ರಾಯಚೂರು ಜೂನ್ 16 (ಕರ್ನಾಟಕ ವಾರ್ತೆ): ರಾಯಚೂರು ಮಹಾನಗರ ಪಾಲಿಕೆಯ ವತಿಯಿಂದ 2026-27ನೇ ಸಾಲಿನ ನಗರ ಪ್ರದೇಶಗಳಲ್ಲಿ ಪ್ರಧಾನಮಂತ್ರಿ ಅವಾಜ್ ಯೋಜನೆ (ನಗರ) 2.0 ಯೋಜನೆ ಅಡಿಯಲ್ಲಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾಸಲಾಗಿದೆ.
ಈ ಯೋಜನೆಅಡಿ ವಸತಿ ರಹಿತ/ ನಿವೇಶ ರಹಿತ ಒಚಿಟಿ ಮಹಿಳೆಯರು, ವಿಕಲಚೇತನರು, ಹಿರಿಯ ನಾಗರೀಕರು, ತೃತಿಯ ಲಿಂಗಿಗಳು, ಎಸ್.ಸಿ/ ಎಸ್.ಟಿ./ ಹಿಂದುಳಿದ ಅಲ್ಪಸಂಖ್ಯಾತ ವರ್ಗದವರು ಸ್ವಚ್ಛತಾ ಕಾರ್ಮಿಕರು, ಪಿಎಮ್ ಸ್ವಾಧಿನಿ ಯೋಜನೆಯಡಿ ಗುರುತಿಸಲ್ಪಟ್ಟ ಬೀದಿ-ಬದಿ ವ್ಯಾಪಾರಿಗಳು ಮತ್ತು ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಗುರುತಿಸಿದ ಕುಶಲಕರ್ಮಿಗಳು, ಅಂಗನವಾಡಿ ಕಾರ್ಯಕರ್ತರು, ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರು, ಕೈಗಾರಿಕರು ಮತ್ತು ವಲಸೆ ಬಂದ ಕುಟುಂಬದವರು ತಮ್ಮ ಅರ್ಜಿಗಳನ್ನು ವೆಬ್‌ಸೈಟ್ ವಿಳಾಸ: URL:http//pmay-urban.gov.in ನಲ್ಲಿ ಅಥವಾ ಸಿಎಸ್‌ಸಿ ಕೇಂದ್ರಗಳಲ್ಲಿ ಸ್ವತಃ ಅರ್ಜಿಯನ್ನು ಜೂನ್ 30ರೊಳಗಾಗಿ ಸಲ್ಲಿಸಬಹುದಾಗಿದೆ. ಅರ್ಜಿಯನ್ನು ಪಾಲಿಕೆಯ ಕಚೇರಿಯ ಸಮಯದಲ್ಲಿ ಕಚೇರಿಗೆ ಸಲ್ಲಿಸಬೇಕು. ಅವಧಿ ಮೀರಿ ಬಂದಂತಹ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ.
ವಸತಿ ರಹಿತರು ನಿವೇಶನ ದಾಖಲೆಗಳಾದ ಹಕ್ಕುಪತ್ರ/ ಕ್ರಯಪತ್ರ/ ದಾನಪತ್ರ/ ಉಡುಗೊರೆ ಪತ್ರ/ ಖಾತಾ ದಾಖಲೆಗಳನ್ನು ಲಗತ್ತಿಸಿ ಕುಟುಂಬ ಸದಸ್ಯರ ಆಧಾರ್ ಕಾರ್ಡ್, ಪಡಿತರ ಚೀಟಿ, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ ಮತ್ತು ನಿಗಧಿತ ನಮೂನೆ ರಲ್ಲಿ Self Undertaking ಸಲ್ಲಿಸುವುದು. ವಸತಿ/ ನಿವೇಶನ ರಹಿತರು ನಿವೇಶನಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊರತುಪಡಿಸಿ, ಇತರೆ ದಾಖಲೆಗಳನ್ನು ಕಡ್ಡಾಯವಾಗಿ ಲಗತ್ತಿಸಬೇಕೆಂದು ರಾಯಚೂರು ಮಹಾನಗರ ಪಾಲಿಕೆಯ ಆಡಳಿತ ವಿಭಾಗದ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *