ಕೇರಳದ ಮಾಜಿ ಮುಖ್ಯಮಂತ್ರಿ ಹಾಗೂ ಸಿಪಿಐ(ಎಂ) ಪೊಲಿಟ್ ಬ್ಯೂರೋ ಸದಸ್ಯ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ, ಇಡಿ ನಡೆಸಿದ ದಾಳಿ ಹಾಗೂ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಸಿಪಿಐ(ಎಂ) ನಾಯಕರ ಬಂಧನವನ್ನು ಖಂಡಿಸಿ ಪಟ್ಟಣದಲ್ಲಿ ಸಿಪಿಐ(ಎಂ) ಲಿಂಗಸಗೂರು ತಾಲೂಕು ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿ ಸಿಪಿಐ(ಎಂ) ಮುಖಂಡರು ಕೇಂದ್ರ ಸರ್ಕಾರ ಹಾಗೂ ಇಡಿ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿ. ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗೆ ಬಳಸಿಕೊಳ್ಳುವುದನ್ನು ತಕ್ಷಣ ನಿಲ್ಲಿಸಬೇಕು ಎಂದು ಆಗ್ರಹಿಸಿದರು. ಪ್ರತಿಭಟನೆಯನ್ನು ಉದ್ದೇಶಿಸಿ ಸಿಪಿಐ(ಎಂ) ಲಿಂಗಸಗೂರು ತಾಲೂಕು ಕಾರ್ಯದರ್ಶಿ ರಮೇಶ ವೀರಾಪೂರು ಮಾತನಾಡಿದ ಅವರು, ಪಿಣರಾಯಿ ವಿಜಯನ್ ಅವರ ನಿವಾಸದ ಮೇಲಿನ ಇಡಿ ದಾಳಿ ಸಂಪೂರ್ಣ ರಾಜಕಿ ಯ ಪ್ರೇರಿತ ಕ್ರಮವಾಗಿದೆ. ಎಕ್ಸಲಾಜಿಕ್ ಪ್ರಕರಣಕ್ಕೆ ಅವರಿಗೆ ಯಾವುದೇ ಸಂಬಂಧ ಇಲ್ಲವೆಂದು ನ್ಯಾಯಾಲಯಗಳು ಹಲವು ಬಾರಿ ಸ್ಪಷ್ಟಪಡಿಸಿದ್ದರೂ, ಅವರನ್ನು ನಿರಂತರವಾಗಿ ಗುರಿಯಾಗಿಸಲಾಗುತ್ತಿದೆ. ಇದು ಪ್ರತೀಕಾರದ ರಾಜಕೀಯದ ಭಾಗವಾಗಿದೆಂದು ಗಂಭೀರವಾಗಿ ಆರೋಪಿಸಿದರು.
ದೆಹಲಿ ಇಡಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಸಿಪಿಐ(ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ದೆಹಲಿ ಇಡಿ ಕಚೇರಿ ಎದುರು ನಡೆದ ಪ್ರತಿಭಟನೆಯ ವೇಳೆ ಸಿಪಿಐ(ಎಂ) ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಎಂ.ಎ. ಬೇಬಿ, ಹಿರಿಯ ನಾಯಕಿ ಬೃಂದಾ ಕಾರಟ್, ಪೊಲಿಟ್ ಬ್ಯೂರೋ ಸದಸ್ಯರಾದ ಅಶೋಕ್ ಧವಳೆ, ಮರಿಯಂ ಧವಳೆ ಹಾಗೂ ವಿಜೂ ಕೃಷ್ಣನ್, ಕೇಂದ್ರ ಸಮಿತಿ ಸದಸ್ಯ ವಿಕ್ರಂ ಸಿಂಗ್ ಮತ್ತು ದೆಹಲಿ ರಾಜ್ಯ ಕಾರ್ಯದರ್ಶಿ ಅನುರಾಗ್ ಸಕ್ಷೇನಾ ಸೇರಿದಂತೆ ಹಲವು ಪ್ರಮುಖ ನಾಯಕರನ್ನು ಪೊಲೀಸರು ಬಂಧಿಸಿದ್ದಾರೆ. ಅಲ್ಲದೆ, ನೂರಕ್ಕೂ ಹೆಚ್ಚು ಪ್ರತಿಭಟನಾಕಾರರನ್ನೂ ಬಂಧಿಸಿರುವುದನ್ನು ತೀವ್ರವಾಗಿ ಖಂಡಿಸಿದ್ದಾರೆ. ಈ ಬಂಧನಗಳು ಪ್ರಜಾಪ್ರಭುತ್ವದ ಹಕ್ಕುಗಳ ಮೇಲೆ ನಡೆದ ದಾಳಿಯಾಗಿ ದ್ದು, ವಿರೋಧದ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನವಾಗಿದೆ ಎಂದು ಅವರು ಆರೋಪಿಸಿದರು.
ಕಾರ್ಮಿಕ ಮುಖಂಡ ಮೈನುದ್ದೀನ್ ಮಾತನಾಡಿ ಇಂತಹ ಬೆದರಿಕೆಗಳು ಮತ್ತು ದಾಳಿಗಳ ಮೂಲಕ ಕಮ್ಯೂನಿಸ್ಟ್ ಚಳವಳಿಯನ್ನು ಕುಗ್ಗಿಸಲು ಸಾಧ್ಯವಿಲ್ಲ. ಪ್ರಜಾಪ್ರಭುತ್ವ, ಸಂವಿಧಾನ ಮತ್ತು ಜನರ ಹಕ್ಕುಗಳ ರಕ್ಷಣೆಗಾಗಿ ಹೋರಾಟವನ್ನು ಇನ್ನಷ್ಟು ಬಲವಾಗಿ ಮುಂದುವರಿಸಲಾಗುವುದು ಎಂದು ಎಚ್ಚರಿಸಿದರು.
ಈ ವೇಳೆ ಸಿಪಿಐ(ಎಂ) ಮುಖಂಡರಾದ ವೆಂಕೋಬ ಮೀಯ್ಯಾಪೂರು, ಶಾಂತಕುಮಾರಿ, ಪೆಂಚಲಯ್ಯ, ಸಾಹೀರಾ ಬಾನು, ನಿಂಗಪ್ಪ, ದುರುಗಮ್ಮ, ರಮೇಶ ಬಾಬು, ಹನೀಫ್, ಸೋಮಣ್ಣ, ಅಮರೇಶ ಗುರಿಕಾರ, ಗುಂಡಪ್ಪ ಗುರಿಕಾರ, ವೆಂಕಟೇಶ ಕೋರಕಲ್, ಹಾಜಿಬಾಬು, ಅಲ್ಲಾಭಕ್ಷ, ಖಾಜಾ ಟೈಲ್ಸ್, ರಫಿ ಮಲ್ಲಾಪೂರು, ಬಸವರಾಜ ನಗನೂರು, ರಮೇಶ ಜೆ, ಮೌನೇಶ ಕಡೋಣಿ, ಚಂದ್ರಶೇಖರ ನೆಲೋಗಿ, ವೆಂಕಟೇಶ ಚಿಕ್ಕನಗನೂರು, ದಾವೂದ್, ರಸೂಲ್, ಮಹಾಂತೇಶ ಸೇರಿದಂತೆ ಇದ್ದರು.
