ರಾಯಚೂರು ಜೂನ್ 02 (ಕರ್ನಾಟಕ ವಾರ್ತೆ): ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ವ್ಯಾಪ್ತಿಯ : ಮನ್ಸಾಲಪೂರು ಗ್ರಾಮದ ನಿವಾಸಿಯಾದ ಕುಮಾರಿ ಶಾರದಮ್ಮ ತಂದೆ ಬಸವರಾಜ (35) ಎಂಬ ಮಹಿಳೆಯು ಮೇ.23ರ ರಾತ್ರಿ 07.40 ತಮ್ಮ ಮನೆಯಿಂದ ಹೊರಗಡೆ ಲ್ಯಾಟ್ರೀನ್‌ಗೆ ಹೋಗಿ ಬರುತ್ತೇನೆ ಎಂದು ಹೋದವಳು ಮರಳಿ ಮನೆಗೆ ಬಾರದೆ ಕಾಣೆಯಾಗಿದ್ದು, ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ-92/2026 ಕಲಂರಡಿ ಮಹಿಳೆ ಕಾಣೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.
ಕಾಣೆಯಾದ ಕುರಿತು ಸಂಬಂಧಿಕರ ಇರುವ ಊರುಗಳಿಗೆ ಹಾಗೂ ಆಕೆಯ ಗೆಳೆಯತಿರಿಗೆ ಪೋನ್ ಮಾಡಿ ವಿಚಾರಿಸಿದಾಗ್ಯೂ ಎಲ್ಲಿಯು ಸಿಗದೇ, ವಾಪಾಸು ಮನೆಗೆ ಬಾರದೇ ಕಾಣೆಯಾಗಿದ್ದಾಳೆ.
ಕಾಣೆಯಾದ ಮಹಿಳೆ ಚಹರಾ ಪಟ್ಟಿ: ವಯಸ್ಸು 35 ವರ್ಷ, ಉದ್ಯೋಗ ಕೂಲಿ ಕೆಲಸ, ಅಂದಾಜು 4.4 ಅಡಿ ಎತ್ತರ, ಗೋದಿ ಮೈ ಬಣ್ಣ, ಗುಂಡನೇಯ ಮುಖ, ಕಪ್ಪುಕೂದಲು, ಕೆಂಪ್ಪು ಬಣ್ಣದ ಟಾಪು ಮತ್ತು ಕಪ್ಪು
ಬಣ್ಣಧ ವೇಲ್, ಪ್ಯಾಂಟ್ ಧರಿಸಿರುತ್ತಾಳೆ. ಕನ್ನಡ. ತೆಲುಗು, ಹಿಂದಿ ಭಾಷೆ ಮಾತಾನಾಡುತ್ತಾಳೆ.
ಈ ಮಹಿಳೆಯ ಪತ್ತೆಯಾದಲ್ಲಿ ಅಥವಾ ಮಾಹಿತಿ ಸಿಕ್ಕಲಿ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯ ದೂರವಾಣಿ ಸಂಖ್ಯೆ: 08532-235308, ಪಿಎಸ್‌ಐ ಮೊಬೈಲ್ ಸಂಖ್ಯೆ: 9480803850ಗೆ ಸಂಪರ್ಕ ಮಾಡಬಹುದಾಗಿದೆ ಎಂದು ಠಾಣೆಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *