ಮಾನ್ವಿ -: ತಾಲೂಕಿನ ಕರೇಗುಡ್ಡ ಗ್ರಾಮದಲ್ಲಿನ ಮಹಾಂತೇಶ್ವರ ಮಠದ ಆವರಣದಲ್ಲಿ ಶ್ರೀ ಮಹಾಂತೇಶ್ವರ ಮಹಾಸ್ವಾಮಿಗಳ ಮಠದಿಂದ ಗ್ರಾಮದ ಮಾರೆಮ್ಮ ಗುಡಿಯವರೆಗೆ 2025-26 ಕಾಲೋನಿ ಯೋಜನೆಯಡಿಯಲ್ಲಿ 10 ಲಕ್ಷ ವೆಚ್ಚದಲ್ಲಿ ಸಿ.ಸಿ.ರಸ್ತೆ ಹಾಗೂ ಹಿರೇಹಣಿಗಿ- ಹಿರೇಕೋಟೈಕಲ್ ಮುಖ್ಯ ರಸ್ತೆಯಲ್ಲಿ ಬರುವ ಕರೇಗುಡ್ಡ ಕ್ರಾಸಿನಿಂದ ಕರೇಗುಡ್ಡ ಗ್ರಾಮದಲ್ಲಿನ ಶ್ರೀ ಮಹಾಂತೇಶ್ವರ
ಮಹಾಸ್ವಾಮಿಗಳ ಮಠದ ವರೆಗೆ ಸಂಪರ್ಕ ಕಲ್ಪಿಸುವ ರಸ್ತೆಗೆ ಡಾಂಬರೀಕರಣ 446 ಮೀ ರಸ್ತೆಯನ್ನು ಕೆ.ಕೆ.ಆರ್.ಡಿ.ಬಿ. ಮೈಕ್ರೋ ಯೋಜನೆಯಡಿಯಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಅಂದಾಜು 50 ಲಕ್ಷ ವೆಚ್ಚದಲ್ಲಿ ಕಾಮಗಾರಿಗೆ ಭೂಮಿ ಪೂಜೆ, ನೀರಮಾನ್ವಿ ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ಕೈಗೊಂಡಿರುವ ನೀರಮಾನ್ವಿಯಿಂದ ಹರವಿ ಗ್ರಾಮದವರಿಗೆ 1 ಕೋಟಿ 50 ಲಕ್ಷ ರೂಪಾಯಿಗಳ ರಸ್ತೆ ಡಾಂಬರೀಕರಣ ಕಾಮಗಾರಿಗೆ ಭೂಮಿ ಪೂಜೆ, ಕಪಗಲ್ ಗ್ರಾಮದಲ್ಲಿ ರಾಯಚೂರು ಮಾನ್ವಿ ಮುಖ್ಯ ರಸ್ತೆಯಿಂದ ಗ್ರಾಮದ ಮಾರೆಮ್ಮ ಗುಡಿಯವರಿಗೆ ಸುಮಾರು 1 ಕೋಟಿ ರೂಪಾಯಿ ವೆಚ್ಚದ ರಸ್ತೆ ಡಾಂಬರೀಕರಣ ಹಾಗೂ 10 ಲಕ್ಷ ರೂಪಾಯಿ ವೆಚ್ಚದಲ್ಲಿ ಅಂಗನವಾಡಿ ಕೇಂದ್ರದ ಕಟ್ಟಡದ ಭೂಮಿ ಪೂಜೆ ಕಾಮಗಾರಿಯನ್ನು ಮಾಜಿ ಸಚಿವ ಹಾಗೂ ವಿಧಾನ ಪರಿಷತ್ ಸದಸ್ಯರಾದ ಎನ್.ಎಸ್ ಬೋಸುರಾಜ್ ಹಾಗೂ ಮಾನ್ವಿ ಶಾಸಕರಾದ ಜಿ. ಹಂಪಯ್ಯ ನಾಯಕ ಇವರು ನೆರವೇರಿಸಿದರು.

ಈ ಸಂದರ್ಭದಲ್ಲಿ ಸ್ಥಳದಲ್ಲಿದ್ದ ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳಾದ ನಬಿರಸೂಲ್, ಮಕ್ಸುದ್ ಅಲಿ, ನಿರ್ಮಿತಿ ಕೇಂದ್ರ ಹಾಗೂ ಲ್ಯಾಂಡ ಆರ್ಮಿ ಅಧಿಕಾರಿಗಳಿಗೆ ಕಾಮಗಾರಿಯನ್ನು ಉತ್ತಮ ಗುಣಮಟ್ಟದಿಂದ ಆದಷ್ಟು ಬೇಗನೆ ಪ್ರಾರಂಭಿಸಿ ಸಾರ್ವಜನಿಕರಿಗೆ ಅನುಕೂಲಕರವಾಗುವ ರೀತಿಯಲ್ಲಿ ಕಾಮಗಾರಿಯನ್ನು ಮುಗಿಸಲು ಸೂಚಿಸಿದರು.

ಈ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡರಾದ ಮುಸ್ತಫ ಸಾಹುಕಾರ್ ಇವರ ನಿವಾಸಕ್ಕೆ ಭೇಟಿ ನೀಡಿದರು. ಕಪಗಲ್ ಗ್ರಾಮದಲ್ಲಿ ನಡೆಯುತ್ತಿರುವ ಸಣ್ಣ ನೀರಾವರಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ಕೆರೆಯ ಕಾಮಗಾರಿಗೆ ಸಂಬಂಧಪಟ್ಟಂತೆ ರೈತರು ದೂರನ್ನು ನೀಡಿದಾಗ ಕೂಡಲೇ ತಹಸೀಲ್ದಾರರಿಗೆ ದೂರವಾಣಿ ಮುಖಾಂತರ ರೈತರಿಗೆ ಆಗುತ್ತಿರುವ ಅನಾನುಕೂಲತೆಯ ಬಗ್ಗೆ ನಾಳೆ ಸ್ಥಳಕ್ಕೆ ಆಗಮಿಸಿ ಸರಿಪಡಿಸಲು ಸೂಚಿಸಿದರು.

ಈ ಕಾರ್ಯಕ್ರಮದಲ್ಲಿ ಶ್ರೀ ಮಹಾಂತೇಶ್ವರ ಮಠದ ಶ್ರೀ ಮಹಾಂತಲಿಂಗ ಮಹಾಸ್ವಾಮೀಜಿ, ಮುಖಂಡರಾದ ರುದ್ರಪ್ಪ ಅಂಗಡಿ, ಬಸವರಾಜ ಪಾಟೀಲ ಅತ್ತನೂರು, ಅಮರೇಗೌಡ ಹಂಚಿನಾಳ, ರಾಜಾ ಸುಭಾಷಚಂದ್ರ ನಾಯಕ್, ರಾಜಶೇಖರ್ ಪಾಟೀಲ್ ಜಾನೇಕಲ್, ಅಂಬಣ್ಣ ಪಾಟೀಲ್, ಬಸವಲಿಂಗಪ್ಪ ಗೌಡ, ದೊಡ್ಡ ಬಸಪ್ಪ, ಚಂದ್ರಪ್ಪ ಸಾಹುಕಾರ ಬ್ಯಾಗವಾಟ, ರಂಗನಾಥ ನಾಯಕ್, ಶಿವು, ಮಹಾಂತೇಶ ನಕ್ಕುಂಡಿ, ಚನ್ನಬಸವ ನಾಯಕ್, ಬುಡ್ಡಪ್ಪ, ಶಂಕರ ದೊರೆಕ್ಷಾಂತ ತಳವಾರ, ಜೇ.ಗೋಪಾಲ ನಾಯಕ, ಚನ್ನಪ್ಪ ಗೌಡ ಬೆಟ್ಟದೂರು, ಕರಿಯಪ್ಪ ನಾಯಕ ಕಪಗಲ್, ಸೈಯದ್ ಮುಸ್ತಾಫ್ ಸಾಹುಕಾರ, ವಕೀಲರಾದ ಗೋವಿಂದರಾಜು, ಶಂಕರ್ ಗೌಡ ಮಾ.ಪಾ, ನಾಗನಗೌಡ ಬೊಮ್ಮನಾಳ, ಸಣ್ಣ ಯಲ್ಲಯ್ಯ ನಾಯಕ್, ದೊಡ್ಡ ಯಲ್ಲಯ್ಯ ನಾಯಕ್, ಚಂದಪ್ಪ ನಾಯಕ್, ಗೋವಿಂದಪ್ಪ ನಾಯಕ್, ಉತ್ತರಬೂಪ ಮಾದೇವ ನಾಯಕ್, ನರಸಣ್ಣ ನಾಯಕ್, ಕಲ್ಲೂರು ಮಾಣಿಕ್ಯ ಶೆಟ್ಟಿ, ಸಿಕಲ್ ಈಶಪ್ಪ, ಸುಂದರ ಕಪಗಲ್, ಮೈಬೂಬ್ ಕಪಗಲ್, ಬಸಪ್ಪ ನಾಯಕ್, ವೀರೇಶ ನಾಯಕ್, ರಾಜು ಸುಲ್ತಾನ್, ವಿಶ್ವನಾಥ್ ನಾಯಕ್, ಶ್ರೀನಿವಾಸ್ ನಾಯಕ್, ನಾಗರಾಜ್ ಬೊಮ್ಮನಾಳ್, ಶಿವಪ್ಪ ನಾಯಕ್, ಶಿವರಾಯ, ಮಾದೇವ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *