ತಾಲೂಕಿನ ತಿಪ್ಪನಹಟ್ಟಿ ಗ್ರಾಮಕ್ಕೆ ಸಾಯಂಕಾಲ ಬಸ್ ಬಿಡುವು ಮೂಲಕ ಗ್ರಾಮಸ್ಥರಿಗೆ ಶಾಲಾ ಕಾಲೇಜಿನ ಮಕ್ಕಳಿಗೆ ಅನುಕೂಲ ಕಲ್ಪಿಸಿಕೊಡಬೇಕು ಎಂದು ಡಿಪೋ ಮೆನೇಜರ್ ಅವರಿಗೆ ತಿಪ್ಪನಹಟ್ಟಿ ಗ್ರಾಮದ ಜನರು ಮತ್ತು ಶಾಲಾ ಕಾಲೇಜಿನ ಮಕ್ಕಳು ಮನವಿ ಪತ್ರ ಸಲ್ಲಿಸಿದರು.
ತಾಲೂಕಿನ ತಿಪ್ಪನಹಟ್ಟಿ ಗ್ರಾಮಕ್ಕೆ ತಾಲೂಕು ಕೇಂದ್ರ ಕೇಂದ್ರದಿಂದ ಬೆಳಿಗ್ಗೆ ಹಾಗೂ ಮಧ್ಯಾಹ್ನ ಮಾತ್ರ ಬಸ್ ಬರುತ್ತಿದೆ. ಸಾಯಂಕಾಲ 5 ರಿಂದ 5:30 ರ ಸುಮಾರಿಗೆ ಒಮ್ಮೆ ಬಸ್ ಪಗಡದಿನ್ನಿಯವರಿಗಾದರು ಬಿಡಲು ಡಿಪೋ ಮೆನೇಜರ್ ಅವರಿಗೆ ಈಗಾಗಲೇ ಅನೇಕ ಬಾರಿ ಮನವಿ ಮಾಡಿಕೊಂಡಿದ್ದೇವೆ. ಆದರೂ ನಿರ್ಲಕ್ಷ್ಯ ವಹಿಸಿದ್ದಾರೆಂದು ತಿಪ್ಪನಹಟ್ಟಿ ಗ್ರಾಮಸ್ಥರು, ಶಾಲಾ ಕಾಲೇಜು ವಿದ್ಯಾರ್ಥಿಗಳು ಆರೋಪ ಮಾಡಿದರು.
ಈ ಸಂದರ್ಭದಲ್ಲಿ: ಮುಖಂಡರಾದ ಎಸ್.ವೆಂಕಣ್ಣ, ಬೀರಪ್ಪ ಆನ್ವರಿ, ಮಾಜಿ ಗ್ರಾಮ ಪಂಚಾಯತಿ ಅಧ್ಯಕ್ಷ ಮೊಮ್ಮಿನ್ ಸಾಬ್, ವಿಶ್ವನಾಥಗೌಡ, ಹನುಮಂತಪ್ಪ ತಳವಾರ್, ಮಲ್ಲಪ್ಪ ಹಂಚಿನಾಳ, ಮೆಹಬೂಬ್ ಸಾಬ್, ಬಸಪ್ಪ ಅಂಗಡಿ, ವಿದ್ಯಾರ್ಥಿಗಳಾದ ಸುನಿಲ್ ನಾಯಕ, ಅಪ್ಪಾಜಿ ನಾಯಕ, ಎಚ್.ಶ್ರೀಶೈಲ, ಸಾನಿಯಾ, ಸ್ವಪ್ನ, ವಿ.ಕೆ.ನವಾಜ್, ಭವಾನಿ, ಸ್ವೇತಾ, ಐಶ್ವರ್ಯ, ಸೇರಿದಂತೆ
50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಉಪಸ್ಥಿತರಿದ್ದು, ಘಟಕ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

