ಕವಿತಾಳ ಸಮೀಪದ ಹಿರೇಹಣಿಗಿ ಬಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣಕ್ಕೆ ಕ್ರಮ ವಹಿಸುವಂತೆ ಸಂಸದ ಜಿ.ಕುಮಾರ ನಾಯಕ ಅವರಿಗೆ ಈಚೆಗೆ ರೈತರು ಮನವಿ ಸಲ್ಲಿಸಿದರು.
ಕವಿತಾಳ -: ಸಮೀಪದ ಹಿರೇಹಣಿಗಿ ಬಳಿ ರಾಯಚೂರು ಬೆಳಗಾವಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೇತುವೆ ನಿರ್ಮಾಣ ಮಾಡಲು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಸೂಚಿಸುವಂತೆ ಗ್ರಾಮದ ರೈತರು ಸಂಸದ ಜಿ.ಕುಮಾರ ನಾಯಕ ಅವರಿಗೆ ಈಚೆಗೆ ಮನವಿ ಸಲ್ಲಿಸಿದ್ದಾರೆ.
ಅಂಡರ್ ಪಾಸ್ ನಿರ್ಮಾಣದಿಂದ ಜಮೀನುಗಳಿಗೆ ಸಂಪರ್ಕಿಸುವ ರಸ್ತೆ ಕಡಿತವಾಗಿ ಕೃಷಿ ಚಟುವಟಿಕೆಗೆ ಹಿನ್ನಡೆಯಾಗುತ್ತದೆ. ಹೀಗಾಗಿ ಅಂಡರ್ ಪಾಸ್ ಬದಲಿಗೆ ಮೇಲ್ವೇತುವೆ ನಿರ್ಮಿಸಬೇಕು. ಈ ಬಗ್ಗೆ ಪ್ರಾಧಿಕಾರದ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಿದರು.
ರೈತರಾದ ತಿಮ್ಮನಗೌಡ ಪಾಟೀಲ, ಆದಪ್ಪಗೌಡ, ಶಿವಪ್ಪ ಪೂಜಾರಿ ಮತ್ತು ಮಾಳಪ್ಪ ಉಪಸ್ಥಿತರಿದ್ದರು.

