ಮಸ್ಕಿ : ಭಾರತೀಯ ಜನತಾ ಪಕ್ಷದ ಮಹಿಳಾ ಮೋರ್ಚಾ ವತಿಯಿಂದ ಭಾರತದ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಜಿ ಅವರು ಕರೆ ಮೇರಿಗೆ ನಾರಿ ಶಕ್ತಿ ಪೋರಂ ಅಡಿಯಲ್ಲಿ ಆರೋಗ್ಯಕರ ಭಾರತ ಆತ್ಮ ನಿರ್ಭರ ಭಾರತ ಪರಿಸರ ಸ್ನೇಹ ಜೀವನ ಶೈಲಿಗಾಗಿ ಖಾದಿ ಎಣ್ಣೆಯನ್ನು ಬಳಕೆ ಕಡಿಮೆ ಮಾಡಬೇಕೆಂದು ಕರೆ ನೀಡಿದ್ದಾರೆ ಇದರ ಕುರಿತು ಜಾಗೃತಿ ಕಾರ್ಯಕ್ರಮವನ್ನು ಮಾಜಿ ಶಾಸಕ ಪ್ರತಾಪ್ ಗೌಡ್ ಪಾಟೀಲ್ ಸಸಿಗೆ ನೀರು ಹಾಕುವ ಮೂಲಕ ಉದ್ಘಾಟನೆ ಮಾಡಿ ಮಾತನಾಡಿ ಇಂದು ಆಧುನಿಕ ಆಹಾರ ಶೈಲಿಯಲ್ಲಿ ನಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳುತ್ತಿದ್ದು, ಅದಕ್ಕೆ ನಮ್ಮ ಪರೆಂಪರಗತವಾಗಿ ಬಂದಿರುವ ಸಿರಿಧಾನ್ಯಗಳು,ವಿವಿಧ ಬಗೆಯ ಬೇಳೆಕಾಳುಗಳು,ಹಸಿಕಾಯಿಪಲ್ಯ,ಪೌಷ್ಟಿಕಾಂಶಗಳನ್ನು ಬಳಸಬೇಕು,ಆದಷ್ಟು ಎಣ್ಣಿ ಅಂಶ ಅಡುಗೆ ಪ್ರಮಾಣ ಕಡಿಮೆಮಾಡಿ ಆರೋಗ್ಯಯುಕ್ತ ಆಹಾರ ಬಳಸಬೇಕು ಎಂದು ಹೇಳಿದರು. ಸಂದರ್ಭದಲ್ಲಿ ಮಸ್ಕಿ ಮಹಿಳಾ ಮೋರ್ಚಾದ ಅಧ್ಯಕ್ಷರಾದ ನಿವೇದಿತಾ ಬಳ್ಳಾ ಮಂಡಲದ ಅಧ್ಯಕ್ಷರಾದ ಶರಣಬಸವ ಸೊಪ್ಪಿಮಠ ಕಾರ್ಯಕ್ರಮ ಕುರಿತು ಮಾತನಾಡಿದರು. ಈ ವೇಳೆಯಲ್ಲಿ ಮಹಿಳಾ ಮೋರ್ಚಾ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಶ್ರೀಮತಿ ರಾಜೇಶ್ವರಿ , ಕಾರ್ಯಕ್ರಮದ ಸಂಪನ್ಮೂಲ ವ್ಯಕ್ತಿಗಳಾದ ಡಾಕ್ಟರ್ ಶೋಭಾ ದಿವಟರ್ ಹಾಗೂ ರಾಜೇಶ್ವರಿ ದಿವಟರ್ ಕಾರ್ಯಕ್ರಮ ಕುರಿತು ಸಂಪೂರ್ಣ ಮಾಹಿತಿಯನ್ನು ಜೀವನಶೈಲಿ ಹಾಗೂ ಆಹಾರ ಪದ್ಧತಿ ಮತ್ತು ಖಾತೆ ಎಣ್ಣೆಗಳಿಂದ ಆಗುವ ಹಾನಿಕಾರಗಳ ಕುರಿತು ಸಂಪೂರ್ಣ ಮಾಹಿತಿಯನ್ನು ಮಹಿಳೆಯರಿಗೆ ಮತ್ತು ವಿದ್ಯಾರ್ಥಿನಿಯರಿಗೆ ತಿಳಿಸಿದರು.

