮಲ್ಲನಗೌಡ ನಕ್ಕುಂದಿ, ಉಮಕಾಂತ್ ಸಾಹುಕಾರ್ ಸೇಕಲ್, ನರಸಿಂಹರಾವ್ ಕುಲಕರ್ಣಿ, ಮಲ್ಲಿಕಾರ್ಜುನ ಜಕಲದಿನ್ನಿ, ಉಮೇಶ್ ಸಾಹುಕಾರ್ ಜೀಗರಕಲ್, ವೀರನಗೌಡ ಗಣದಿನ್ನಿ, ರಾಜಗೋಪಾಲ್ ನಾಯಕ್ ಕುರುಕುಂದ, ವಿನಯ್ ಕುಮಾರ್ ಸಿರವಾರ, ನಾಗರಾಜ್ ಗೌಡ ಮಾಲಿ ಪಾಟೀಲ್, ಮೌಲಾಸಾಬ ಗಣದಿನ್ನಿ, ಪರ್ವತಪ್ಪ ಸಾಹುಕಾರ್ ಕಲ್ಲೂರು, ಮಹೇಶ್ ಕಲ್ಲೂರು, ಪಂಪನಗೌಡ ಶಾಖಾಪುರ, ಬಸವರಾಜ ಅತ್ತನೂರು, ಮಲ್ಲಿಕಾರ್ಜುನ್ ಗೌಡ, ಅಮರಯ್ಯ ಸ್ವಾಮಿ, ವೀರೇಶ್ ನಾಯಕ್ ಬೆಟ್ಟದೂರು, ನಾಗಲಿಂಗಯ್ಯ ಸ್ವಾಮಿ ಹಾಗೂ ದೇವದುರ್ಗ ತಾಲೂಕು ಅಧ್ಯಕ್ಷರಾದ ಜಹೀರ್ ಪಾಷಾ ಇಡಪನೂರು, ಶರಣಪ್ಪ ಸಾಹುಕಾರ್ ಹೆಗ್ಗಡದಿನ್ನಿ, ಶರಣಬಸವ ನಾಯಕ್ ಜಾನೇಕಲ್, ಬಸವರಾಜ ನಕ್ಕುಂದಿ, ರಾಹುಲ್ ಕಲ್ಲಂಗರ್, ನವೀನ್ ಕುಮಾರ್, ಚಂದ್ರಶೇಖರ್ ನಾಯಕ್, ಮಾಲಿಂಗರಾಯ ಪಾತಪುರ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *