ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಬೋದನೆ,ಬಿಸಿಯೂಟ, ಸಮವಸ್ತ್ರ ಪಠ್ಯಪುಸ್ತಕ ಸೇರಿದಂತೆ ಹಲವು ಸೌಲಭ್ಯಗಳನ್ನು ಉಚಿತವಾಗಿ ಸರಕಾರ ನೀಡುತ್ತಿದೆ.ಕನ್ನಡದ ಜತೆಗೆ ಇಂಗ್ಲೀಷ ಕಲಿಸಲು ಅವಕಾಶ ಕಲ್ಪಿಸಿದೆ ಪಾಲಕರು ತಮ್ಮ ಮಕ್ಕಳಿಗೆ ಕಡ್ಡಾಯವಾಗಿ ಶಿಕ್ಷಣ ಕೊಡಿಸಬೇಕು.ಮಕ್ಕಳು ದೇಶದ ಭವಿಷ್ಯದ ಆಸ್ತಿ ಎಂದು ಶಾಸಕಿ ಕರೆಮ್ಮ ಜಿ.ನಾಯಕ ಹೇಳೀದರು.

ಅವರು ತಾಲೂಕಿನ ಎನ್ ಗಣೇಕಲ್ ಗ್ರಾಮದಲ್ಲಿ ಮೈಕ್ರೋ ಯೋಜನೆ ಅಡಿಯಲ್ಲಿ ಸುಮಾರು 1ಕೋಟಿ 30ಲಕ್ಷ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ನೂತನ ಶಾಲಾ ಕಟ್ಟಡ ಹಾಗೂ ಸ್ಮಾರ್ಟ್ ಕ್ಲಾಸ್ ಮತ್ತು 2026 -27 ನೇ ಸಾಲಿನ ಶೈಕ್ಷಣಿಕ ವರ್ಷದ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಅವರು ಮಾತನಾಡಿದರು.

ಇಂದು ಎನ್ ಗಣೇಕಲ್ ಗ್ರಾಮದಲ್ಲಿ ಶಾಲಾಪ್ರಾರಂಭೋತ್ಸವ ಅಂಗವಾಗಿ ಬಂಡಿಯಲ್ಲಿ ಅದ್ದೂರಿಯಾಗಿ ಪಾಲಕರು,ಶಿಕ್ಷಕರು ಶಾಲಾ ಮಕ್ಕಳು ಸೇರಿಕೊಂಡು ನಮ್ಮನ್ನು ಸ್ವಾಗತಮಾಡಿಕೊಂಡುಬಂದಿರಿ ಎಂದರು.

ನಂಜುಂಡಪ್ಪ ವರದಿಯ ಪ್ರಕಾರ ದೇವದುರ್ಗ ಕ್ಷೇತ್ರದಲ್ಲಿ ಶೈಕ್ಷಣಿಕ,ಆರ್ಥಿಕ,ಸಾಮಾಜಿಕ ಪ್ರಗತಿಗೆ ಕೆಕೆ ಆರ್ ಡಿಬಿ ಅಡಿಯಲ್ಲಿ ಅನುದಾನ ನೀಡಲಾಗುತ್ತದೆ.ಅದನ್ನು ಕ್ಷೇತ್ರದ ಸರ್ವತೋಮುಖ ಬೆಳವಣಿಗೆಗೆ ಪ್ರಾಮಾಣಿಕವಾಗಿ ಬಳಸಲಾಗುತ್ತಿದೆ. ಹೆಚ್ಚಾಗಿ ಶಿಕ್ಷಣ ಪ್ರಗತಿಗೆ ಆದ್ಯತೆ ನೀಡಲಾಗಿದೆ,ಪ್ರತಿಗ್ರಾಮದಲ್ಲಿಯೂ ಸುಸಜ್ಜಿತ ಶಾಲಾ ಕಟ್ಟಡವನ್ನು ನಿರ್ಮಾಣಮಾಡಿ.ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕವಾದ ವಾತಾವರಣವನ್ನು ನಿರ್ಮಾಣ ಮಾಡಲಾಗುತ್ತಿದೆ. ಇದಕ್ಕೆ ಪಕ್ಷಾತೀತವಾಗಿ ಎಲ್ಲರ ಸಹಕಾರ ಅಗತ್ಯವಿದೆ ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎನ್ ಮಲ್ಲಿಕಾರ್ಜುನ ಮಾತನಾಡಿ, ಇವತ್ತಿನ ದಿನ ಬಹುಶ ನನಗೆ ಅತೀವ ಸಂತೋಷ ತಂದುಕೊಟ್ಟಿರತಕ್ಕಂತಹ ದಿನ ಅಂತ ನಾನು ಭಾವಿಸುತ್ತೇನೆ. ನಾನು ಓದಿದಂತಹ ಶಾಲೆ ಈ ಶಾಲೆಯಲ್ಲಿ ಇಂದು ನೂತನ ಕಟ್ಟಡದ ಉದ್ಘಾಟನೆ ಸಂದರ್ಭದಲ್ಲಿ ನಾನು ಸನ್ಮಾನಗೊಂಡಿರುವದು ಮೊತ್ತೊಂದು ಸಂತೋಷದ ವಿಷಯವಾಗಿದೆ. ಶಿಕ್ಷಣದಿಂದ ಅನಿಷ್ಠ ಪದ್ದತಿಗಳನ್ನು ತೊಡೆದುಹಾಕಲು ಸಾಧ್ಯ,ಪಾಲಕರು ಮಕ್ಕಳಿಗಾಗಿ ಆಸ್ತಿಯನ್ನು ಮಾಡಬೇಡಿ ಮಕ್ಕಳನ್ನೇ ದೇಶದ ಆಸ್ತಿಯನ್ನಾಗಿ ಮಾಡಬೇಕು.ಮಕ್ಕಳು ಪ್ರಾಥಮಿಕ ಹಂತದಲ್ಲಿ ಐಎಎಸ್ ,ಐಪಿಎಸ್ ನಂತಹ ಉನ್ನತಮಟ್ಟದ ಹುದ್ದೆಗಳ ಕನಸ್ಸು ಕಾಣಬೇಕು. ಜಗತ್ತು ವಿದ್ಯಾವಂತರನ್ನು ಗೌರವಿಸುತ್ತಿದೆ.ಹೀಗಾಗಿ ಪ್ರತಿಯೊಬ್ಬರು ಶಿಕ್ಷಣ ಪಡೆಯಬೇಕು ಪಾಲಕರು ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು ಎಂದು ಹೇಳಿದರು.

 

ಪ್ರಸ್ತಾವಿಕವಾಗಿ ಶಿವರಾಜ ಪೂಜಾರಿ ಕ್ಷೇತ್ರಸಮನ್ವಯಾಧಿಕಾರಿ ಮಾತನಾಡಿ ಎನ್ ಗಣೇಕಲ್ ಗ್ರಾಮದಲ್ಲಿ ಸುಮಾರು 15 ವರ್ಷಗಳು ಕಳೆದಿವೆ 9ವರ್ಷಗಳಿಂದ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ನೂರಕ್ಕೆ ನೂರಷ್ಟು ಇಲ್ಲಿಯ ಮಕ್ಕಳು ಪ್ರತಿಶತವನ್ನು ತಂದುಕೊಟ್ಟಿದ್ದಾರೆ, ಶಿಕ್ಷಣ ಕ್ಷೇತ್ರದಲ್ಲಿ ದೇವದುರ್ಗ ಅಂದ್ರೆ ಇಡೀ ರಾಜ್ಯದಲ್ಲಿ ಅತಿ ಹೆಚ್ಚು ಖಾಲಿ ಇರುವಂತಹ ಶಿಕ್ಷಕರ ಹುದ್ದೆಗಳಲ್ಲಿ ಅತಿಥಿ ಶಿಕ್ಷಕರ ನೇಮಕದಿಂದ ಉತ್ತಮ ಫಲಿತಾಂಶವನ್ನು ನಮ್ಮ ತಾಲೂಕಿನ ಮಕ್ಕಳು ಎರಡನೇ ಸ್ಥಾನವನ್ನು ತಂದುಕೊಟ್ಟಿದ್ದಾರೆಂದು ಹೇಳಿದರು.

ಸಂದರ್ಭದಲ್ಲಿ ರಾಚಯಪ್ಪ ತಾತ ಜಾಗಟಗಲ್, ಸಣ್ಣ ಫಕೀರಪ್ಪತಾತ ಸುಲ್ತಾನಪೂರ,     ಅಧ್ಯಕ್ಷ ಆದನಗೌಡಪಾಟೀಲ್ ಬುಂಕಲದೊಡ್ಡಿ,ತಾಪಂ. ಇಒ ಯಮನಪ್ಪ ವಾಲ್ಮೀಕಿ, ಬಿಇಒ ರಾಧವೇಣಿ,ಎಡಿ ಅಣ್ಣಾರಾವ್ ನಾಯಕ ಕ್ಷೇತ್ರಸಮನ್ವಯಾಧಿಕಾರಿ ಶಿವರಾಜಪೂಜಾರಿ, ನಾಗಪ್ಪ ಗಿರಿಣಿ, ವೀರುಪನಗೌಡ,ಭೂದಾನಿ ರಾಮಣ್ಣನಾಡಗೌಡ, ಬಾಲಪ್ಪಭಾವಿಮನಿ. ಎಇಇ ವಿಜಯಕುಮಾರ, ಮುಖ್ಯಶಿಕ್ಷಕ ಶಿವರಾಜಮೇಟಿ, ಸಂಗಮೇಶ,ಉಮೇಶಗೌಡ, ಬಿಆರ್‌ಪಿ ಶಿವಕುಮಾರನಾಡಗೌಡ, ಸಿಆರ್‌ಪಿ ಬಸವರಾಜನಾಯಕ ಸಾತಲ್ ಸೇರಿದಂತೆ ಶಿಕ್ಷಕರು ಪಾಲಕರು ಗ್ರಾಮಸ್ಥರು ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *