ಮಸ್ಕಿ: ತಾಲ್ಲೂಕಿನ ಹೂವಿನಬಾವಿಯ ಅಮರೇಗೌಡ ಮಾ ಪಾ ಸ್ವಗ್ರಾಮದಲ್ಲಿ ಶಿಕ್ಷಕ ವೃತ್ತಿಗೆ ಸೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸುಧೀರ್ಘ 27 ವರ್ಷ ನಾಲ್ಕು ತಿಂಗಳು ಸೇವೆ ಸಲ್ಲಿಸಿ ನಂತರ ಮಸ್ಕಿ ದನಗರವಾಡಿ ಪಿಎಮ್ ಶ್ರೀ ಸರಕಾರಿ ಪ್ರಾಥಮಿಕ ಶಾಲೆಗೆ ವರ್ಗವಾಗಿ ಮುಖ್ಯಗುರು ಬಡ್ತಿ ಪಡೆದು ಹದಿನೈದು ದಿನಗಳಲ್ಲಿ ಸೇವಾ ನಿವೃತ್ತಿ ಹೊಂದಿರುವ ಇವರು, ಹೂವಿನಬಾವಿ ಶಾಲೆಯಲ್ಲಿ ಮಕ್ಕಳ ಸಂಖ್ಯೆ ತೀವ್ರ ಕುಸಿಯುತ್ತಿರುವ ಸಂದರ್ಭದಲ್ಲಿ,ಶಿಕ್ಷಕರ, ಗ್ರಾಮಸ್ಥರ ಸಹಕಾರದಿಂದ ವಿದ್ಯಾರ್ಥಿಗಳು ಬೇರೆ ಬೇರೆ ಶಾಲೆಗೆ ಹೊದವರನ್ನು ಮತ್ತೆ ತಮ್ಮ ಶಾಲೆಗೆ ಬರುವಂತೆ ಮಾಡಿದ ಶ್ರೇಯಸ್ಸು ಇವರದು,ನಂತರ ಯಾವ ಖಾಸಗಿ ಶಾಲೆಗೆ ಕಡಿಮೆ ಇಲ್ಲವಂತೆ ತೊರಿಸಿ,ಇಡಿ ಶಾಲೆಯ ಗೋಡೆಯ ಮೇಲೆ ಪ್ರಾಣಿ ಪಕ್ಷಿಗಳ ಚಿತ್ರ,ಇಂಗ್ಲಿಷ್, ಹಿಂದಿ ಶಬ್ದಗಳ ಬರವಣಿಗೆ, ಸಂಜೆ ಆರು ಗಂಟೆ ತನಕ ಮಕ್ಕಳಿಗೆ ವಿಶೇಷ ಬೋಧನೆ, ಸ್ಮಾರ್ಟ್ ಕ್ಲಾಸ್ ಬಳಕೆ ಅಷ್ಟೇ ಅಲ್ಲ ಸ್ವಂತ ಒಂದು ಲಕ್ಷ ರೂಪಾಯಿ ಮೊತ್ತದ ಬಾಂಡ ನ್ನು ಖಾಸಗಿ ಬ್ಯಾಂಕಿನಲ್ಲಿ ಠೇವಣಿ ಇಟ್ಟು,ಅದರಿಂದ ಬರುವ ವಾರ್ಷಿಕ ಹನ್ನೆರಡು ಸಾವಿರ ರೂಪಾಯಿ ಬಡ್ಡಿ ಹಣ ಬಡ ಮಕ್ಕಳಿಗೆ ಉಪಯುಕ್ತ. ಹೀಗೆ ಇವರು ವಿದ್ಯಾರ್ಥಿಗಳ ನೆಚ್ಚಿನ ಶಿಕ್ಷಕರಾಗಿ ಗ್ರಾಮಸ್ಥರ ಪ್ರೀತಿಗೆ ಪಾತ್ರರಾಗುತ್ತಾರೆ. ಇವರ ಸೇವೆ ಮೆಚ್ಚಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕೃತರು. ಹಾಗೂ ವಿವಿದಡೆ ಪ್ರಶಸ್ತಿ ಸನ್ಮಾನ,ಗೌರವ ಹುಡುಕಿಕೊಂಡು ಬಂದವು. ಹದಿನೈದು ದಿನಗಳ ಹಿಂದೆ ಮುಖ್ಯಗುರುಗಳಾಗಿ ಬಡ್ತಿ ಪಡೆದು ಹುವಿನಬಾವಿ ಶಾಲೆಯಿಂದ ವರ್ಗಾವಾಗಿ ಮಸ್ಕಿಯ ದನಗರವಾಡಿ ಶಾಲೆಯಲ್ಲಿ ಎಲ್ಲಾ ಶಿಕ್ಷಕರ ಜೊತೆ ಉತ್ತಮ ಬಾಂದವ್ಯ ಹೊಂದಿದ್ದರು, ಹೀಗಾಗಿ ವಯೋನಿವೃತ್ತಿ ಸಮಾರಂಭ ನಡೆಯಿತು, ಹಿರಿಯ ಶಿಕ್ಷಕರು, ,ಶಾಲಾ ಭೂಧಾನಿಗಳು,ಶಿಕ್ಷಕ ವೃಂದ ಭಾಗವಹಿಸಿ, ನೆರೆದ ಅತಿಥಿ ಗಳು ಅಮರೇಗೌಡ ಮಾ ಪಾ ಅವರ ಬಗ್ಗೆ ಗುಣಗಾನದ ಮಾತುಗಳನ್ನಾಡಿದರು.ಹಾಗೆ ಅಮರೇಗೌಡ ಮಾ ಪಾ ಸರ್ ಭೂಧಾನಿಗಳಾದ ಅರ್ಜುನಸಿಂಗ ಮಾ ಪಾ ಇವರಿಂದ ಶಾಲೆಗೆ ಒಂದುವರೆ ಎಕರೆ ಭೂಮಿಯನ್ನು ಪಡೆಯವಲ್ಲಿ ಯಶಸ್ವಿಯಾದರು ಇದು ಶಾಲಾ ಕಳಕಳಿ,ಕಾಳಜಿ,ತಮ್ಮ ಸ್ವಂತ ಹದಿನೆಂಟು ಸಾವಿರ ಹಣದಿಂದ ಅಲೆಮಾರಿ ಕಾಬಾಡು ವ್ಯವಸ್ಥೆ ಮಾಡಿಸಿದ್ದಾರೆ,ನಿಜವಾಗಿ ಅಮರೇಗೌಡ ಮಾ ಪಾ ಮುಖ್ಯ ಗುರುಗಳು ಸುಧೀರ್ಘ ಇಪ್ಪತ್ತೇಳು ವರ್ಷ ನಾಲ್ಕು ತಿಂಗಳ ಶಿಕ್ಷಕ ಸೇವೆಯನ್ನು ನಿಸ್ವಾರ್ಥ ಸೇವೆ ಮಾಡಿದ ಕೀರ್ತಿಗೆ ಆದರ್ಶ ಪ್ರಾರ್ಯರು,ಭಗವಂತ ಇವರ ವಯೊ ನಿವೃತ್ತಿ ಆರೊಗ್ಯ,ಸುಖಕರದಿಂದ ಕೂಡಿರಲಿ,ಮತ್ತಷ್ಟು ಶಿಕ್ಷಣ ಕ್ಷೇತ್ರಕ್ಕೆ ಸೇವೆಗೈಯಲಿ ಎಂಬುದು ಅಪಾರ ವಿದ್ಯಾರ್ಥಿಗಳ,ಜನರ ಆಶಯವಾಗಿದೆ.

Leave a Reply

Your email address will not be published. Required fields are marked *