ಕವಿತಾಳ ಸಮೀಪದ ಬಾಗಲವಾಡ, ಹಿರೇಹಣಿಗಿ, ಹುಸೇನಪುರ ಗ್ರಾಮಗಳಲ್ಲಿ ವಿವಿಧ ಕಾಮಗಾರಿಗೆ ಎಂಎಲ್ಸಿ ಎನ್.ಎಸ್. ಬೋಸರಾಜು ಮತ್ತು ಶಾಸಕರಾದ ಜಿ.ಹಂಪಯ್ಯ ನಾಯಕ ಗುರುವಾರ ಭೂಮಿಪೂಜೆ ಮಾಡಿದರು.

ಸಿರವಾರ -: ರಾಜ್ಯ ಹೆದ್ದಾರಿಯಾಗಿ ಮೇಲ್ದರ್ಜೆಗೆ ಏರಿಸಲಾದ ತಾಲೂಕಿನ ಬಾಗಲವಾಡದಿಂದ ಮಾನ್ವಿಗೆ ಹೋಗುವ ಮುಖ್ಯ ರಸ್ತೆಯ ಶಿಥಿಲಗೊಂಡ ಸೇತುವೆಯಿಂದ ಭಾರಿ ವಾಹನಗಳ ಓಡಾಟಕ್ಕೆ ಅನುಕೂಲ ಕಲ್ಪಿಸುವ ಉದ್ದೇಶದಿಂದ 1 ಕೋಟಿ 50ಲಕ್ಷ ರೂಪಾಯಿ ನೀಡಲಾಗಿದೆ ಎಂದು ಮಾಜಿ ಸಚಿವರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್.ಭೋಸರಾಜು ಹಾಗೂ ಮಾನ್ವಿ ಶಾಸಕ ಹಂಪಯ್ಯ ನಾಯಕ ಜಂಟಿಯಾಗಿ ಹೇಳಿದರು.

ಅವರು ಗುರುವಾರ ತಾಲೂಕಿನ ಬಾಗಲವಾಡ ಮಾನ್ವಿ ರಸ್ತೆಯ ಮೇಲೆ ಸೇತುವೆ, ಲಕ್ಷ್ಮೀ ಕ್ಯಾಂಪ್ ನಲ್ಲಿ 10 ಲಕ್ಷ ರೂಪಾಯಿ ಸಿಸಿ ರಸ್ತೆ, ಹುಸೇನಪುರ ಗ್ರಾಮದಲ್ಲಿ ಚರಂಡಿ ಹಾಗೂ ರಸ್ತೆ ನಿರ್ಮಾಣ, ಅಂಗನವಾಡಿ ಕೇಂದ್ರದ ಕಟ್ಟಡ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಚಾಲನೆ ನೀಡಿ ನಂತರ ಹುಸೇನಪುರದಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆಯಿಂದ ಅಂದಾಜು ₹1.4 ಕೋಟಿ ವೆಚ್ಚದಲ್ಲಿ ಚರಂಡಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದರು. ₹20 ಲಕ್ಷ ಮೊತ್ತದಲ್ಲಿ ಅಂಗನವಾಡಿ ಕಟ್ಟಡ ನಿರ್ಮಾಣ, ಹಿರೇಹಣಿಗಿ ಗ್ರಾಮದಲ್ಲಿ ₹10 ಲಕ್ಷ ಮೊತ್ತದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ, ₹15 ಲಕ್ಷ ವೆಚ್ಚದಲ್ಲಿ ಕನಕ ಭವನದ ಅಭಿವೃದ್ಧಿ, ಬಾಗಲವಾಡ ಗ್ರಾಮದಲ್ಲಿ ₹10 ಲಕ್ಷ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ರಾಜ್ಯ ಹೆದ್ದಾರಿ 128ರಲ್ಲಿ ₹1.5 ಕೋಟಿ ಮೊತ್ತದಲ್ಲಿ ಬಾಕ್ಸ್‌ ಕಲ್ವರ್ಟ್ ನಿರ್ಮಾಣ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ’ ಎಂದರು.

ಈ ಸಂದರ್ಭದಲ್ಲಿ ಜಿಪಂ ಮಾಜಿ ಸದಸ್ಯ ಕಿರಿಲಿಂಗಪ್ಪ, ಅಮರೇಗೌಡ ಹಂಚಿನಾಳ, ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ್ ಅತ್ತನೂರು, ಗ್ರಾ.ಪಂ. ಮಾಜಿ ಅಧ್ಯಕ್ಷ ತಿಪ್ಪಣ್ಣ ಬಾಗಲವಾಡ, ತಿಪ್ಪಯ್ಯಸ್ವಾಮಿ, ಮೆಹಬೂಬಸಾಬ್, ವೀರಭದ್ರಪ್ಪ, ಅಯ್ಯಪ್ಪ ನಿಲೋಗಲ್, ಶಿವಣ್ಣ ವಕೀಲ, ದೇವಪ್ಪ ನಾಯಕ, ಅಲ್ಲಮಪ್ರಭು, ರಾಜೇಶ ಬನ್ನಿಗಿಡದ ದೇವಪ್ಪ ಹುಸೇನಪುರ, ಶರಣು ಸಾಹು ಕಾರ ಚಿಂಚರಕಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *