ಹಾಲಾಪೂರ: ತಾಲ್ಲೂಕ ಹಾಲಾಪೂರ ರೈತ ಸಂಪರ್ಕ ಕೇಂದ್ರದ ಪ್ರಭಾರಿ ಕೃಷಿ ಅಧಿಕಾರಿಯಾಗಿ ಶಿವಶರಣ ಬೋವಿ ಇಂದು ಅಧಿಕಾರ ಸ್ವೀಕರಿಸಿ ಮಾತನಾಡಿ ನನಗೆ ಈಗಾಗಲೇ ಕವಿತಾಳದಲ್ಲಿ ಖಾಯಂ ಕೃಷಿ ಅಧಿಕಾರಿಯಾಗಿ ಸೇವೆ ಮಾಡುತ್ತಿದ್ದು,ಹೆಚ್ಚುವರಿಯಾಗಿ ಹಾಲಾಪೂರಕ್ಕೆ ಮೇಲಾಧಿಕಾರಿಳು ನೇಮಿಸಿದ್ದು , ಅದಕ್ಕಾಗಿ ನಮ್ಮ ಕೃಷಿ ಇಲಾಖೆಯ ವಿವಿಧ ಯೋಜನೆಗಳನ್ನು ರೈತರಿಗೆ ಮುಟ್ಟಿಸುವ ಕೆಲಸ ಮಾಡಲಾಗುವುದು ಎಲ್ಲರ ಸಹಕಾರ ಅಗತ್ಯ ಎಂದು ಹೇಳಿದರು. ಹಾಗೆ ಇಲ್ಲಿಂದ ವರ್ಗಾವಣೆಗೊಂಡ ಕೃಷಿ ಅಧಿಕಾರಿ ಮಾರುತಿ ನಾಯಕ ಮಾತನಾಡಿ ನಮ್ಮ ಸಿಬ್ಬಂದಿ ಮತ್ತು ರೈತಬಾಂಧವರು ಬಹಳಷ್ಟು ಸಹಕಾರದಿಂದ ಸುಮಾರು ಮೂರು ವರ್ಷ ಕೆಲಸ ಮಾಡಲು ಸಾದ್ಯವಾಯಿತು, ಸಹಕರಿಸಿದ ಎಲ್ಲರಿಗೂ ಧನ್ಯವಾದಗಳು ಎಂದು ಹೇಳಿದರು. ನಂತರ ಶಿವಶರಣ ಬೋವಿ ನೂತನ ಕೃಷಿ ಅಧಿಕಾರಿಯನ್ನು ಸ್ವಾಗತ ಗೌರವಿಸಿ , ಹಾಗೂ ವರ್ಗಾವಣೆಗೊಂಡ ಕೃಷಿ ಅಧಿಕಾರಿ ಮಾರುತಿ ನಾಯಕ ಅವರನ್ನು ಬಿಳ್ಕೊಡಿಗೆ ಮಾಡಿ ಗೌರವಿಸಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಸಿಬ್ಬಂದಿಗಳಾದ ಪ್ರವೀಣಕುಮಾರ, ಮಂಜುನಾಥಸ್ವಾಮಿ , ಮುದಕಪ್ಪ , ಶರಣಪ್ಪ, ಮಾರುತಿ ಜಿನ್ನಾಪೂರ, ವಿದ್ಯಾ ಹಾಗೂ ರೈತರು ಇದ್ದರು.

Leave a Reply

Your email address will not be published. Required fields are marked *