ಮಸ್ಕಿ : ತಾಲೂಕ ಜಂಗಮ ಸಮಾಜ ಹಾಗೂ ನಗರ ಘಟಕದ ಜಂಗಮ ಸಮಾಜದ
ವತಿಯಿಂದ ಅಧಿಕ ಜೇಷ್ಠ ಮಾಸದ ಅಂಗವಾಗಿ
ರವಿವಾರ ಪಟ್ಟಣದ ಗಚ್ಚಿನ ಮಠದಲ್ಲಿ ಶ್ರೀ ಜಗದ್ಗುರು ರೇಣುಕಾಚಾರ್ಯರಿಗೆ ವಿಶೇಷ ಪೂಜಾ ಕಾರ್ಯಕ್ರಮ
ಹಾಗೂ ಮಸ್ಕಿ ತಾಲೂಕ ಜಂಗಮ ಸಮಾಜದ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಯಲ್ಲಿ
ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಸನ್ಮಾನಿಸ ಕಾರ್ಯಕ್ರಮ ಅರ್ಥಪೂರ್ಣ ವಾಗಿ ಜರುಗಿತು.

ಈ ವೇಳೆ,ಕುದುರೆಮೋತಿ, ಶಾಖಾಮಠ ಶ್ರೀ. ಮ.ನಿ.ಪ್ರ. ಜ. ವಿಜಯ ಮಹಾಂತ ಮಹಾಸ್ವಾಮಿಗಳ ರವರು ಮಾತನಾಡಿ,ಮೂರು ವರ್ಷಕ್ಕೊಮ್ಮೆ ಬರುವ ಅಧಿಕ ಮಾಸದಲ್ಲಿ ಆಧ್ಯಾತ್ಮಿಕ ಚಿಂತನೆಗೆ ಒತ್ತು ನೀಡಿ ಸಮಾಜದ ಪ್ರಗತಿಗೆ ಯುವಕರಿಗೆ ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ನೀಡಿ ಇಷ್ಟಲಿಂಗಪೂಜೆ, ಲಿಂಗಧಾರಣೆ ಮಾಡುವುದರ ಮೂಲಕ ಇಡೀ ಸಮಾಜಕ್ಕೆ
ಹೊಳಿತನ್ನು ಬಯಸುವವರು ಜಂಗಮರು ಎಂದುಆರ್ಶಿವಚನ ನೀಡಿದರು.

ಗಚ್ಚಿನ ಮಠದ ಶ್ರೀ ಷ.ಬ್ರ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು
ಮಾತನಾಡಿ,ಅಧಿಕ ಮಾಸದ ಮಹತ್ವದ ಕುರಿತು ವಿದ್ಯಾರ್ಥಿಗಳಿಗೆ ಒಳ್ಳೆಯ ಸಂಸ್ಕಾರದ ಸಂಸ್ಕೃತಿಗಳ
ಬಗ್ಗೆ ಕಿವಿಮಾತು ಹೇಳಿದರು

ಶರಭಯ್ಯಸ್ವಾಮಿ ಬಳಗಾನೂರ ಹಾಗೂ ತಾಲ್ಲೂಕ ಅದ್ಯಕ್ಷ ಘನಮಠದಯ್ಯ ಸಾಲಿಮಠ, ಕಾರ್ಯಕ್ರಮದ ಕುರಿತು
ಮಾತನಾಡಿದರು,

ಈ ವೇಳೆ,ಶಿವಶಂಕ್ರಯ್ಯ ಸ್ವಾಮಿ ಗಚ್ಚಿನಮಠ,ಆದಯ್ಯ ಸ್ವಾಮಿ ಕ್ಯಾತ್ನಟ್ಟಿ , ವಿರೇಶ ಪಾಟೀಲ್, ಪಂಚಾಕ್ಷರಯ್ಯ ಹಿರೇಮಠ , ಸಿದ್ದಯ್ಯಸ್ವಾಮಿ ಹಾಲಾಪೂರ, ಶರಣಯ್ಯಸ್ವಾಮಿ ದಿನ್ನಿಮಠ
ಹಾಗೂ ಜಂಗಮ ಸಮಾಜದ ಯುವ ಘಟಕದ ಅಧ್ಯಕ್ಷ ಸಿದ್ದಯ್ಯ ಹೆಸರೂರು ಹಿರೇಮಠ,
ಕಾರ್ಯದರ್ಶಿ ವೀರೇಶ ಹಿರೇಮಠ ಕ್ಯಾತ್ನಟ್ಟಿ,ಅಮರಯ್ಯಸ್ವಾಮಿ ಸೊಪ್ಪಿಮಠ,ಶಿವಕುಮಾರ ಶಾಸ್ತ್ರೀಮಠ, ಮಹೇಶ ಕೊಟ್ಟೂರಮಠ,ಅಮರೇಶ ಹೊಸಮಠ,ಮಲ್ಲಯ್ಯ ಸ್ವಾಮಿ ವಸ್ತ್ರದ, ಮಲ್ಲಯ್ಯ ಸ್ವಾಮಿ ಸಿರವಾರಮಠ, ಪೂರ್ಣಿಮಾ ಪಾಟೀಲ್, ಅಂಬಿಕಾ ಹೆಸರೂರು,ಶಾರದ ಸರಗಣಾಚಾರಿ,ಶಿವಲೀಲಾ ಗಚ್ಚಿನಮಠ, ಸೇರಿದಂತೆ
ಮಸ್ಕಿ ತಾಲ್ಲೂಕಿನ ವಿವಿಧ ಹಳ್ಳಿಗಳಿಂದ ಜಂಗಮ ಸಮಾಜದ ಬಂಧಗಳು ಇದ್ದರು.

Leave a Reply

Your email address will not be published. Required fields are marked *