ಕವಿತಾಳ : `ಕಳೆದ ಐವತ್ತು ವರ್ಷಗಳಿಂದ ರಾಯಚೂರು ಮತ್ತು ಕೊಪ್ಪಳ ಜಿಲ್ಲೆ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಕಾಂಗ್ರೇಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಕೆಲಸವನ್ನು ನಿರ್ವಹಿಸುವ ಮೂಲಕ ಅತೀ ಹೆಚ್ಚು ಕಾಂಗ್ರೇಸ್ ಶಾಸಕರನ್ನು, ಸಂಸದರನ್ನು ಗೆಲ್ಲಿಸುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿರುವ ಎನ್. ಎಸ್. ಬೋಸರಾಜು ಅವರಿಗೆ ನೂತನ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರ ಸಚಿವ ಸಂಪುಟದಲ್ಲಿ ಸೂಕ್ತ ಸಚಿವ ಸ್ಥಾನ ನಿಡಬೇಕು’ ಎಂದು ವಾಲ್ಮೀಕಿ ವಿಶ್ವವಿದ್ಯಾಲಯದ ಸಿಂಡಿಕೆಟ್ ಸದಸ್ಯ ಹಾಗೂ ಹಾಲುಮತ ಮಹಾಸಭಾದ ರಾಯಚೂರು ಜಿಲ್ಲಾ ಅಧ್ಯಕ್ಷ ಶಿವಣ್ಣ ವಕೀಲರು ಒತ್ತಾಯಿಸಿದ್ದಾರೆ.
ಅವರು ಇಂದು ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿಯನ್ನು ಹಮ್ಮಿಕೊಂಡು ಮಾತನಾಡಿದರು.
`ನಮ್ಮ ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಕಾಂಗ್ರೇಸ್ ಶಾಸಕರ, ಸಂಸದರ ಆಯ್ಕೆಗಾಗಿ ಸತತ ಪ್ರಯತ್ನವನ್ನು ಮಾಡುವ ಮುಲಕ ಕಾಂಗ್ರೇಸ್ ಪಕ್ಷಕ್ಕಾಗಿ ತಮ್ಮ ಜೀವನವನ್ನೆ ಮುಡುಪಾಗಿಟ್ಟುರುವ ಹಿರಿಯರು ಇವರಾಗಿದ್ದು, ರಾಜ್ಯ ಮಾತ್ರವಲ್ಲದೆ ರಾಷ್ಟçದ ರಾಜಕೀಯದಲ್ಲೂ ಇವರ ಪಾತ್ರ ಪ್ರಮುಖವಾಗಿದೆ ಅಲ್ಲದೆ ಕಳೆದ ಸಿದ್ದಾರಾಮಯ್ಯ ಸರ್ಕಾರದಲ್ಲಿ ಸಣ್ಣ ನೀರಾವರಿ ,ವಿಜ್ಷಾನ ಮತ್ತು ತಂತ್ರಜ್ಞಾನ ಸಚಿವರಾಗಿ ಕೆಲಸ ನಿರ್ವಹಿಸಿದ ಅವರು ಅತೀ ಹೆಚ್ಚು ಕರ್ನಾಟಕದ ಇತಿಹಾಸದಲ್ಲಿ ಚೆಕ್‌ಡ್ಯಾಮ್ ಕಮ್ ಬ್ಯಾರೇಜ್ ನಿರ್ಮಾಣ ಮಾಡುವುದರ ಮೂಲಕ ಮತ್ತು ಬೋರ್ವೆಲ್‌ಗಳನ್ನು ಹಾಗೂ ಭಾವಿಗಳ ರಿಪಿಲ್ಟರ್ ಆಗಿ ರೈತ ವರ್ಗಕ್ಕೆ ಆಶಾಕಿರಣ ವಾಗುವಂತಹ ಕೆಸವನ್ನು ಮಾನ್ಯ ಸಚಿವರು ಮಾಡಿದ್ದಾರೆ ಹಾಗೂ ಜನಮನ ಗೆದ್ದ ನಾಯಕತ್ವ ,ಪಾರದರ್ಶಕ ಆಡಳಿತ, ಅಕ್ಕರೆಯ ಪ್ರತಿರೂಪ, ಸಾಮಾಜಿಕ ನ್ಯಾಯ ಕಲ್ಪನೆ ಆದಾರದ ಮೇಲೆ ಕಾರ್ಯ ನಿರ್ವಹಿಸುವ ಅವರು ಸಚಿವರಾಗಿ ಪ್ರಾಮಾಣಿಕ ಜನಸೇವೆ ಮೌಲ್ಯಗಳನ್ನು ಎತ್ತಿಹಿಡಿದಿದ್ದಾರೆ ಆದ್ದರಿಂದ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನವನ್ನು ನೀಡಬೇಕು ಎಂದು ಆಗ್ರಹಿಸಲಾಗುವುದು’ ಎಂದರು.
ನಮ್ಮ ರಾಯಚೂರು ಜಿಲ್ಲೆಯ ಉಸ್ತುವಾರಿ ಸಚಿವ ಸ್ಥಾನವನ್ನು ಸ್ಥಳಿಯ ನಾಯಕರಿಗೆ ನೀಡುವಲ್ಲಿ ಮುಂದಾಗಬೇಕು ಎಂದು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಮುಖಂಡರಾದ ಲಿಯಾಖತ್ ಅಲಿ ಜಿಡಿಎಸ್, ರಾಜೇಶ್ ಬನ್ನಿಗಿಡ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಾಳಪ್ಪ ತೋಳ, ಪಟ್ಟಣ ಪಂಚಾಯತಿ ನಾಮನಿರ್ದೇಶಕ ಸದಸ್ಯ ಅಯ್ಯಪ್ಪ ನಿಲೋಗಲ್, ಸಿದ್ದಪ್ಪ ದಡ್ಯಾಳ್ ಇದ್ದರು.

Leave a Reply

Your email address will not be published. Required fields are marked *