ಮಸ್ಕಿ: ಪಟ್ಟಣದಲ್ಲಿರುವ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರದಲ್ಲಿ ಜನ ಶಿಕ್ಷಣ ಸಂಸ್ಥಾನ ರಾಯಚೂರು ಇವರ ನೇತೃತ್ವದಲ್ಲಿ “ಅಸಿಸ್ಟೆಂಟ್ ಕಂಪ್ಯೂಟರ್ ಆಪರೇಟರ್” ತರಬೇತಿ ಉದ್ಘಾಟನೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.
ಉದ್ಘಾಟನೆಯನ್ನು ಶ್ರೀ ಶರಣಯ್ಯ ಗುಡದೂರು ಉಪನ್ಯಾಸಕರು ನೆರವೇರಿಸಿ ಮಾತನಾಡಿ ಮಸ್ಕಿ ಪಟ್ಟಣದಲ್ಲಿ ಹಲವಾರು ವರ್ಷಗಳಿಂದ ಉಚಿತವಾಗಿ ಮತ್ತು ವಿವಿಧ ರೀತಿಯ ಕೌಶಲಗಳನ್ನು ಕಲಿಸುವ ಮೂಲಕ ಹಲವಾರು ವಿದ್ಯಾರ್ಥಿಗಳು ಇಂದು ಸ್ವಂತ ಉದ್ಯೋಗ ಮಾಡುತ್ತಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು. ಅಧ್ಯಕ್ಷತೆಯನ್ನು ಶ್ರೀ ಸದಾನಂದ ಎಂ. ಪೂಜಾರಿ ನಿರ್ದೇಶಕರು ಜೆ ಎಸ್ ಎಸ್ ನಿರ್ವಹಿಸಿದರು. ಈ ವೇಳೆಯಲ್ಲಿ ಕೃಷ್ಣ ಚಿಗರಿ ಪುರಸಭೆ ಸದಸ್ಯ, ಟಿ ಎಸ್ ಸಿ ರಾಯಚೂರ , ಪೋಮಣ್ಣ ರಾಯಚೂರು, ಶಿಕ್ಷಕರಾದ ಚಂದ್ರಶೇಖರ್ ಬೋವಿ, ಯಮನೂರು ಕನ್ನಾರಿ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರದ ವ್ಯವಸ್ಥಾಪಕರು ಹಾಗೂ ಸಂಪನ್ಮೂಲ ವ್ಯಕ್ತಿಗಳು, ಶ್ರೀ ಬಸವರಾಜ್ ಮಾನ್ವಿ ಅಸಿಸ್ಟೆಂಟ್ ಪ್ರೋಗ್ರಾಮ್ ಆಫೀಸರ್ ರಾಯಚೂರ ಹಾಗೂ ಕಲಿಕಾರ್ಥಿಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *