ರಾಯಚೂರು: ರಾಯಚೂರು ಜಿಲ್ಲೆಯ ಗಡಿಭಾಗದ ಮಂತ್ರಾಲಯದ ಬಳಿ ತುಂಗಭದ್ರಾ ನದಿಯಲ್ಲಿ ಈಜಲು ತೆರಳಿದ್ದ ಐವರು ನೀರುಪಾಲಾದ ಘಟನೆ ಶನಿವಾರ ನಡೆದಿದೆ. ಹೈದರಾಬಾದ್ ಮೂಲದ ಯುವನಚಂದ್ರ (5), ಸತೀಶ್ (35), ಮಂತ್ರಾಲಯ ಗ್ರಾಮದ ರಾಘವೇಂದ್ರ (25), ಉರವಕೊಂಡ ಗ್ರಾಮದ ಧನುಷ್ (23) ಮತ್ತು ಸಂಧಾ (22) ನೀರುಪಾಲಾದವರು ಎಂದು ಗುರುತಿಸಲಾಗಿದೆ.

ಮಂತ್ರಾಲಯದಲ್ಲಿ ಸಂಬಂಧಿಕರ ಮನೆಯಲ್ಲಿ ಏರ್ಪಡಿಸಿದ್ದ ಸತ್ಯನಾರಾಯಣ ಪೂಜೆಗೆ ಬಂದಿದ್ದ ಇವರು ಪೂಜೆಯ ಬಳಿಕ ನದಿಯಲ್ಲಿ ಈಜಲು ತೆರಳಿದ್ದ ವೇಳೆ ಈ ಘಟನೆ ನಡೆದಿದೆ. ನದಿಯಲ್ಲಿ ಈಜಲು ಹೋಗಿ ನೀರುಪಾಲಾದ ಘಟನೆಯ ಬಳಿಕ ಎಸ್.ಡಿ.ಆ‌ರ್.ಎಫ್ ತಂಡ ಶನಿವಾರ ಸಂಜೆಯಿಂದ ಶೋಧಕಾರ್ಯ ನಡೆಸಿದ್ದು ಎರಡನೇ ದಿನವಾದ ರವಿವಾರ ಈಜಲು ಹೋದ ಐವರ ಮೃತದೇಹದ ಜೊತೆಗೆ ಮತ್ತೊಂದು ಅಪರಿಚಿತ ಮೃತದೇಹ ಯಾಗಿದ್ದು, ಒಟ್ಟು 6 ಮೃತದೇಹಗಳು ಪತ್ತೆಯಾಗಿವೆ.

ನದಿಯಲ್ಲಿ ನೀರಿನ ಆಳ ತಿಳಿಯದೇ ಈಜಲು ತೆರಳಿದ್ದೆ ಘಟನೆಗೆ ಕಾರಣ ಎನ್ನಲಾಗಿದೆ. ಘಟನೆಯಲ್ಲಿ ಅಪರ್ಣಾ ಎಂಬವರು ಪಾರಾಗಿದ್ದು, ಆರಂಭದಲ್ಲಿ ಕೇವಲ ಧನುಷ್ ಮೃತದೇಹ ಪತ್ತೆಯಾಗಿದೆ. ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಎಮ್ಮಿಗನೂರು ತಾಲ್ಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಎಮ್ಮಿಗನೂರು ಡಿವೈಎಸ್‌ಪಿ ಭಾರ್ಗವಿ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿ ಕಾರ್ಯಾಚರಣೆ ಮುಗಿಸಿದ್ದು ಮಂತ್ರಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *