ರಾಯಚೂರು ಜೂನ್ 02 (ಕರ್ನಾಟಕ ವಾರ್ತೆ): ರಾಯಚೂರಿನ ಜೆಸ್ಕಾಂ ಕಾರ್ಯ ಪಾಲನೆ ವೃತ್ತದ ವತಿಯಿಂದ ಜಿಲ್ಲೆಯ ಎಲ್ಲಾ ತಾಲ್ಲೂಕಿನ ಜೆಸ್ಕಾಂ ಉಪ ವಿಭಾಗಳಲ್ಲಿ ಗ್ರಾಹಕರ ಕುಂದು ಕೊರೆತೆ ತ್ರೈಮಾಸಿಕ ಸಭೆಯನ್ನು ಕಾರ್ಯ ಮತ್ತು ಪಾಲನೆ ವೃತದ ಅಧೀಕ್ಷಕ ಅಭಿಯಂತರರು ಅವರ ಅಧ್ಯಕ್ಷತೆಯಲ್ಲಿ ವಿವಿಧ ದಿನಾಂಕಗಳಂದು ಹಮ್ಮಿಕೊಳ್ಳಲಾಗಿದೆ.
ಜೂನ್ 04ರ ಬೆಳಿಗ್ಗೆ 11ಗಂಟೆಗೆ ಸಿಂಧನೂರು, ಜೂನ್ 06ರ ಬೆಳಿಗ್ಗೆ 11ಗಂಟೆಗೆ ರಾಯಚೂರು ನಗರ ಉಪ ವಿಭಾಗ 01, ಜೂನ್ 10ರ ಬೆಳಿಗ್ಗೆ 11ಗಂಟೆಗೆ ಶಕ್ತಿನಗರ, ಜೂನ್ 12ರ ಬೆಳಿಗ್ಗೆ 11ಗಂಟೆಗೆ ಮಾನವಿ, ಜೂನ್ 15ರ ಬೆಳಿಗ್ಗೆ 11ಗಂಟೆಗೆ ರಾಯಚೂರು ನಗರ ಉಪ ವಿಭಾಗ 2ರಲ್ಲಿ ಗ್ರಾಹಕರ ಕುಂದು ಕೊರೆತೆ ತ್ರೆöÊಮಾಸಿಕ ಸಭೆ ನಡೆಯಲಿದ್ದು, ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಗ್ರಾಹಕರು ಹಾಜರಾಗಿ ತಮ್ಮ ಕುಂದು ಕೊರತೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ ಎಂದು ರಾಯಚೂರಿನ ಜೆಸ್ಕಾಂ ಕಾರ್ಯ ಪಾಲನೆ ವೃತ್ತದ ಅಧೀಕ್ಷಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
