ಮಸ್ಕಿ: ಪಟ್ಟಣದಲ್ಲಿರುವ ಸರಕಾರಿ ಬಾಲಕೀಯರ ಪ್ರೌಢಶಾಲೆಯಲ್ಲಿ ವಿಶ್ವ ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಹಾಗೂ ಕಾನೂನು ಅರಿವು ಜಾಗೃತಿ ಜಾಥಾ ಕಾರ್ಯಕ್ರಮವನ್ನು ಆಚರಿಸಲಾಯಿತು.ಬಾಲಕಾರ್ಮಿಕ ಪದ್ದತಿ ವಿರೋಧಿ ದಿನಾಚರಣೆ ಕುರಿತು ಪ್ರಮಾಣವಚನವನ್ನು ಭೋಧಿಸಲಾಯಿತು.ನಂತರ ಮಾತನಾಡಿದ ಸರಸ್ವತಿ ಓಟ್ಕರ್ ನ್ಯಾಯಾಧೀಶರು ತಾಲ್ಲೂಕ ಸಿವಿಲ್ ನ್ಯಾಯಾಲಯ ಇವರು ಮಕ್ಕಳನ್ನು ಶಾಲೆಗೆ ಕಳಿಸಬೇಕು ಇಂದು ಸರಕಾರ ಮಕ್ಕಳ ಕಲಿಕೆಗೆ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅದರ ಲಾಭ ಪಡೆದುಕೊಳ್ಳಬೇಕು,ಮುಂದೆ ಉನ್ನತ ಸ್ಥಾನ ಹೊಂದಿ ಸಮಾಜಕ್ಕೆ ಒಳ್ಳೆಯ ವ್ಯಕ್ತಿಗಳಾಗಿ ಬಾಳಬೇಕು ಎಂದು ಹೇಳಿದರು. ಈ ವೇಳೆಯಲ್ಲಿ ಶ್ರೀ ಮಂಜುನಾಥ ಭೋಗಾವತಿ ತಹಶೀಲ್ದಾರರು, ಶ್ರೀ ಶಿವಾನಂದರೆಡ್ಡಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿಗಳು, ಶ್ರೀ ರಾಮಣ್ಣ ಜಲಗೇರಿ ಸಿಪಿಐ,ಶ್ರೀ ವೀರಭದ್ರಪ್ಪ ಹೊಸಮನಿ ಅಧ್ಯಕ್ಷರು ತಾಲ್ಲೂಕ ನ್ಯಾಯವಾದಿಗಳ ಸಂಘ,ಶ್ರೀ ಪಂಪಾಪತಿ ಹೂಗಾರ ಅಧ್ಯಕ್ಷರು ಕ.ರಾ.ಸ.ನೌ.ಸಂಘ ಹಾಗೂ ಶಾಲಾ ಶಿಕ್ಷಕರು ಹಾಗೂ ಮಕ್ಕಳು ಪಾಲ್ಗೊಂಡಿದ್ದರು .

