ಜಾಲಹಳ್ಳಿ, ಜುಲೈ 3: ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮದಲ್ಲಿ ಮಾಜಿ ಸಚಿವ ಕೆ. ಶಿವನಗೌಡ ನಾಯಕ (KSN) ಅವರ 49ನೇ ಜನ್ಮದಿನೋತ್ಸವ ಹಾಗೂ ಸಂಕಲ್ಪ ಸಮಾವೇಶದ ಅಂಗವಾಗಿ ಆಹ್ವಾನ ಪತ್ರಿಕೆ ವಿತರಣೆ ಕಾರ್ಯಕ್ರಮ ನಡೆಯಿತು.

ಕಾರ್ಯಕ್ರಮಕ್ಕೂ ಮುನ್ನ ಜಾಲಹಳ್ಳಿಯ ಶ್ರೀ ಲಕ್ಷ್ಮೀ ರಂಗನಾಥ ದೇವಸ್ಥಾನದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಬಳಿಕ ಗ್ರಾಮದ ಎಲ್ಲಾ ವಾರ್ಡುಗಳು, ಮನೆಗಳು ಹಾಗೂ ಅಂಗಡಿ-ಮುಂಗಟ್ಟುಗಳಿಗೆ ಜುಲೈ 14, 2026 ರಂದು ಕವಿತಾಳದಲ್ಲಿ ನಡೆಯಲಿರುವ ಜನ್ಮದಿನೋತ್ಸವ ಮತ್ತು ಸಂಕಲ್ಪ ಸಮಾವೇಶದ ಆಹ್ವಾನ ಪತ್ರಿಕೆಗಳನ್ನು ವಿತರಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡ ಚಂದಪ್ಪ ಬುದ್ದಿನ್ನಿ, ಸಂಕಲ್ಪ ಸಮಾವೇಶದ ಮುಖ್ಯ ಉದ್ದೇಶಗಳು ಸಮಗ್ರ ನೀರಾವರಿ ಯೋಜನೆ, ನವಲಿ ಜಲಾಶಯ ನಿರ್ಮಾಣ, ತಿಂತಿಣಿ ಬ್ರಿಡ್ಜ್ ಬಳಿ ಜಲಾಶಯ ನಿರ್ಮಾಣ ಹಾಗೂ ಏಮ್ಸ್ (AIIMS) ಮಂಜೂರಾತಿಗೆ ಒತ್ತಾಯಿಸುವುದು ಎಂದು ತಿಳಿಸಿದರು.

ಬಾಕ್ಸ್ ನಲ್ಲಿ

ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ ರೆಹಮಾನ್ ಖುರೇಷಿ ಮಾತನಾಡಿ, ಉತ್ತರ ಕರ್ನಾಟಕದಲ್ಲಿ ಹಸಿರು ಕ್ರಾಂತಿಗೆ ಪೂರಕವಾಗುವ ಜಲಾಶಯಗಳ ನಿರ್ಮಾಣದ ಸಂಕಲ್ಪದೊಂದಿಗೆ ಈ ಸಮಾವೇಶವನ್ನು ಆಯೋಜಿಸಲಾಗಿದೆ. ಆದ್ದರಿಂದ ಜುಲೈ 14ರಂದು ಕವಿತಾಳದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಶಿವು ಪಾಣಿ ಸೌಕಾರ್, ಚಂದಪ್ಪ ಬುದ್ದಿನ್ನಿ, ರಮೇಶ್ ಆನ್ವರಿ, ಗೋವಿಂದಪ್ಪ ಆಲ್ಗೇರಿ, ಶಂಕರಗೌಡ ಮಾಲಿಪಾಟೀಲ್, ಶ್ರೀಧರ ದೇಸಾಯಿ, ಆನಂದ್ ಪಾಟೀಲ್, ಈಶಣ್ಣ ಕಾಟಮಳ್ಳಿ, ರಂಗಪ್ಪ ಬಂಡಿ, ತಮ್ಮಣ್ಣ ಹೇರುಂಡಿ, ಶಿವಪ್ಪ ಮ್ಯಾಗೇರಿ, ಬಾಳಪ್ಪ ತಗ್ಗೆಹಳ್ಳಿ, ವೆಂಕೋಬ ಪೂಜಾರಿ, ರಂಗನಾಥ ಮಕಾಶಿ. ಗ್ರಾಮ ಪಂಚಾಯತ್ ಉಪಾಧ್ಯಕ್ಷ ವೀರೇಶ್ ಅರಕೇರಿ, ಗ್ರಾಮ ಪಂಚಾಯತ್ ಸದಸ್ಯರಾದ ಸರಬಣ್ಣ ಹಂಪರಗುಂದಿ, ಬಸವರಾಜ್ ಗೋಪಾಲಪುರ, ಅಬ್ದುಲ್ ರೆಹಮಾನ್ ಖುರೇಷಿ ಸೇರಿದಂತೆ ನೂರಾರು ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *