ಸಿಂಧನೂರು — ಸಿಂಧನೂರು ಮಂಡಲ ಬಿಜೆಪಿ ಗ್ರಾಮೀಣ ಘಟಕದ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಹಾನಂದಮ್ಮ ಕುರುಕುಂದಾ ಅವರು ತಮ್ಮ ಪುತ್ರ ರಾಹುಲ್ ಅವರ 19ನೇ ವರ್ಷದ ಜನ್ಮ ಸಾರ್ಥಕ ದಿನದ ಅಂಗವಾಗಿ ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಆಶ್ರಯದಾತರುಗಳಿಗೆ ಬೆಡ್ ಶೀಟ್ ಗಳನ್ನು ವಿತರಿಸಿ ಹಣ್ಣು ಹಂಪಲುಗಳನ್ನು ವಿತರಿಸಿ ಮಾನವೀಯತೆ ಮೆರೆದರು. ಈ ಸಮಯದಲ್ಲಿ ಆಶ್ರಮದ ವತಿಯಿಂದ ಮಹಾನಂದಮ್ಮ ಕುರುಕುಂದಾ ಅವರನ್ನು ಗೌರವಿಸಿ ಶುಭ ಹಾರೈಸಲಾಯಿತು. ನಂತರ ಬಿಜೆಪಿಯ ಯುವ ಮುಖಂಡರಾದ ದೇವರಾಜ ಜಾಲವಾಡಿಗಿ ಅವರನ್ನು ಆಶ್ರಮದ ವತಿಯಿಂದ ಗೌರವಿಸಿ ಆಶೀರ್ವದಿಸಲಾಯಿತು. ಈ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ಸಿಂಧನೂರುಬಿಜೆಪಿ ಗ್ರಾಮೀಣ ಮಹಿಳಾ ಮೋರ್ಚಾ ಅಧ್ಯಕ್ಷರಾದ ಮಹಾನಂದಮ್ಮ ಮಾತನಾಡಿ ಸಮಾಜ ನಮಗೇನು ಕೊಟ್ಟಿದೆ ಎನ್ನುವುದಕ್ಕಿಂತ ಸಮಾಜಕ್ಕೆ ನಾವೇನು ಕೊಟ್ಟಿದ್ದೇವೆ ಎನ್ನುವುದನ್ನು ಪ್ರತಿಯೊಬ್ಬರು ಕೂಡ ಅರ್ಥ ಮಾಡಿಕೊಂಡು ತಮ್ಮ ಕೈಯಿಂದಾದಂತಹ ಸೇವೆಯನ್ನು ಪ್ರಾಮಾಣಿಕವಾದಂತಹ ನಮ್ಮ ಕಾರುಣ್ಯ ಕುಟುಂಬಕ್ಕೆ ಸಹಾಯ ಸಹಕಾರ ಮಾಡಲು ಸಾರ್ವಜನಿಕರಲ್ಲಿ ವಿನಂತಿಸಿಕೊಳ್ಳುತ್ತಿದ್ದೇನೆ. ನೊಂದವರ ನೆರಳಾಗಿರುವ ಕಾರುಣ್ಯಾಶ್ರಮವೇ ನಿಜವಾದ ದೇವಾಲಯ ಈ ದೇವಾಲಯದಲ್ಲಿರುವ ಎಲ್ಲಾ ಅಶ್ರಯದಾದರುಗಳು ದೇವರ ಸ್ವರೂಪಿಗಳು ಇಂತಹವರ ಸೇವೆ ಮಾಡಲು ನಮಗೆ ಅವಕಾಶ ಮಾಡಿಕೊಟ್ಟಿರುವ ಸಹೋದರರಾದ ಡಾ. ಚನ್ನಬಸವ ಸ್ವಾಮಿಯವರಿಗೆ ನಾವೆಲ್ಲರೂ ಬೆಂಬಲಿತರಾಗಿದ್ದೇವೆ. ಬುದ್ಧ ಬಸವ ಅಂಬೇಡ್ಕರ್ ಇವರುಗಳ ಅನುಬಂಧ ಕಾರುಣ್ಯಾಶ್ರಮದಲ್ಲಿದೆ. ನಾವು ನಮ್ಮ ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆ ಸಂಸ್ಕಾರದ ಶಿಕ್ಷಣವನ್ನು ಕೊಡಿಸಬೇಕಾದರೆ ಈ ಕಾರುಣ್ಯಾಶ್ರಮಕ್ಕೆ ಬೇಟಿ ಕೊಡಿಸಬೇಕು. ನಾವೆಲ್ಲರೂ ಕೂಡ ಕಾರುಣ್ಯ ಆಶ್ರಮದ ಸೇವೆಯಲ್ಲಿ ಸದಾಾವಕಾಲ ಜೊತೆಗಿರುತ್ತೇವೆ ಎಂದು ಭಾವನಾತ್ಮಕವಾಗಿ ಮಾತನಾಡಿ ಎಲ್ಲಾ ವೃದ್ಧರೂ ಹಾಗೂ ಬುದ್ಧಿಮಾಂದ್ಯರಿಗೆ ಬೆಡ್ ಶೀಟ್ ಗಳನ್ನು ವಿತರಿಸಿ ಹಣ್ಣು ಹಂಪರಗಳ ನಿ ವಿತರಿಸಿ ಆಶೀರ್ವಾದ ಸ್ವೀಕರಿಸಿಕೊಂಡರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಂಪಮ್ಮ ವಲಕಮದಿನ್ನಿ ಅಧ್ಯಕ್ಷರು ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ಸಮಿತಿ ಸಿಂಧನೂರು ತಾಲೂಕ. ದೇವರಾಜ ಜಾಲವಾಡಗಿ. ರಾಘವೇಂದ್ರ ಮಾನ್ವಿ. ಜಲಾಲ್ ಪತ್ರಕರ್ತರು ಮಾನ್ವಿ. ಚಾಮುಂಡಿ ಕಾಂಗ್ರೆಸ್ ಮಹಿಳಾ ಮುಖಂಡರು. ಮಲ್ಲಿಕಾರ್ಜುನ ಕುನಟಗಿ ಕರವೇ ಮುಖಂಡರು. ಸಿದ್ರಾಮೇಶ ಕರವೇ ಮುಖಂಡರು ಸಿಂಧನೂರು. ಹಾಗೂ ಅನೇಕರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *