ಮಾನ್ವಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮಾನ್ವಿ ನಗರದಲ್ಲಿ ಈ ದಿನ ವಾಸವಿ ಕಲ್ಯಾಣ ಮಂಟಪದಲ್ಲಿ ಆರ್ಯವೈಶ್ಯ ಸಮಾಜದ ರಾಜಲಬಂಡಿ ಮುತ್ತುರಾಜ್ ಶೆಟ್ಟಿ ಕುಟುಂಬದವರು ಹಮ್ಮಿಕೊಂಡಿದ್ದ ಶ್ರೀ ಶ್ರೀನಿವಾಸ ಕಲ್ಯಾಣ ಮಹೋತ್ಸವ ಕಾರ್ಯಕ್ರಮದಲ್ಲಿ ಭಾಗಿಯಾದ ಸಣ್ಣ ನೀರಾವರಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವರು ಪರಿಷತ್ತಿನ ಸಭಾ ನಾಯಕರು ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಎನ್ ಎಸ್ ಬೋಸರಾಜು ಹಾಗೂ ಮಾನ್ವಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಜಿ ಹಂಪಯ್ಯ ನಾಯಕ್ ಸಾಹುಕಾರ್ ಇವರು.
ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಹಾಗೂ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷರಾದ ಅಬ್ದುಲ್ ಗಪೂರ್ ಸಾಬ್, ಪಂಚ ಗ್ಯಾರಂಟಿಗಳ ಅಧ್ಯಕ್ಷರಾದ ಬಿಕೆ ಅಂಬರೇಶಪ್ಪ ವಕೀಲರು, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಕಿರಲಿಂಗಪ್ಪ ಕವಿತಾಳ, ಬಸವರಾಜ್ ಪಾಟೀಲ್ ಅತನೂರ್, ಜಿ ನಾಗರಾಜ್, ರೌಡ್ರು ಮಹಾಂತೇಶ್ ಸ್ವಾಮಿ, ಸೈಯದ್ ಖಾಲಿದ್ ಖಾದ್ರಿ, ರಾಜ ಸುಭಾಷ್ ಚಂದ್ರ ನಾಯಕ್, ಮಂಚಾಲಿ ಎಂಕಯ್ಯ ಶೆಟ್ಟಿ, ಬಿಚ್ಚಲಿ ಮಂಜುನಾಥ್ ಶೆಟ್ಟಿ, ಮುದುಗಲ್ ಕೇಶವ ಶೆಟ್ಟಿ, ಭಂಡಾರಿ ಅಂಮ ರಾಯ್ ಶೆಟ್ಟಿ, ಪ್ರಕಾಶ್ ಶೆಟ್ಟಿ, ರಾಘವೇಂದ್ರ ಶೆಟ್ಟಿ, ಪವನ್ ಭಂಡಾರಿ, ಸತ್ತರ್ ಬಂಗ್ಲೆವಾಲೆ, ಆರ್ಯವೈಶ್ಯ ಸಮಾಜದ ಇತರ ಮುಖಂಡರುಗಳು ಉಪಸ್ಥಿತರಿದ್ದರು.

