ಮಸ್ಕಿ: ಸ್ಥಳೀಯ ಕೃಷಿ ಉತ್ಪನ್ನ ಮಾರುಕಟ್ಟೆಯ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ೫ ಕೋಟಿ ಅನುದಾನ ಬಿಡುಗಡೆಯಾಗಿದೆ ಎಂದು ಭ್ರಮರಾಂಬ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಅಧ್ಯಕ್ಷ ಸಿದ್ದನಗೌಡ ಮಾಟೂರು ಹೇಳಿದರು.
ಪಟ್ಟಣದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಕೃಷಿ ಉತ್ಪನ್ನ ಮಾರುಕಟ್ಟೆ ಸಚಿವರಿಗೆ ಅನುದಾನ ನೀಡುವಂತೆ ಮನವಿ ಸಲ್ಲಿಸಲಾಗಿತ್ತು. ಮನವಿ ಸ್ಪಂಧಿಸಿ ೫ ಕೋಟಿ ಅನುದಾನ ಬಿಡುಗಾಡೆ ಮಾಡಿರುವ ಸಚಿವ ಶಿವಾನಂದ ಪಾಟೀಲ್ ಅನುದಾನದ ನೀಡಲು ಸಹಕಾರ ನೀಡಿದ ಶಾಸಕ ಬಸನಗೌಡರಿಗೆ ಮತ್ತು ಕೇಂದ್ರ ಕಛೇರಿಯ ಅಧಿಕಾರಿಗಳಿಗೆ ಅಭಿನಂದನೆಗಳನ್ನು ತಿಳಿಸಿದರು. ೫ ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿಗಳಾದ ಮಾರುಕಟ್ಟೆ ಸತ್ತಲೂ ಕಾಂಪೌಂಡ್, ಸಿಸಿ ರಸ್ತೆ, ದ್ವಾರ ಬಾಗಿಲು ಗೇಟು, ವಾಣಿಜ್ಯ ಮಳಿಗೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತದೆ ಎಂದು ತಿಳಿಸಿದರು. ನಿವೇಶನ ಹಂಚಿಕೆ ಪಡೆದಿರುವ ವ್ಯಾಪಸ್ಥರು ತ್ವರಿತವಾಗಿ ಮಳಿಗೆಗಳನ್ನು ನಿರ್ಮಿಸಿಕೊಂಡು ವ್ಯಾಪರ-ವಾಹಿವಾಟು ಆರಂಭಿಸಬೇಕು. ವ್ಯಾಪರ ಆರಂಭಿಸಿದ್ದರೆ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು. ನೂತನವಾಗಿ ಜಾನುವಾರರುಗಖ ಸಂತೇ ಆರಂಭಿಸಲು ಅನುಮತಿಯನ್ನು ಕೇಳಲಾಗಿದ್ದು, ಶೀಘ್ರದಲ್ಲಿ ಜಾನುವಾರು( ದನ ಹಾಗೂ ಕುರಿಗಳ) ಮಾರಾಟ ಸಂತೇ ಮಾರುಕಟ್ಟೆಯನ್ನು ಆರಂಭಿಸಲಾಗುತ್ತದೆ ಎಂದು ಹೇಳಿದರು.
ನಿಗಮ, ಸಚಿವ ಸ್ಥಾನ ನೀಡಿ: ಶಾಸಕ ಆರ್.ಬಸನಗೌಡರಿಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ಮತ್ತು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಪಾಟೀಲ್‌ಗೆ ಎಂಎಲ್‌ಸಿ ಅಥವಾ ನಿಗಮ ಮಂಡಳಿ ನೀಡಬೇಕೆಂದು ರಾಜ್ಯ ಮುಖಂಡರಲ್ಲಿ ಹಾಗೂ ಹೈಕಮಾಂಡ್‌ಗೆ ಒತ್ತಾಯಿಸಿದರು. ಸತತ ೨ ಬಾರಿ ಶಾಸಕರಾಗಿ ಅಭಿವೃದ್ಧಿ ಪರ ಇರುವ ಮತ್ತು ಜಿಲ್ಲೆಗೆ ಸಚಿವ ಸಂಪುಟದಲ್ಲಿ ಆದ್ಯತೆಯ ಮೇರೆಗೆ ಶಾಸಕ ಬಸನಗೌಡರಿಗೆ ಸಚಿವ ಸ್ಥಾನ ನೀಡಿದರೆ ತಾಲೂಕು ಮತ್ತು ಜಿಲ್ಲೆಯ ಅಭಿವೃದ್ಧಿಗೆ ಸಹಕಾರವಾಗಲಿದೆ ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಮೈಬುಸಾಬ ಮುದ್ದಾಪೂರ, ಎಪಿಎಂಸಿ ಸದಸ್ಯ ಮೌಲಪ್ಪ, ವಿರೇಶ ಪಾಟೀಲ್, ಕೃಷಿ ಚಿಗರಿ, ಶರಣಪ್ಪ ಎಲಿಗಾರ ಇದ್ದರು.

