ಬಳ್ಳಾರಿ / ಕಂಪ್ಲಿ : ಇಲ್ಲಿನ ಗಂಗಾ ಸಂಕೀರ್ಣದಲ್ಲಿ ತಾ*ಲೂಕು ಶರಣ ಸಾಹಿತ್ಯ ಪರಿಷತ್ ಶುಕ್ರವಾರ ಹಮ್ಮಿಕೊಂಡಿದ್ದ 190ನೇ ಮಹಾಮನೆ ಕಾರ್ಯಕ್ರಮ ಸಡಗರ ಸಂಭ್ರಮಗಳಿಂದ ನಡೆಯಿತು.
ಚಿಕ್ಕಜಾಯಿಗನೂರಿನ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಮುದುಕಪ್ಪ ನೆಲಜೇರಿ ‘ನಿತ್ಯ ಜೀವನದಲ್ಲಿ ಶರಣರ ಸಿದ್ಧಾಂತ ಮಹತ್ವ’ ಉಪನ್ಯಾಸ ನೀಡಿ, ನಿತ್ಯ ಜೀವನದಲ್ಲಿ ಶರಣ ಸಿದ್ಧಾಂತಗಳನ್ನು ಅಳವಡಿಸಿಕೊಂಡಲ್ಲಿ ಅರ್ಥಪೂರ್ಣ ಜೀವನ ಸಾಗಿಸಲು ಸಾಧ್ಯ. ವಚನ ಸಾಹಿತ್ಯದ ಅಧ್ಯಯನದಿಂದ ವೈಚಾರಿಕ ಪ್ರಬುದ್ಧತೆಗಳಿಸಬಹುದಾಗಿದೆ. ಒಂದೊಂದು ವಚನವು ಒಂದು ಮಹಾಕಾವ್ಯಕ್ಕೆ ಸಮವಾಗಿವೆ. ಮೂಢನಂಬಿಕೆ, ಅಜ್ಞಾನ ತೊಲಗಿಸಿ ಸಮಾನತೆಯ ಸಮಾಜ ನಿರ್ಮಿಸುವುದು ಶರಣರ ನಿಲುವು ಆಗಿತ್ತು. ಜಗತ್ತಿನ ಜನತೆ ಸಾಮರಸ್ಯದಿಂದ ಬದುಕುವಂತೆ ಜಾಗೃತಿಗೊಳಿಸುವ ತಿರುಳು ವಚನ ಸಾಹಿತ್ಯದಲ್ಲಿದೆ. ಶಿಕ್ಷಣದ ಎಲ್ಲಾ ಹಂತಗಳಲ್ಲೂ ವಚನ, ವಚನ ಸಾಹಿತ್ಯ ಮಹತ್ವ ಪಠ್ಯವಾಗಬೇಕಿದೆ ಎಂದರು.
ರಂಗಭೂಮಿ ಕಲಾವಿದ ಜೀರು ಮಲ್ಲಿಕಾರ್ಜುನ ಮಾತನಾಡಿ, ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಮಾನತೆಗಾಗಿ ಶ್ರಮಿಸಿದರು. ಮಕ್ಕಳು, ಯುವಜನತೆ ಮೊಬೈಲ್ ಗೀಳಿಗೆ ಈಡಾಗುತ್ತಿದ್ದು ನೆಮ್ಮದಿ ಕಸಿದಿದೆ. ಮೊಬೈಲ್‌ರಹಿತ ಜೀವನ ನಡೆಸುವುದು ಕಷ್ಟಕರ ಎಂಬಂತಾಗಿದೆ ಎಂದರು.
ಲಿಂಗಾಯತ ಮಹಾಸಭಾದ ತಾಲೂಕು ಪದಾಧಿಕಾರಿ ಬಿ.ಎಂ.ರುದ್ರಯ್ಯ ಅಧ್ಯಕ್ಷತೆವಹಿಸಿ ಮಾತನಾಡಿ, ಸಮಾಜದಲ್ಲಿ ಶರಣರ ನಡೆನುಡಿ ಕಣ್ಮರೆಯಾಗುತ್ತಿದ್ದು ಜ್ಯೋತಿಷಿಗಳು ಹೆಚ್ಚಾಗುತ್ತಿದ್ದಾರೆ. ವಚನ ಸಾಹಿತ್ಯ ಸಂರಕ್ಷಿಸುವಲ್ಲಿ ಫ.ಗು.ಹಳಕಟ್ಟಿಯವರ ಶ್ರಮ ಮಹತ್ವದ್ದಾಗಿದೆ. ಮಕ್ಕಳಿಗೆ ವಚನಗಳನ್ನು ಕಲಿಸಬೇಕು ಎಂದರು.
ಪರಿಷತ್ ಕಾರ್ಯಾಧ್ಯಕ್ಷ ಬಂಗಿ ದೊಡ್ಡ ಮಂಜುನಾಥ, ಪದಾಧಿಕಾರಿಗಳಾದ ಚಂದ್ರಯ್ಯ ಸೊಪ್ಪಿಮಠ, ಎಸ್.ಶಾಮಸುಂದರರಾವ್, ಡಾ.ಬಿ.ಸುನಿಲ್, ಎಸ್.ಡಿ.ಬಸವರಾಜ, ಎಲಿಗಾರ ವೆಂಕಟರೆಡ್ಡಿ, ಅಶೋಕ ಕುಕನೂರು, ಸೋಗಿ ಸಂತೋಷ, ಬಡಿಗೇರ ಜಿಲಾನ್‌ಸಾಬ್, ನಟರಾಜ ಸಾಮಂತ್ರಿ, ಗವಿವೀರನಗೌಡ, ಬಿಎಚ್‌ಎಂ ಚಂದ್ರಮಹೇಶಶಾಸ್ತಿç ಇತರರಿದ್ದರು.

Leave a Reply

Your email address will not be published. Required fields are marked *