ಮಾನ್ವಿ: ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ನಡೆದ ಶ್ರೀ ವಾಸವಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಆರ್ಶೀವಚನ ನೀಡಿ ಇಂದಿನ ಸ್ಪರ್ಧತ್ಮಕ ಯುಗದಲ್ಲಿ ಉತ್ತಮ ಜೀವನವನ್ನು ರೂಪಿಸಿಕೊಳ್ಳುವುದಕ್ಕೆ ಶಿಕ್ಷಣದಿಂದ ಮಾತ್ರ ಸಾಧ್ಯವಿದು ವಿದ್ಯಾರ್ಥಿಗಳು ಜೀವನದಲ್ಲಿ ಉನ್ನತವಾದ ಗುರಿಯನ್ನಿಟ್ಟುಕೊಂಡು ನಿರಂತರ ಶ್ರಮದಿಂದ ಅಭ್ಯಾಸ ಮಾಡದಲ್ಲಿ ಮಾತ್ರ ಉತ್ತಮ ಅಂಕಗಳನ್ನು ಪಡೆಯುವುದಕ್ಕೆ ಸಾಧ್ಯವಾಗುತ್ತಿದೆ. ವಿದ್ಯಾರ್ಥಿಗಳು ಶಿಕ್ಷಣದ ಜೋತೆಗೆ ಸಂಸ್ಕಾರ, ಮೌಲ್ಯಗಳನ್ನು ಹೊಂದಿದಾಗ ಮಾತ್ರ ಕುಟುಂಬದಲ್ಲಿ ಹಾಗೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗುವುದಕ್ಕೆ ಸಾಧ್ಯ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘವು ಆರ್ಯವೈಶ್ಯ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹವನ್ನು ನೀಡುವ ಉದ್ದೇಶದಿಂದ ಹಲವು ವರ್ಷಗಳಿಂದ ಶ್ರೀ ವಾಸವಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರ ಜೋತೆಗೆ ಸಮಾಜದ ಎಲ್ಲಾ ಸಮುದಾಯಗಳವರಿಗಾಗಿ ಮಂತ್ರಾಲಯ ಪಾದಯಾತ್ರೆ. ಸೇರಿದಂತೆ ಅನೇಕ ಧಾರ್ಮಿಕ ,ಸಮಾಜಿಕ,ಶೈಕ್ಷಣಿಕವಾದ ಅನೇಕ ಕಾರ್ಯಕ್ರಮಗಳನ್ನು .ಆಯೋಜಿಸಿಕೊಂಡು ಬರುತ್ತಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ 2025-26 ನೇ ಸಾಲಿನ ಎಸ್.ಎಸ್.ಎಲ್.ಸಿ. ಹಾಗೂ ಪಿ.ಯು.ಸಿ. ದ್ವಿತೀಯ ವರ್ಷದ ವಾರ್ಷಿಕ ಪರೀಕ್ಷೆಯಲ್ಲಿ ಶೇ. 70 ಹಾಗೂ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಪಡೆದ, ಪದವಿ ,ಸ್ನಾತಕೋತ್ತರ ಪದವಿ ಅಂತಿಮ ಪರೀಕ್ಷೆಯಲ್ಲಿ ಉತ್ತಮ ಹೆಚ್ಚಿನ ಅಂಕಗಳನ್ನು ಪಡೆದು ಉತ್ತೀರ್ಣರಾದ ಮಾನ್ವಿ ತಾಲೂಕಿನ 65 ಕ್ಕೂ ಹೆಚ್ಚು ಆರ್ಯವೈಶ್ಯ ವಿದ್ಯಾರ್ಥಿಗಳಿಗೆ ಶ್ರೀ ವಾಸವಿ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಮಯೂರಿ ನೃತ್ಯ ಕಲಾ ತಂಡದ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ಗಮನ ಸೇಳೆಯಿತು.
ನಗರೇಶ್ವರ ಆರ್ಯವೈಶ್ಯ ಸಂಘದ ತಾ.ಅಧ್ಯಕ್ಷರಾದ ಆರ್.ಮುತ್ತುರಾಜ್ ಶೆಟ್ಟಿ , ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಶೇಖರ್.ಡಿ. ತಾಲೂಕು ಖಾಸಗಿ ಶಾಲಾ ಶಿಕ್ಷಣ ಸಂಸ್ಥೆಗಳ ಒಕ್ಕೂಟದ ಅಧ್ಯಕ್ಷರಾದ ರಾಜಾ ಸುಭಾಷಚಂದ್ರನಾಯಕ. ಮಾತನಾಡಿದರು.
ಕಾರ್ಯದರ್ಶಿ.ಬಿ. ಈರಣ್ಣ, ಆರ್.ದ್ವಾರಕನಾಥ್, ಡಿ.ರಾಘವೇಂದ್ರ, ಆರ್. ಪುರುಷೋತ್ತಮ, ಆರ್. ರಾಘವೇಂದ್ರ, ಬಿ.ಪವನ್. ವಿ. ಬಸವರಾಜ್ ,ಕುಮಾರ್, ವಾಸವಿ ಮಹಿಳಾ ಮಂಡಳಿ ತಾ. ಅಧ್ಯಕ್ಷರಾದ ಮಂಚಾಲಿ ಶೋಭಾ ಹಾಗೂ ಜಿ .ಲಕ್ಷಿö್ಮ, ಆರ್.ಲಕ್ಷಿö್ಮ, ಡಿ.ರಾದ, ಬಿ.ವೇದ ಸೇರಿದಂತೆ ತಾಲೂಕಿನ 5ನೂರಕ್ಕೂ ಹೆಚ್ಚು ಆರ್ಯವೈಶ್ಯ ಸಮುದಾಯದವರು ಭಾಗವಹಿಸಿದರು.

ಮಾನ್ವಿ: ಪಟ್ಟಣದ ಶ್ರೀ ವಾಸವಿ ಕಲ್ಯಾಣ ಮಂಟಪದಲ್ಲಿ ಶ್ರೀ ನಗರೇಶ್ವರ ಆರ್ಯವೈಶ್ಯ ಸಂಘದ ವತಿಯಿಂದ ನಡೆದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಕಲ್ಮಠ ಶ್ರೀ ವಿರೂಪಾಕ್ಷ ಪಂಡಿತಾರಾಧ್ಯ ಶಿವಚಾರ್ಯ ಮಹಾಸ್ವಾಮಿಗಳು ಉದ್ಘಾಟಿಸಿದರು.

Leave a Reply

Your email address will not be published. Required fields are marked *