ಬಳ್ಳಾರಿ / ಕಂಪ್ಲಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಬೆಂಗಳೂರಿನ ಆಹಾರ ಮತ್ತು ನಾಗರೀಕ ನಿಗಮ ನಿಯಮಿತ
ವ್ಯವಸ್ಥಾಪಕ ನಿರ್ದೇಶಕರಾದ ಜಗದೀಶ್ ಎಂ ಕೆ ರವರನ್ನು ಭೇಟಿಯಾದ ರಾಜ್ಯ ಕಾರ್ಯಾಧ್ಯಕ್ಷರಾದ
ಬಿ ವಿ ಗೌಡ ಮಾತನಾಡಿ,
ರಾಜ್ಯದಲ್ಲಿ ಮುಂಗಾರು ಹಿಂಗಾರು ಮತ್ತು ಜೋಳವನ್ನು ರೈತರಿಂದ ಖರೀದಿ ಮಾಡಿ 4 ತಿಂಗಳು ಕಳೆದರು, ಕೆಲ ರೈತರಿಗೆ ಮುಂಗಾರು ಜೋಳದ ಹಣ ಪಾವತಿ ಅಗಿದು ಬಿಟ್ಟರೆ, 75% ರೈತರಿಗೆ ಇನ್ನು ಹಣ ಪಾವತಿ ಆಗಿರುವುದಿಲ್ಲ, ರೈತ ಜೋಳ ಬೆಳೆದು ಜನವರಿಯಲ್ಲಿ ಕಟ್ಟವು ಮಾಡಿ ಅನೇಕ ಬಾರಿ ಹೊರಟ ಮಾಡಿದ ನಂತರ ಜೋಳ ಖರೀದಿ ಮಾಡಿ ಇಲ್ಲಿಯ ವರೆಗು ಕೂಡ ಹಣ ಪಾವತಿಯಾಗಿಲ್ಲ ರೈತ ಬರುವ ಹಣವೆಲ್ಲ ಬಡ್ಡಿ ಕಟುವಂತಾಗಿ ಸಾಲದ ಸೂಳಿಗೆ ಸಿಲುಕಿಸುತ್ತಿರವುದು ಎಷ್ಟು ಸರಿ ಕಳೆದ ವರ್ಷ ಅತಿ ಹೆಚ್ಚು ಮಳೆಯಿಂದಾಗಿ ನಷ್ಟ ಅನುಭವಿಸಿದ್ದು ಕಣ್ಣ ಮುಂದೆ ಇರುವಾಗ ಸಾಲ ಸುಲ ಮಾಡಿ ಮುಂಗಾರು ಬಿತ್ತನೆ ಮಾಡಿದ ಬೆಳೆಯಲ್ಲ ಮಳೆಯಿಲ್ಲದೆ ಒಣಗಿ ಹೋಗಿ ನಷ್ಟ ಅನುಭವಿಸಿದ್ದು ಕಾಣುತ್ತದೆ, ಇಂತಾ ಪರಸ್ಥಿತಿಯಲ್ಲಿ ಸರ್ಕಾರ ಖರೀದಿ ಮಾಡಿದ ಜೋಳದ ಹಣವನ್ನು ಕೂಡಲೆ ರೈತರ ಖಾತೆಗೆ ಜಮಾ ಮಾಡಲು ವಿನಂತಿಸಲಾಗಿದೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ರಾಜ್ಯ ಪ್ರಧಾನಕಾರ್ಯದರ್ಶಿಗಳಾದ
ಮಲ್ಲಣಗೌಡ ಪಾಟೀಲ್,
ಬಸವರಾಜ ಗೋಡಿಹಾಳ ಸೇರಿದಂತೆ ಇತರರಿದ್ದರು.

Leave a Reply

Your email address will not be published. Required fields are marked *