ಸಿಂಧನೂರು -02 ಜಿಲ್ಲಾಡಳಿತ ಜಿಲ್ಲಾ ಪಂಚಾಯತ್ ರಾಯಚೂರ್ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ರಾಯಚೂರು, ಜಿಲ್ಲಾ ತಂಬಾಕು ನಿಯಂತ್ರಣ ಕೋಶ ರಾಯಚೂರು,ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಹಾಗೂ ತಾಲೂಕು ಸಾರ್ವಜನಿಕ ಆಸ್ಪತ್ರೆ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರ ಗಾಂಧಿನಗರ ಇವರ ಸಂಯುಕ್ತಾಶ್ರಯದಲ್ಲಿ ಅರಳಹಳ್ಳಿ ಆಯುಷ್ಮಾನ್ ಆರೋಗ್ಯ ಕೇಂದ್ರಕ್ಕೆ ಒಳಪಡುವ ಮೂರು (3) ಮೈಲಿ ಕ್ಯಾಂಪಿನಲ್ಲಿ ಇಂದು ತಂಬಾಕು ವಿರೋಧಿ ದಿನಾಚರಣೆ ಆಚರಿಸಲಾಯಿತು ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಮತಿ ಗೀತಾ ಹಿರೇಮಠ ತಾಲೂಕು ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿಗಳು ತಾಲೂಕ ಆರೋಗ್ಯ ಅಧಿಕಾರಿಗಳ ಕಾರ್ಯಾಲಯ ಸಿಂಧನೂರ್ ಇವರು ಪ್ರತಿವರ್ಷ ಮೇ 31ರಂದು ವಿಶ್ವದಾದ್ಯಂತ ವಿಶ್ವ ತಂಬಾಕು ರಹಿತ ದಿನವನ್ನು ಆಚರಿಸಲಾಗುತ್ತದೆ ತಂಬಾಕು ಸೇವನೆಯಿಂದ ಉಂಟಾಗುವ ಗಂಭೀರ ಆರೋಗ್ಯ ಸಮಸ್ಯೆಗಳು ಮತ್ತು ಸಾವು ನೋವುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸುವುದು ಈ ದಿನದ ಮುಖ್ಯ ಉದ್ದೇಶವಾಗಿದೆ ತಂಬಾಕು ರಹಿತ ದಿನದ ಇದನ್ನು ವಿಶ್ವ ಆರೋಗ್ಯ ಸಂಸ್ಥೆ(WHO )1987 ರಲ್ಲಿ ಪ್ರಾರಂಭಿಸಿತು ಆರೋಗ್ಯದ ಮೇಲಿನ ದುಷ್ಪರಿಣಾಮಗಳು ಧೂಮಪಾನ ಮತ್ತು ತಂಬಾಕು ಜಗಿಯುವ ಅಭ್ಯಾಸದಿಂದ ಶ್ವಾಸಕೋಶದ ಕ್ಯಾನ್ಸರ್, ಕ್ಯಾನ್ಸರ್, ಹೃದ್ರೋಗ ಹಾಗೂ ವಿವಿಧ ಉಸಿರಾಟದ ಕಾಯಿಲೆಗಳು ಬರುತ್ತವೆ ಜಾಗತಿಕ ಸಾವು ಪ್ರತಿವರ್ಷ ಪ್ರಪಂಚದಾದ್ಯಂತ ತಂಬಾಕು ಸಂಬಂಧಿತ ಕಾಯಿಲೆಗಳಿಂದ ಹೆಚ್ಚು ಜನರು ಮೃತಪಡುತ್ತಿದ್ದಾರೆ ಈ ದಿನದಂದು ಭಾರತದಾದ್ಯಂತ ಇರುವ ವಿವಿಧ ಆಸ್ಪತ್ರೆಗಳು ಮತ್ತು ಸರ್ಕಾರಿ ಇಲಾಖೆಗಳು ತಂಬಾಕು ತ್ಯಜಿಸಲು ಬಯಸುವವರಿಗೆ ವಿಶೇಷ ಸಲಹೆ ಮತ್ತು ಚಿಕಿತ್ಸಾ ಶಿಬಿರಗಳನ್ನು ಆಯೋಜಿಸುತ್ತವೆ, ಧೂಮಪಾನ ಮಾಡುವುದು, ತಂಬಾಕು ಸೇವನೆಯು ಶ್ವಾಸಕೋಶ, ಬಾಯಿ, ಗಂಟಲು, ಮತ್ತು ಮೂತ್ರಕೋಶ ಸೇರಿದಂತೆ ಕನಿಷ್ಠ 15 ಬಗೆಯ ಕ್ಯಾನ್ಸರಗಳಿಗೆ ಕಾರಣವಾಗುತ್ತದೆ ಇದು ಹೃದಯಘಾತ ಮತ್ತು ಶ್ವಾಸಕೋಶದ ತೀವ್ರ ಕಾಯಿಲೆಗಳನ್ನು ಉಂಟುಮಾಡುತ್ತದೆ ವಿಶ್ವ ಆರೋಗ್ಯ ಸಂಸ್ಥೆ ಪ್ರಕಾರ ತಂಬಾಕಿನಿಂದಾಗಿ ಪ್ರತಿ ವರ್ಷ ವಿಶ್ವದಾದ್ಯಂತ ಒಂದು ಕೋಟಿಗೂ ಹೆಚ್ಚು ಜನರು ಸಾವನ್ನು ಒಪ್ಪುತ್ತಿದ್ದಾರೆ ಈ ದಿನದ ಆಚರಣೆಯ ಮಹತ್ವ ತಂಬಾಕು ಕಂಪನಿಗಳ ಮಾರಾಟ ತಂತ್ರಗಳ ಬಗ್ಗೆ ಜನರಿಗೆ ಅರಿವು ಮೂಡಿಸುವುದು ತಂಬಾಕು ತೇಜಿಸಲು ಬಯಸುವವರಿಗೆ ಸೂಕ್ತ ಬೆಂಬಲ ಮತ್ತು ಮಾಹಿತಿ ನೀಡುವುದು ತಂಬಾಕು ಸೇವನೆಯನ್ನು ಕಡಿಮೆ ಮಾಡಲು ಕಟ್ಟುನಿಟ್ಟಾದ ನೀತಿಗಳನ್ನು ಜಾರಿಗೆ ತರುವುದು ತಂಬಾಕು ಮುಕ್ತ ಜೀವನ ಶೈಲಿಯನ್ನು ಅಳವಡಿಸಿಕೊಳ್ಳುವುದು ನಿಮ್ಮ ಮತ್ತು ನಿಮ್ಮ ಕುಟುಂಬದ ಆರೋಗ್ಯಕ್ಕೆ ಅತ್ಯಂತ ಸುರಕ್ಷಿತವಾಗಿದೆ ತಂಬಾಕು ತ್ಯಜಿಸುವ ಕುರಿತು ಹೆಚ್ಚಿನ ಮಾಹಿತಿ ಮತ್ತು ವೈದ್ಯಕೀಯ ನೆರವು ಪಡೆಯಬಹುದು ಶ್ರೀ ರಾಮಾಂಜನ್ ಕುಮಾರ್ ಆರ್ ಕೆ ಎಸ್ ಕೆ ಆಪ್ತ(RKSK) ಸಮಾಲೋಚಕರು ಈ ಕಾರ್ಯಕ್ರಮದ ಮುಖಾಂತರ ಸಾರ್ವಜನಿಕರಿಗೆ ತಂಬಾಕುವಿನಿಂದ ಆಗುವಂತ ದುಷ್ಪರಿಣಾಮಗಳ ಬಗ್ಗೆ ತಿಳಿಸಿ ಜಾಗೃತಿ ಮಾಡಿಸುತ್ತಾರೆ ನಿಮ್ಮ ಉಸಿರು ತಂಬಾಕಿನ ಹೊಗೆಯಿಂದ ಅಲ್ಲ ಶುದ್ಧ ಗಾಳಿಯಿಂದ ತುಂಬಿರಲಿ ಇದಕ್ಕೆ ಸಾರ್ವಜನಿಕರು ಸಹಕರಿಸಲು ತಿಳಿಸಿದರು ಸಮುದಾಯ ಮಟ್ಟದಲ್ಲಿ ತಂಬಾಕಿನ ಸೇವನೆ ಮತ್ತು ತಂಬಾಕಿನ ಉತ್ಪನ್ನಗಳ ಸೇವನೆ ಹೆಚ್ಚಾಗುತ್ತಿದ್ದು ಹಾದಿಹರಿಯದವರಲ್ಲಿ ದುಶ್ಚಟವಸನಗಳು ಹೆಚ್ಚಾಗುತ್ತಿದೆ ಇದರಿಂದಾಗಿ ಹದಿಹರೆದವರು ತುಂಬಾ ಸಮಸ್ಯೆಗಳನ್ನು ಎದುರಿಸುವಂತೆ ಇದರ ನಿಯಂತ್ರಣಕ್ಕೆ ಸಾರ್ವಜನಿಕ ರು ಮತ್ತು ಗ್ರಾಮದ ಮಹಿಳೆಯರು ಪೌಷ್ಟಿಕ ಆಹಾರ ಸೇವನೆ ವೈಯಕ್ತಿಕ ಸ್ವಚ್ಛತೆ ಗಳಿಂದ ದೂರವಿರುವಂತೆ ಕುಟುಂಬದಲ್ಲಿನ ಸದಸ್ಯರುಗಳ ಜಾಗೃತಿ ವಹಿಸುವಂತೆ ತಿಳಿಸಿದರು ಮಹಿಳೆಯರು ತಮ್ಮ ಮಕ್ಕಳ ಪುರುಷರ ಮತ್ತು ತಮ್ಮ ಆರೋಗ್ಯದ ಕುರಿತು ಹೆಚ್ಚಿನ ಜಾಗೃತಿ ವಹಿಸಬೇಕೆಂದು ಆರೋಗ್ಯ ಇಲಾಖೆ ವತಿಯಿಂದ ಕೇಳಿಕೊಂಡರು ಈ ಸಂದರ್ಭದಲ್ಲಿ ಶ್ರೀಮತಿ ಸಾವಿತ್ರಿ PHCO, ವಿಜಯಲಕ್ಷ್ಮಿ, ಅಕ್ಕಮಹಾದೇವಿ ಅಂಗನವಾಡಿ ಕಾರ್ಯಕರ್ತೆಯರು, ಅಂದಮ್ಮ ಆಶಾ ಕಾರ್ಯಕರ್ತೆ, ಸಾರ್ವಜನಿಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *