ಕಾಂಗ್ರೆಸ್ ಪಕ್ಷದ ಕಟ್ಟಾಳು ಹಿರಿಯ ಮುತ್ಸದ್ದಿಗಳಾದ ಶಾಸಕ ಹಂಪನಗೌಡ ಬಾದರ್ಲಿಯವರಿಗೆ ಸಚಿವ ಸ್ಥಾನ ನೀಡಬೇಕೆಂದು ಪಕ್ಷದ ಮುಖಂಡರು, ಕಾರ್ಯಕರ್ತರು, ನಗರಸಭೆಯ ಮಾಜಿ ಸದಸ್ಯರು, ನಗರದ ಕೇಂದ್ರ ಬಸ್ ನಿಲ್ದಾಣದ ಪಕ್ಕದಲ್ಲಿರುವ ಅಂಬಾದೇವಿ ದೇವಸ್ಥಾನಕ್ಕೆ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ 101 ತೆಂಗಿನಕಾಯಿ ಹೊಡೆಯುವ ಮೂಲಕ ಪ್ರಾರ್ಥಿಸಿದರು.
ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಖಾಜಿ ಮಲ್ಲಿಕ್, ಹಾಗೂ ಕಾರ್ಯದರ್ಶಿ ವೈ.ಅನಿಲಕುಮಾರ ಮಾತನಾಡಿ,
ಸಿಂಧನೂರು ಕ್ಷೇತ್ರದ ಮತದಾರರ ಆಶೋತ್ತರಗಳಿಗೆ ಗಟ್ಟಿ ಧ್ವನಿಯಾದವರು, ಬಡವರ, ಶ್ರಮಿಕರ, ಹೇಳ್ಗೆಗಾಗಿ ಮತ್ತು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸಿದವರು, ಈಗಾಗಲೇ 5 ಬಾರಿ ಶಾಸಕರಾಗಿ ಹಿರಿಯ ರಾಜಕಾರಣಿಗಳಾಗಿದ್ದಾರೆ ಇಂತಹವರನ್ನು ಕೈಬಿಡದೆ, ಕಾಂಗ್ರೆಸ್ ಹೈಕಮಾಂಡ್ ನವರು ಸಚಿವ ಸಂಪುಟದಲ್ಲಿ ಸೂಕ್ತವಾದ ಸಚಿವ ಸ್ಥಾನ ನೀಡಿ, ಹಿರಿಯ ರಾಜಕಾರಣಿಗೆ ಮನ್ನಣೆ ನೀಡಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ: ಮುಖಂಡರಾದ ಶರಣಪ್ಪ ಉಪ್ಪಲದೊಡ್ಡಿ, ಪ್ರಭುರಾಜ್ ಕರ್ಪೂರಮಠ, ಅಶೋಕಗೌಡ, ವೀರೇಶ ಹಟ್ಟಿ, ದುರುಗಪ್ಪ ಕಟಾಲಿ, ಸಣ್ಣತಿಮ್ಮಯ್ಯ ಭಂಗಿ, ಶೇಖರಪ್ಪ ಗಿಣಿವಾರ, ವೆಂಕಟೇಶ ದತ್ತುರಾವ್, ಹೆಚ್.ಭಾಷಾ, ಅಶೋಕ ಉಮಲೂಟಿ, ಮುದಿಯಪ್ಪ ಡೈಮೆಂಡ್ ಸೇರಿದಂತೆ ಅನೇಕ ಮುಖಂಡರು, ಕಾರ್ಯಕರ್ತರು ಇದ್ದರು.


