ಮಸ್ಕಿ: ತಾಲ್ಲೂಕಿನ ತೋರಣದಿನ್ನಿ ಗ್ರಾಮದಲ್ಲಿ ದೇಶಭಕ್ತ ದೇವರಾಜ್ ನಾಯಕ್ ಸುಂಕನೂರ್ ಅವರ ಎರಡನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಸ್ವಾಮಿ ವಿವೇಕಾನಂದ ಸಂಸ್ಥೆಯ ಸoಯುಕ್ತ ಆಶ್ರಯದಲ್ಲಿ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೈಯಾದ್ರಿ ವಿವಿದ್ದೋಷ ಸಂಘದ ಅಧ್ಯಕ್ಷರಾದ ಕೇಶವ ಜೀ ಪಾಲ್ಗೊಂಡು ದೇವರಾಜ್ ನಾಯಕ್ ನಮ್ಮೊಡನೆ ಇಲ್ಲ ಸಮಾಜಕ್ಕೆ ಒಂದು ಮಾಡಿದ ಕಾರ್ಯ ಕೊಡುಗೆ ಅದ್ಭುತವಾಗಿದೆ ದೇವರಾಜ್ ನಾಯಕನ ಸ್ಮರಣಾರ್ಥಕವಾಗಿ ಇಂಥ ಪುಣ್ಯದ ಕಾರ್ಯಕ್ರಮವನ್ನು ಹಮ್ಮಿಕೊಂಡ ತೋರಣದಿನ್ನಿ ಗೆಳೆಯರ ಬಳಗದ ಕಾರ್ಯ ಶ್ಲಾಘನೀಯ ಎಂದು ಹೇಳಿದರು ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಮಾತನಾಡಿದ ವಿಶ್ವನಾಥ್ ಪಟೇಲ್ ತೋರಣದಿನ್ನಿ ಅವರು ಯುವಕರು ದೇಶ ಕಟ್ಟುವ ಕೆಲಸವನ್ನು ಮಾಡಬೇಕು ದುಶ್ಚಟಗಳ ದಾಸರಾಗಬೇಡಿ, ಸಮಾಜಮುಖಿ ಕಾರ್ಯಗಳಲ್ಲಿ ಭಾಗವಹಿಸಿ ಎಂದು ಹೇಳಿದರು ಇದೇ ಸಂದರ್ಭದಲ್ಲಿ ವೈಯೋ ನಿ ವೃತ್ತಿ ಹೊಂದಿದ ಸರಕಾರಿ ಪ್ರೌಢಶಾಲೆ ತೋರಣದಿನ್ನಿ ಮುಖ್ಯ ಗುರುಗಳಾದ ಮಲ್ಲಪ್ಪ ಅವರಿಗೆ ತೋರಣದಿನ್ನಿಯ ಗೆಳೆಯರ ಬಳಗದ ವತಿಯಿಂದ ಸನ್ಮಾನಿಸಲಾಯಿತು. ಈ ಕಾರ್ಯಕ್ರಮದಲ್ಲಿ ಸೋಮಶೇಖರ ಜೀ,ಪಿಎಸೈ ಗುರುಚಂದ್ರ ಯಾದವ ಹಾಗೂ ಮುಂತಾದ ಗಣ್ಯರು,ಗ್ರಾಮಸ್ಥರು ಉಪಸ್ಥಿತರಿದ್ದರು.

