ಅಧಿಕ ಮಾಸದ ಅಂಗವಾಗಿ ಬಳಗಾನೂರು ಪಟ್ಟಣದ ಶ್ರೀ ಕಾಳಿಕಾದೇವಿ ದೇವಸ್ಥಾನದಲ್ಲಿ ಶುಕ್ರವಾರ ಬೆಳಿಗ್ಗೆ ದೇವಿಪುರಾಣ ಪಾರಾಯಣ, ಉಡಿ ತುಂಬುವ ಹಾಗೂ ಕುಂಕುಮಾರ್ಚನೆ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಿದವು.

ಪುರಾಣ ಪ್ರವಚನಕಾರರಾದ ಡಾಕ್ಟರ್,ಶರಭಯ್ಯ ಸ್ವಾಮಿ ಗಣಾಚಾರಿ ಅವರು ಒಂದೇ ದಿನದಲ್ಲಿ ಹದಿನೆಂಟು ಅಧ್ಯಾಯಗಳನ್ನು ಒಳಗೊಂಡ ಶ್ರೀದೇವಿ ಪುರಾಣವನ್ನು ಪಾರಾಯಣ ಮಾಡುವ ಮೂಲಕ ಭಕ್ತರನ್ನು ಆಧ್ಯಾತ್ಮಿಕ ಲೋಕಕ್ಕೆ ಕರೆದೊಯ್ದರು. ತಬಲಾ ವಾದಕರಾದ ಬಸವರಾಜ ಸಾಲವಾಡಗಿ ಹಾಗೂ ಗವಾಯಿಗಳಾದ ಶಿವಪುತ್ರಪ್ಪ ಮೋಟಗಿ ಅವರು ಸಂಗೀತ ಸಹಕಾರ ನೀಡಿದರೆ, ಶರಭಯ್ಯ ಶಾಸ್ತ್ರಿಗಳು ಪುರಾಣ ಪಾರಾಯಣ ಮಾಡಿದರು.

ಶುಕ್ರವಾರ ಬೆಳಗಿನ ಬ್ರಾಹ್ಮೀ ಮುಹೂರ್ತದಲ್ಲಿ ಶ್ರೀ ಕಾಳಿಕಾದೇವಿಗೆ ಪಂಚಾಮೃತ ಅಭಿಷೇಕ, ವಿಶೇಷ ಅಲಂಕಾರ ಹಾಗೂ ಪೂಜೆ ನೆರವೇರಿಸಲಾಯಿತು. ಬಳಿಕ ಮುತ್ತೈದೆಯರಿಗೆ ಉಡಿ ತುಂಬುವ ಕಾರ್ಯಕ್ರಮ ಹಾಗೂ ದೇವಿಗೆ ಕುಂಕುಮಾರ್ಚನೆ ನಡೆಯಿತು.

ಈ ಸಂದರ್ಭದಲ್ಲಿ ದೇವಸ್ಥಾನದ ಅರ್ಚಕ ಪ್ರಭಣ್ಣ,ಸಮಿತಿಯ ಪದಾಧಿಕಾರಿಗಳು, ಸದಸ್ಯರು, ಪಟ್ಟಣದ ವಿಶ್ವಕರ್ಮ ಸಮಾಜದ ಹಿರಿಯರು, ಯುವಕರು ಹಾಗೂ ಸುಮಂಗಲೆಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ದೇವಿಪುರಾಣ ಶ್ರವಣ ಮಾಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

Leave a Reply

Your email address will not be published. Required fields are marked *