ಸಿಂಧನೂರು — ನಗರದ ಒಳಬಳ್ಳಾರಿ ರಸ್ತೆಯಲ್ಲಿರುವ ಕರ್ನಾಟಕ ಸರ್ಕಾರದ ರಾಜ್ಯ ಪ್ರಶಸ್ತಿ ಪುರಸ್ಕೃತ ಸಂಸ್ಥೆಯಾದ ಶ್ರೀಮಠ ಸೇವಾ ಟ್ರಸ್ಟ್ (ರಿ)ಹರೇಟನೂರು ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದಲ್ಲಿ ಭಾರತೀಯ ಜನತಾ ಪಾರ್ಟಿ ನಗರ ಘಟಕ ಸಿಂಧನೂರು ಹಾಗೂ ರವಿ ಉಪ್ಪಾರ ಸ್ನೇಹ ಬಳಗದ ವತಿಯಿಂದ ಬಿಜೆಪಿ ನಗರ ಘಟಕದ ಪ್ರಧಾನ ಕಾರ್ಯದರ್ಶಿಗಳು ಹಾಗೂ ನಗರಸಭೆಯ ಮಾಜಿ ನಾಮನಿರ್ದೇಶಿತ ಸದಸ್ಯರಾದ ರವಿ ಉಪ್ಪಾರ ಅವರ ಜನ್ಮದಿನವನ್ನು ಆಶ್ರಮದಲ್ಲಿ ಮಹಾಪ್ರಸಾದ ಸೇವೆ ಹಣ್ಣುಹಂಪಲುಗಳನ್ನು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ನೆರವೇರಿಸಲಾಯಿತು. ಈ ಕಾರ್ಯಕ್ರಮದಲ್ಲಿ ರವಿ ಉಪ್ಪಾರ ಹಾಗೂ ತುಮಕೂರು ಜಿಲ್ಲಾ ಸಹಕಾರಿ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತೇಶ ಹಿರೇಮಠ ಇವರುಗಳನ್ನು ಆಶ್ರಮದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ನಂತರ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿಕೊಂಡಿದ್ದ ತುಮಕೂರು ಸಹಕಾರ ಇಲಾಖೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಾದ ಮಹಾಂತೇಶ ಹಿರೇಮಠ ಮಾತನಾಡಿ ಸಮಾಜದಿಂದ ತಿರಸ್ಕೃತಗೊಂಡವರನ್ನು ಮತ್ತು ನೆಲೆ ಇಲ್ಲದವರಿಗೆ ಬದುಕು ಕಟ್ಟಿ ಕೊಟ್ಟಿರುವ ನಮ್ಮ ಕಾರುಣ್ಯ ಆಶ್ರಮವು ಸಿಂಧನೂರಿನ ಕರುಣೆಯ ಸಂಸ್ಕೃತಿಯನ್ನು ರಾಜ್ಯಕಲ್ಲದೆ ದೇಶಕ್ಕೆ ತೋರಿಸಿಕೊಟ್ಟಿದೆ. ಒಳಬಳ್ಳಾರಿ ಲಿಂಗೈಕ್ಯ ಶ್ರೀ ಚನ್ನಬಸವ ತಾತನವರ ಆಶಯದಂತೆ ಕಾರುಣ್ಯ ಆಶ್ರಮದ ಸೇವೆ ಸಮಾಜಕ್ಕೆ ಒದಗಿಸುತ್ತಿರುವ ನಮ್ಮ ಸಹೋದರರಾದ ಚನ್ನಬಸವ ಸ್ವಾಮಿಯವರು ಸಮಾಜದಲ್ಲಿರುವ ಅಸ್ಪೃಶ್ಯತೆಯನ್ನು ಅಳಿಸಿ ಹಾಕುತ್ತಿದ್ದಾರೆ. ಮತ್ತು ಸಮಾಜದಲ್ಲಿನ ಅನಾಥ ಎನ್ನುವ ಪ್ರಜ್ಞೆಯನ್ನು ಅಳಿಸಿ ಹಾಕುವುದೇ ನಮ್ಮ ಕಾರುಣ್ಯಾಶ್ರಮದ ಸಂಕಲ್ಪವಾಗಿದೆ. ನಾಡಿನ ಶ್ರೀಮಠಗಳ ಸಂಸ್ಕೃತಿಯನ್ನು ಮೈಗೂಡಿಸಿಕೊಂಡು ಮಾಡುತ್ತಿರುವ ಈ ಸೇವೆ ಭಗವಂತನ ಪೂಜೆಗಿಂತ ಮಿಗಿಲಾದುದು. ಇಂತಹ ಪುಣ್ಯಕ್ಷೇತ್ರವನ್ನು ನಮ್ಮ ಸ್ನೇಹಿತರಾದ ರವಿ ಉಪ್ಪಾರ ಅವರು ಪ್ರೀತಿಸಿ ಪೂಜಿಸಿ ತಮ್ಮ ಸೇವೆಯನ್ನು ಅರ್ಪಿಸುತ್ತಿರುವುದು ನಮ್ಮೆಲ್ಲಾ ಸ್ನೇಹಿತರಿಗೆ ಸ್ಪೂರ್ತಿಯಾಗಿದೆ. ಸಮಾಜದಲ್ಲಿ ಇಂತಹ ವೃದ್ಧಾಶ್ರಮಗಳು ಹೆಚ್ಚಾಗದಂತೆ ನೋಡಿಕೊಳ್ಳುವುದು ಪ್ರತಿಯೊಬ್ಬ ಯುವಕರ ಜವಾಬ್ದಾರಿಯಾಗಿದೆ. ಈ ಕಾರುಣ್ಯ ಆಶ್ರಮದಲ್ಲಿ ನಿರಂತರವಾಗಿ ದಾನಿಗಳಲ್ಲಿ ನೀವು ಆಶ್ರಮಕ್ಕೆ ಏನನ್ನಾದರೂ ಕೊಡಿ ಆದರೆ ನಿಮ್ಮ ಹೆತ್ತವರನ್ನು ರಕ್ತ ಸಂಬಂಧಿಗಳನ್ನು ಮಾತ್ರ ಕೊಡಬೇಡಿ ಎನ್ನುವ ಹಲವಾರು ಅಭಿಮಾನಗಳು ಮಾನವೀಯತೆಗೆ ಮೆರುಗು ತಂದಿವೆ. ಮುಂದಿನ ದಿನಮಾನಗಳಲ್ಲಿ ನಾವು ನಮ್ಮೆಲ್ಲಾ ಸ್ನೇಹ ಬಳಗ ಕಾರುಣ್ಯ ಆಶ್ರಮದ ಸೇವೆಯಲ್ಲಿ ಜೊತೆಗಿರುತ್ತೇವೆ ಎಂದು ಮಾತನಾಡಿದರು. ನಂತರ ರವಿ ಉಪ್ಪಾರ ಮಾತನಾಡಿ ಈ ಕಾರುಣ್ಯ ಆಶ್ರಮ ಹುಟ್ಟಿದಾಗಲೂ ಸಹ ನಮ್ಮೆಲ್ಲರಿಗೆ ಕರುಣೆಯ ಕುಟುಂಬವಾಗಿ ಯುವಕರಿಗೆ ಸಮಾಜ ಸೇವಾ ಮನೋಭಾವನೆಯನ್ನು ಆಳವಡಿಸಿದೆ. ಈ ಆಶ್ರಮದ ಕಷ್ಟ ಸುಖಗಳಲ್ಲಿ ನಾನು ಹಾಗೂ ನನ್ನೆಲ್ಲಾ ಸ್ನೇಹ ಬಳಗ ಜೊತೆಗಿರುತ್ತೇವೆ ನಿಮ್ಮೆಲ್ಲರ ಹರಕೆ ಹಾರೈಕೆ ಆಶೀರ್ವಾದ ನನ್ನ ಹಾಗೂ ನನ್ನ ಕುಟುಂಬದ ಮೇಲಿರಲಿ ಎಂದು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹುಲ್ಲೇಶ ಸಿಬ್ಬಂದಿಗಳು ಗ್ರಾ. ಪಂ.ಕಾರ್ಯಾಲಯ ಮಾಡಸಿರವಾರ. ಬಸವರಾಜ ಅಂಬೇಡ್ಕರ್ ಸೇವಾ ಸಮಿತಿ ಕರ್ನಾಟಕ ರಾಜ್ಯ ಅಧ್ಯಕ್ಷರು ರಾಯಚೂರು ಜಿಲ್ಲಾ. ಹುಸೇನಪ್ಪ ನಂಜಲದಿನ್ನಿ ಪೊಲೀಸ್ ಅಧಿಕಾರಿಗಳು.ನಾಗರಾಜ ಸ್ವಾಮಿ ಖ್ಯಾತ ಜೋತಿಷಿಗಳು ಸಿಂಧನೂರು.ಮಂಜುನಾಥ ಗಾಣಿಗೇರ ಕರವೇ ತಾಲೂಕಾಧ್ಯಕ್ಷರು. ಬೂದೇಶ ಮರಾಠ ಕರವೇ ತಾಲೂಕ ಉಪಾಧ್ಯಕ್ಷರು. ಮೌನೇಶ. ಗೋವಿಂದ ಉಪ್ಪಾರ. ಉಮೇಶ ಬಾಲಿ. ಶಂಕರ್ ತರಬೇತಿದಾರರು ಗುರು ಅಕಾಡೆಮಿ. ಹಾಗೂ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ.ಚನ್ನಬಸವ ಸ್ವಾಮಿ ಹಿರೇಮಠ. ಶ್ರೀ ಮಠ ಸೇವಾ ಟ್ರಸ್ಟ್ ನ ಸದಸ್ಯರಾದ ಸುಜಾತ ಹಿರೇಮಠ. ಆಶ್ರಮದ ಸಿಬ್ಬಂದಿಗಳಾದ ಸುಜಾತ ಮಲದಗುಡ್ಡ ಸಿದ್ದಯ್ಯ ಸ್ವಾಮಿ ಮರಿಯಪ್ಪ ಜ್ಯೋತಿ ಮತ್ತು ರವಿ ಉಪ್ಪಾರ ಅವರ ಅಪಾರ ಸ್ನೇಹ ಬಳಗದ ಸ್ನೇಹಿತರುಗಳು ಭಾಗವಹಿಸಿದ್ದರು.

Leave a Reply

Your email address will not be published. Required fields are marked *