ಮಾನ್ವಿ: ಪಟ್ಟಣದ ತಹಶೀಲ್ದಾರ್ ಕಚೇರಿಯಲ್ಲಿ ಕ್ರಾಂತಿಕಾರಿ ಯುವಜನ ಸಂಘಟನೆ ತಾಲೂಕ ಸಮಿತಿ ವತಿಯಿಂದ ರಾಷ್ಟ್ರಪತಿಗಳಿಗೆ ಗ್ರೇಡ್-2 ತಹಶೀಲ್ದಾರ್ ಅಬ್ದುಲ್ ವಾಹಿದ್ ರವರ ಮೂಲಕ ಮನವಿ ಸಲ್ಲಿಸಿ ಸಿ.ಪಿ.ಐ ಎಂ.ಎಲ್. ಲಿಬರೇಶನ್ ಪಕ್ಷದ ಜಿಲ್ಲಾ ಮುಖಂಡರಾದ ಅಜೀಜ್ ಜಾಗೀರ್ದಾರ್ ಮಾತನಾಡಿ ಕೇಂದ್ರ ಸರಕಾರವು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ಕೂಡ ಜನಸಾಮಾನ್ಯರಿಗೆ ಅಗತ್ಯವಾದ ಪೆಟ್ರೋಲ್, ಡೀಸೆಲ್ ಹಾಗೂ ಎಲ್‌ಪಿಜಿ ಗ್ಯಾಸ್ ಸಿಲೇಂಡರ್ ಬೆಲೆಗಳನ್ನು ನಿರಂತರವಾಗಿ ಹೆಚ್ಚಿಸುತ್ತಿರುವುದರಿಂದ ಜನಸಾಮಾನ್ಯರು,ಮಧ್ಯಮ ವರ್ಗದ ಕುಟುಂಬಗಳು ನಿತ್ಯ ಬಳಸುವ ಆಹಾರ ಪದಾರ್ಥಗಳು, ದಿನಸಿ ವಸ್ತುಗಳು, ಕೃಷಿ ಪರಿಕರಗಳು, ಸಾರಿಗೆ ವೆಚ್ಚ ಸೇರಿದಂತೆ ಎಲ್ಲ ಅಗತ್ಯ ವಸ್ತುಗಳ ಬೆಲೆಗಳು ಹೆಚ್ಚಳವಾಗಿವೆ ಇದ್ದರಿಂದ ಜನರು ಜೀವನ ನಡೆಸುವುದು ಕಷ್ಟವಾಗಿದೆ. ರೈತರಿಗೆ ಅಗತ್ಯ ಪ್ರಮಾಣದಲ್ಲಿ ರಸಗೊಬ್ಬರ ದೊರೆಯುತ್ತಿಲ್ಲ. ಉಜ್ವಲ ಯೋಜನೆಯ ಗ್ಯಾಸ್ ಸಿಲೆಂಡರ್‌ಗಳನ್ನು ಕಡಿತ ಮಾಡಲಾಗುತ್ತಿದೆ. ಕೇಂದ್ರ ಸರಕಾರದ ಜನವಿರೋಧಿ ನೀತಿಗಳನ್ನು ವಿರೋಧಿಸಿ ಮುಂದಿನ ದಿನಗಳಲ್ಲಿ ತೀವ್ರವಾದ ಹೋರಾಟವನ್ನು ಹಮ್ಮಿಕೊಳ್ಳಲಾಗುವುದು ಎಂದು ತಿಳಿಸಿದರು.
ಕ್ರಾಂತಿಕಾರಿ ಯುವಜನ ಸಂಘಟನೆ ತಾಲೂಕ ಸಮಿತಿ ಸಂಚಾಲಕರಾದ ರಾಜ ಸಾಬ್, ಜಲಾಲ್ ಪಾಶ, ಬಸಲಿಂಗಪ್ಪ, ರಂಗಪ್ಪ, ಉಡುಪಿ ಕೃಷ್ಣ, ಇಮ್ರಾನ್, ಸೈಯದ್ ಗೌಸ್, ರಮೇಶ್, ಚಂದ್ರಶೇಖರ್, ರಾಮಣ್ಣ, ನಾಗರಾಜ್, ಶಿವಣ್ಣ, ಆದಯ್ಯ, ಬೊಮ್ಮಯ್ಯಪ್ಪ ನಾಯಕ್, ಚಂದ್ರಶೇಖರ್ ಸೇರಿದಂತೆ ಇನ್ನಿತರರು ಇದ್ದರು.

 

Leave a Reply

Your email address will not be published. Required fields are marked *