ಸಿಂಧನೂರು – ಸಿಂಧನೂರು ತಾಲೂಕ ಪಂಚಾಯತ ಪಿ.ಎಂ. ಪೋಷಣ್ ಸಹಾಯಕ ನಿರ್ದೇಶಕರು ಹಾಗೂ ತಾಲೂಕಾ ಬಿಸಿಯೂಟದ ಅಧಿಕಾರಿಗಳಾದ ಸಾಬಣ್ಣ ವಗ್ಗರ ಅವರು ತಮ್ಮ 56ನೇ ವರ್ಷದ ಜನ್ಮ ಸಾರ್ಥಕ ದಿನವನ್ನು ಸಿಂಧನೂರು ನಗರದ ವಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆ ಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ಧಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಆಹಾರ ವಸ್ತುಗಳನ್ನು ವಿತರಿಸಿ ಮಹಾಪ್ರಸಾದ ಸೇವೆ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜನ್ಮ ಸಾರ್ಥಕ ದಿನದ ಕಾರ್ಯಕ್ರಮವನ್ನು ನೆರವೇರಿಸಿದರು. ಈ ಕಾರ್ಯಕ್ರಮದಲ್ಲಿ ಆಶ್ರಮದ ವತಿಯಿಂದ ತಾಲೂಕ ಬಿಸಿಯೂಟದ ಅಧಿಕಾರಿಗಳಾದ ಸಾಬಣ್ಣ ವಗ್ಗರ ಹಾಗೂ ಸಿಂಧನೂರು ವಲಯದ ಕ್ಲಸ್ಟರ್ ಅಧಿಕಾರಿಗಳಾದ ಚನ್ನವೀರನಗೌಡ ಇವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು. ನಂತರ ಅಧಿಕಾರಿಗಳಾದ ಸಾಬಣ್ಣ ವಗ್ಗರ ಮಾತನಾಡಿ ಹುಟ್ಟು ಸಾವಿನ ಮಧ್ಯೆ ಮಾನವೀಯತೆಯ ಪಾಠಶಾಲೆಯಾಗಿದೆ ನಮ್ಮ ಕಾರುಣ್ಯಾಶ್ರಮ. ಸಮಾಜದಲ್ಲಿನ ಅದೆಷ್ಟೋ ನೆಲೆ ಇಲ್ಲದ ಹಿರಿಯರನ್ನು ಹಾಗೂ ವಯಸ್ಕರ ಬುದ್ಧಿಮಾಂದ್ಯರನ್ನು ರಕ್ಷಣೆ ಮಾಡುತ್ತಾ ಪ್ರತಿಯೊಬ್ಬರ ಮನೆ ಮನಸ್ಸಿನಲ್ಲಿದೆ. ನಮ್ಮ ನಾಡಿನ ಹರ ಗುರು ಚರಮೂರ್ತಿಗಳ ಬಸವಾದಿ ಶರಣರ ಆಶಯದಂತೆ ಕಾರುಣ್ಯ ಆಶ್ರಮದ ಸೇವಾ ಕಾರ್ಯ ನೆರವೇರುತ್ತಿರುವುದು ನಮ್ಮ ಸಿಂಧನೂರಿನ ಘನತೆ ಗೌರವವನ್ನು ನಾಡಿಗೆ ತೋರಿಸಿಕೊಟ್ಟಂತಹ ಕೀರ್ತಿ ಕಾರುಣ್ಯ ಆಶ್ರಮಕ್ಕೆ ಸಲ್ಲುತ್ತದೆ. ಮನುಕುಲದ ಮನೋಧರ್ಮದ ದೇವಾಲಯವಾಗಿದೆ ಕಾರುಣ್ಯ ಕುಟುಂಬ. ಬಡಜಂಗಮರಾಗಿ ನಾಡಿಗೆ ಕರುಣೆಯ ಸಂಸ್ಕೃತಿಯನ್ನು ತೋರಿಸಿಕೊಟ್ಟಿರುವ ಹರೇಟನೂರಿನ ವೇದಮೂರ್ತಿ ಅಮರಯ್ಯ ಸ್ವಾಮಿಯವರು ಸಮಾಜದ ಬಹುದೊಡ್ಡ ಆಸ್ತಿಯಾಗಿದ್ದಾರೆ. ಈ ಸೇವೆಯಲ್ಲಿ ನಾವು ಆಡಳಿತಾತ್ಮಕವಾಗಿ ಮತ್ತು ವೈಯಕ್ತಿಕವಾಗಿ ನಿರಂತರ ಸಹಾಯ ಸಹಕಾರ ಮಾಡುತ್ತೇವೆ ಎಂದು ಮಾತನಾಡಿ ಆಶ್ರಮದ ಸೇವೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತಪಡಿಸಿದರು. ಈ ಕಾರ್ಯಕ್ರಮದಲ್ಲಿ ಚನ್ನವೀರನಗೌಡ ಸಿ. ಆರ್. ಪಿ. ಸಿಂಧನೂರು ವಲಯ ಕ್ಲಸ್ಟರ್ ಅಧಿಕಾರಿಗಳು. ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ. ಆಶ್ರಮದ ಸದಸ್ಯರಾದ ಸುಜಾತ ಹಿರೇಮಠ ಮತ್ತು ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ. ಸಿದ್ದಯ್ಯ ಸ್ವಾಮಿ. ಮರಿಯಪ್ಪ. ಜ್ಯೋತಿ. ಹಾಗೂ ಅನೇಕರು ಉಪಸ್ಥಿತರಿದ್ದರು

