ಹಟಿ ಚಿನ್ನದಗಣಿ, ನ.30- ಸಮೀಪದ ಗೆಜ್ಜಲಗಟ್ಟಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅಶೋಕ ಭೂಪಾಲ್ ಜಾಹಗಿ ರದಾರ, ನೇತೃತ್ವದಲ್ಲಿ ಗ್ರಾಮದ ಮುಖಂಡರು, ಹಾಗೂ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಹಾಗೂ ಸನ್ ರೈಸ್ ಕಾಲೇಜ ಸಿಂಧನೂರು ಇವರ ಸಂಯುಕ್ತಾಶ್ರದಲ್ಲಿ ಏರ್ಪಡಿಸಿದ ಉಚಿತ ಆರೋಗ್ಯ ಶಿಬಿರದಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದಲ್ಲಿ ಆರ್ಥಿಕ ಬಡತನ, ವೈದ್ಯರ ಕೊರತೆ ಇರುವುದರಿಂದ ಜನರಿಗೆ ಸರಿಯಾದ ಚಿಕಿತ್ಸೆ ಸಿಗುವುದಿಲ್ಲ, ಉಚಿತ ಆರೋಗ್ಯ ತಪಾಸಣೆ ಶಿಬಿರವನ್ನು ಗ್ರಾಮೀಣ ಭಾಗದ ಜನರ ಆರೋಗ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಈ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ
ಗ್ರಾಮೀಣ ಪ್ರದೇಶದ ಜನರಿಗೆ ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬರಿಗೂ ಬಿಪಿ, ಶುಗರ್, ಹೃದಯ
ರೋಗ ಹಾಗೂ ಕಿಡ್ನಿ ಕಾಯಿಲೆಗಳು ಸಾಮಾನ್ಯವಾಗಿ ವೆ. ಬಡಜನರು ಆರ್ಥಿಕವಾಗಿ ಭರಿಸಲು ಅಸಾಧ್ಯ. ಗ್ರಾಮೀಣ ಭಾಗದ ಬಡ ಜನರಿಗೆ ಇಂತಹ ಉಚಿತ ಶಿಬಿರಗಳ ಮೂಲಕವೇ ಚಿಕಿತ್ಸೆಗೊಳಪಡಿಸಿದಾಗ ಮಾತ್ರ ಅವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ. ನಾನು ಕೂಡ ಗ್ರಾಮೀಣ ಹಳ್ಳಿ ಹಿನ್ನೆಲೆಯಿಂದ ಬಂದಿದ್ದೇನೆ. ಬಡತನದ ಪರಿಚಯವೂ ನನಗೆ ಇದ್ದು ಒಂದು ಉನ್ನತ ಸ್ಥಾನದ ಹೊಣೆ ಹೊಂದಿದ ಮೇಲೆ ಬಡ ಜನರ ಸೇವೆಯ ಅವರ ಋಣವನ್ನು ಈ ರೀತಿಯ ಆರೋಗ್ಯ ಶಿಬಿರಗಳ ಮೂಲಕವೇ ತೀರಿಸಲು ಸಾಧ್ಯ ಎಂಬುದನ್ನು ಅರಿತಿದೇನೆ ಎಂದರು.
ಶಿಬಿರಕ್ಕೆ ಆಗಮಿಸಿದ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಗಳನ್ನು ಪುಷ್ಪಾರ್ಚನೆ ಮಾಡಿ ಸ್ವಾಗತಿಸಲಾಯಿತು. ಕಾರ್ಯಕ್ರಮದಲ್ಲಿ ಮುಖ್ಯವಾಗಿ ಸನ್ ರೈಸ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ ಸಿಂಧನೂರು ನ ವಿದ್ಯಾರ್ಥಿಗಳು ಆರೋಗ್ಯ ಯೋಧರಾಗಿ ಸೇವೆ ಸಲ್ಲಿಸಿದರು ಇವರಿಗೂ ವಿಶೇಷವಾಗಿ ಸ್ವಾಗತ ನೀಡಲಾಯಿತು ಸನ್ ರೈಸ್ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನ ಪ್ರಾಂಶುಪಾಲರಾದ ಲಾಜರ್ ಸಿರಿಲ್ ಜಿ ಅವರು ಮಾತನಾಡಿ ಸಪ್ತಗಿರಿ ಆಸ್ಪತ್ರೆಯ ವೈದ್ಯರುಗಳು ಗ್ರಾಮೀಣ ಭಾಗದ ಜನರಿಗೆ ನಿರಂತರವಾಗಿ ಅತ್ಯುತ್ತಮ ಸೇವೆಯನ್ನು ನೀಡುತ್ತಾ ಬಂದಿದ್ದಾರೆ . ನಮ್ಮ ವಿದ್ಯಾರ್ಥಿಗಳು ಈ ತಂಡದ ವೈದ್ಯರೊಂದಿಗೆ ಹಿಂದೆ ಕೂಡ ಸೇವೆ ಸಲ್ಲಿಸಿದ್ದು ಅನೇಕ ಉಚಿತ ಚಿಕಿತ್ಸೆಗಳನ್ನು ನಿರ್ವಹಿಸಿದ್ದಾರೆ ಎಂದು ಹೇಳಿದರು.
ಗ್ರಾಮಸ್ಥರು ಮತ್ತು ಸುತ್ತಮುತ್ತಲಿನ ಸಾರ್ವಜನಿಕರು ಈ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು. ಶಿಬಿರದಲ್ಲಿ 500 ಕ್ಕೂ ಹೆಚ್ಚು ರೋಗಿಗಳ ಉಚಿತ ತಪಾಸಣೆ ಮಾಡಲಾಯಿತು. 100 ಕ್ಕೂ ಹೆಚ್ಚು ಜನರಿಗೆ ಉಚಿತ ECG ಮತ್ತು ECHO ಪರೀಕ್ಷೆಗಳು ನಡೆಸಲಾಯಿತು. 36 ರೋಗಿಗಳನ್ನು ಹೆಚ್ಚಿನ ಚಿಕಿತ್ಸೆಗಾಗಿ ಸಪ್ತಗಿರಿ ಆಸ್ಪತ್ರೆಗೆ ಶಿಫಾರಸು ಮಾಡಲಾಯಿತು
ಈ ಆರೋಗ್ಯ ತಪಾಸಣಾ ಶಿಬಿರದಲ್ಲಿ ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ಡಾ.ಮಲ್ಲಿಕಾರ್ಜುನ್, ಡಾ. ವಿಕ್ರಂ, ಡಾ.ವಿಷ್ಣು, ಡಾ.ಶರೋಲ್, ಡಾ.ಕಾರ್ತಿಕ, ಡಾ. ಶರತ್, ಡಾ. ರಾಘವೇಂದ್ರ, ಅಮರ್ ಜಾಹಗೀರದಾರ, ಚಂದ್ರಕಾಂತ ನಾಡಗೌಡ, ತಿಮ್ಮನಗೌಡ, ಲಾಜರ್ ಸಿರಿಲ್ ಪ್ರಾಚಾರ್ಯರು ಸನ್ ರೈಸ್ ನರ್ಸಿಂಗ್ ಕಾಲೇಜ್ ಸಿಂಧನೂರ್ ,ಶರಣಪ್ಪಗೌಡ ನಿಲೋಗಲ್, ಚಂದನ್‌ಗೌಡ, ವೀರುಪಾಕ್ಷಿಗೌಡ ನಿಲೋಗಲ್, ನಾಗಪ್ಪ ಕಟ್ಟಿಮನಿ, ಬಸವರಾಜ ಭೋವಿ, ಶಿವಗ್ಯಾನಪ್ಪ, ಶಾಂತಕುಮಾರ ಚಿಕ್ಕನಗನೂರು, ಬಸವಲಿಂಗಪ್ಪ ನಾಯಕ, ತಿಪ್ಪರಾಜ ಗೆಜ್ಜಲಗಟ್ಟಾ, ಮುತ್ತಣ ಬಾರಿಕೇರ್, ಸೇರಿದಂತೆ ಗ್ರಾಮಸ್ಥರು ಸನ್ ರೈಸ್ ನರ್ಸಿಂಗ್ ಕಾಲೇಜ ಸಿಂದನೂರ್ ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು

