ಸಿಂಧನೂರು —ಮಸ್ಕಿ ಪಟ್ಟಣದ ಸರ್ಕಾರಿ ಹಿರಿಯ ಕೇಂದ್ರ ಪ್ರಾಥಮಿಕ ಶಾಲೆಯ ಆವರಣದಲ್ಲಿ ಸುಮಾರು ದಿನಗಳಿಂದ ವಾಸವಾಗಿದ್ದ ಹನುಮಂತಪ್ಪ ವಯಸ್ಸು-75 ಈತನನ್ನು ಮಸ್ಕಿ ಪೊಲೀಸ್ ಇಲಾಖೆ ಅಧಿಕಾರಿಗಳ ಹಾಗೂ ಶಾಲಾ ಶಿಕ್ಷಕರುಗಳ ಮತ್ತು ಸ್ಥಳೀಯರುಗಳ ಮಾಹಿತಿ ಮೇರೆಗೆ ಸಿಂಧನೂರು ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ಧಾಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರು ಆಶ್ರಮಕ್ಕೆ ಕರೆತಂದು ಆಶ್ರಯ ಕಲ್ಪಿಸಿಕೊಟ್ಟರು. ಈ ಸಮಯದಲ್ಲಿ ಜಿ. ಎಚ್. ಪಿ. ಎಸ್. ಕೇಂದ್ರ ಶಾಲೆಯ ಶಿಕ್ಷಕರಗಳು ಹಾಗೂ ಸ್ಥಳೀಯರುಗಳು ಆಶ್ರಮಕ್ಕೆ ಧನ ಸಹಾಯ ಮಾಡುವುದರ ಮೂಲಕ ಮಾನವೀಯತೆ ಮೆರೆದರು. ಈ ಸಂದರ್ಭದಲ್ಲಿ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ ಮಾತನಾಡಿ ಹನುಮಂತಪ್ಪ ಅವರಿಗೆ ಕುಟುಂಬ ಇರೋದಿಲ್ಲ ಅವರು ಆರೋಗ್ಯವಾಗಿದ್ದಾಗ ಹೋಟೆಲ್ ಒಂದರಲ್ಲಿ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದರು. ಆದರೆ ಈಗಿನ ದಿನಗಳಲ್ಲಿ ಅವರ ದೇಹದಲ್ಲಿ ಶಕ್ತಿ ಇಲ್ಲದಂತಾಗಿ ನಿಸ್ಸಾಯಕರಾಗಿರುವ ಇವರನ್ನು ಇಷ್ಟು ದಿನಗಳ ಕಾಲ ಇವರ ಸೇವೆ ಮಾಡಿರುವ ಪ್ರತಿಯೊಬ್ಬರಿಗೂ ಕೂಡ ಕಾರುಣ್ಯ ಕುಟುಂಬದ ವತಿಯಿಂದ ಧನ್ಯವಾದಗಳು. ನಮ್ಮ ಕಾರುಣ್ಯ ಸಂಸ್ಥೆಯೂ ನೆಲೆ ಇಲ್ಲದ ನೊಂದ ಜೀವಿಗಳಿಗೆ ದಾನಿಗಳ ಸಹಾಯ ಸಹಕಾರದೊಂದಿಗೆ ಮಾಡುತ್ತಿರುವ ಈ ಕಾರ್ಯಕ್ಕೆ ಸಹಾಯದ ಮೂಲಕ ಸಹಕರಿಸಿತ್ತಿರುವ ದಾನಿಗಳಿಗೆ ಪುಣ್ಯ ಪ್ರಾಪ್ತಿಯಾಗಲಿ ಎನ್ನುವುದು ನಮ್ಮ ಸಂಸ್ಥೆಯ ಮೂಲ ಉದ್ದೇಶವಾಗಿದೆ. ಮಸ್ಕಿ ತಾಲೂಕಿನಲ್ಲಿ ಸುಮಾರು ಜನರಿಗೆ ಆಶ್ರಯ ನೀಡಿದ ನಮ್ಮ ಕಾರುಣ್ಯ ಆಶ್ರಮಕ್ಕೆ ಮಸ್ಕಿ ವಿಧಾನಸಭಾ ಕ್ಷೇತ್ರದ ಶಾಸಕರು ಒಮ್ಮೆಯೂ ಕೂಡ ಭೇಟಿ ನೀಡಿರುವುದಿಲ್ಲ. ಆದ್ದರಿಂದ ಈಗಲೂ ಕೂಡ ನಮ್ಮ ಶಾಸಕರಲ್ಲಿ ನಾವು ಕೈ ಮುಗಿದು ವಿನಂತಿಸಿಕೊಳ್ಳುವುದೇನೆಂದರೆ ಆಶ್ರಮದ ವಾಸ್ತವ ಸ್ಥಿತಿಯನ್ನು ನೋಡಿ ಆಶ್ರಮಕ್ಕೆ ಬೇಕಾಗಿರುವ ಸ್ವಂತ ಜಾಗ ಹಾಗೂ ಸೌಲಭ್ಯಗಳನ್ನು ಒದಗಿಸಿದರೆ ಇನ್ನೂ ಹೆಚ್ಚಿನ ಸೇವೆಯನ್ನು ಸಮಾಜಕ್ಕೆ ನಮ್ಮ ಕಾರುಣ್ಯ ಸಂಸ್ಥೆಯು ಒದಗಿಸುತ್ತದೆ ಎಂದು ಭಾವನಾತ್ಮಕವಾಗಿ ಮಾತನಾಡಿ ಹನುಮಂತಪ್ಪನನ್ನು ಸಿಬ್ಬಂದಿಗಳೊಂದಿಗೆ ಸ್ವಚ್ಛಗೊಳಿಸಿ ಆಶ್ರಮಕ್ಕೆ ಕರೆದುಕೊಂಡು ಹೋಗಿ ಆಶ್ರಯ ಕೊಟ್ಟರು. ಈ ಸಮಯದಲ್ಲಿ ಪೊಲೀಸ್ ಎ. ಎಸ್. ಐ. ಅಧಿಕಾರಿಗಳಾದ ಸೂರನಗೌಡ ಬಸನಗೌಡ.ಹಾಗೂ ರಾಮಸ್ವಾಮಿ ಸಿ. ಆರ್. ಪಿ. ಮಸ್ಕಿ ಸಿ. ಆರ್. ಸಿ. ಮೋಹನ್ ಬಾವಿಮನಿ ಶಿಕ್ಷಕರು ಜಿ. ಎಚ್. ಪಿ. ಎಸ್. ಕೇಂದ್ರಶಾಲೆ ಮಸ್ಕಿ. ಹಾಗೂ ಪರಶುರಾಮ್ ವಕೀಲರು ಮಸ್ಕಿ. ವೀರೇಶ ಈಶ್ವರಪ್ಪ ಮಸ್ಕಿ. ನಾರಾಯಣಪ್ಪ ಬೋವಿ. ವೀರಭದ್ರಪ್ಪ ಉದ್ಯಮಿಗಳು. ಸತೀಶ್ ಕವಿತಾಳ. ಮಹಮ್ಮದ್ ಬಳಗಾನೂರು ಶುಕ್ರುದ್ದೀನ್ ಮುಖ್ಯೋಪಾಧ್ಯಾಯರು..ರೇಣುಕಾ ಶಿಕ್ಷಕಿಯರು.ಹಾಗೂ ಆಶ್ರಮದ ಸಿಬ್ಬಂದಿಗಳಾದ ಮರಿಯಪ್ಪ. ಹರ್ಷವರ್ಧನ. ಹಾಗೂ ಹಲವಾರು ಸ್ಥಳೀಯರುಗಳು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *