ಸಿಂಧನೂರು: ನಗರದ ಕರ್ನಾಟಕ ರಾಜ್ಯ ನೌಕರರ ಭವನದಲ್ಲಿ ಜಿಲ್ಲಾ ಅಧ್ಯಕ್ಷರಾದ ಡಾ. ಹುಸೇನಪ್ಪ ಅಮರಾಪುರ ಅವರ ಅಧ್ಯಕ್ಷತೆಯಲ್ಲಿ ನಡೆದ ದಲಿತ ಸಾಹಿತ್ಯ ಪರಿಷತ್ತಿನ ನೂತನ ಪದಾಧಿಕಾರಿಗಳ ನೇಮಕಾತಿ ಸಭೆಯಲ್ಲಿ ತಾಲೂಕು ಘಟಕ ಸಿಂಧನೂರಿನ ವಿವಿಧ ಸ್ಥಾನಗಳಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಅನುಮೋದಿಸಲಾಯಿತು.
ಸಭೆಯಲ್ಲಿ ಗೌರವ ಸಲಹೆಗಾರರಾಗಿ ಡಿ.ಎಚ್. ಕಂಬಳಿ, ಚಂದ್ರಶೇಖರ ಗೊರೆಬಾಳ, ಹುಸೇನಸಾಬ್, ಎಚ್.ಎನ್. ಬಡಿಗೇರ, ನಾರಾಯಣಪ್ಪ ಮಾಡಸಿರವಾರ ಹಾಗೂ ಮಂಜುನಾಥ ಗಾಂಧಿನಗರ ಅವರನ್ನು ನೇಮಕ ಮಾಡಲಾಯಿತು. ತಾಲೂಕು ಘಟಕದ ಅಧ್ಯಕ್ಷರಾಗಿ ಡಾ. ಅರುಣಕುಮಾರ ಬೇರ್ಗಿ, ಕಾರ್ಯಾಧ್ಯಕ್ಷರಾಗಿ ಡಾ. ಮಲ್ಲಿಕಾರ್ಜುನ ಕಮತಗಿ, ಉಪಾಧ್ಯಕ್ಷರಾಗಿ ಆಂಜನೇಯ ರಾಮತ್ನಾಳ ಹಾಗೂ ಡಾ. ಮದಗಪ್ಪ ಅವರನ್ನು ಆಯ್ಕೆ ಮಾಡಲಾಯಿತು.
ಪ್ರಧಾನ ಕಾರ್ಯದರ್ಶಿಯಾಗಿ ರಾಮಣ್ಣ ಹಿರೇಬೆರ್ಗಿ, ಸಹ ಕಾರ್ಯದರ್ಶಿಗಳಾಗಿ ದುರುಗಪ್ಪ ಗುಡದೂರು ಹಾಗೂ ಎಚ್.ಕೆ. ದಿದ್ಗಿ, ಸಂಘಟನಾ ಕಾರ್ಯದರ್ಶಿಗಳಾಗಿ ಡಾ. ಶಂಕರ ಗುರಿಕಾರ, ನೂರಮಹ್ಮದ್ ಮತ್ತು ಜ್ಯೋತಿ ಅವರನ್ನು ನೇಮಿಸಲಾಯಿತು. ಖಜಾಂಚಿಯಾಗಿ ಶರಣಪ್ಪ ಅವರು ಆಯ್ಕೆಯಾದರು.
ಸಾಹಿತ್ಯಿಕ ಸಲಹೆಗಾರರಾಗಿ ಡಾ. ಜಾಜಿ ದೇವೇಂದ್ರಪ್ಪ, ಡಾ. ಕೆ. ಖಾದರ ಹಾಗೂ ತುಳಸಿದಾಸ, ಪತ್ರಿಕಾ ಸಲಹೆಗಾರರಾಗಿ ದುರ್ಗೇಶ್ ಹಾಗೂ ಲಕ್ಷ್ಮಣ ಕುರುಕುಂದಿ, ಕಾನೂನು ಸಲಹೆಗಾರರಾಗಿ ಮಿಥುನ್ ಕುಮಾರ ಮತ್ತು ರಾಮಪ್ಪ ಬೊಮ್ಮನಾಳ, ಸಾಂಸ್ಕೃತಿಕ ಸಲಹೆಗಾರರಾಗಿ ಎಂ. ಗಂಗಾಧರ ಬುದ್ದಿನ್ನಿ, ಬಿ.ಎನ್. ಯರದಿಹಾಳ, ಎಚ್.ಆರ್. ಹೊಸಮನಿ ಹಾಗೂ ಬಸವರಾಜ ಬಾದರ್ಲಿ ಅವರನ್ನು ನೇಮಕ ಮಾಡಲಾಯಿತು.
ನಿರ್ದೇಶಕರಾಗಿ ಶ್ರೀ ತಿರುಪತಿ, ರಾಮಣ್ಣ, ಕಾಳಿಂಗಪ್ಪ, ಮೌಲಾಲಿ ಗೊನ್ವಾರ, ಮೌನೇಶ ಜಾಲವಾಡಗಿ, ರಾಮಕೃಷ್ಣ ಬಂಡಾರಿ, ಕೃಷ್ಣಮೂರ್ತಿ ದುಮತಿ, ಬಸವರಾಜ ದೇವಿಪುರ ಹಾಗೂ ರವಿ ಮಲ್ಲಾಪುರ ಅವರು ಆಯ್ಕೆಯಾದರು.
ಸಭೆಯಲ್ಲಿ ಸಂಘಟನೆಯ ವಾರ್ಷಿಕ ಚಟುವಟಿಕೆಗಳು, ಸಾಹಿತ್ಯಿಕ ಕಾರ್ಯಕ್ರಮಗಳು, ಸಾಮಾಜಿಕ ಜಾಗೃತಿ ಅಭಿಯಾನಗಳು ಹಾಗೂ ನೂತನ ಪದಾಧಿಕಾರಿಗಳ ಪದಗ್ರಹಣ ಮತ್ತು ಅಭಿನಂದನಾ ಸಮಾರಂಭದ ಕುರಿತು ವಿಸ್ತೃತವಾಗಿ ಚರ್ಚಿಸಿ ಅನುಮೋದಿಸಲಾಯಿತು. ಸಂಘಟನೆಯನ್ನು ಇನ್ನಷ್ಟು ಬಲಪಡಿಸುವ ನಿಟ್ಟಿನಲ್ಲಿ ಎಲ್ಲಾ ಪದಾಧಿಕಾರಿಗಳು ಸಮನ್ವಯದಿಂದ ಕಾರ್ಯನಿರ್ವಹಿಸುವ ಸಂಕಲ್ಪ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಯುವ ಘಟಕದ ಅಧ್ಯಕ್ಷ ತಿಮ್ಮಣ್ಣ, ಮಹಿಳಾ ಘಟಕದ ಅಧ್ಯಕ್ಷೆ ಶೋಭಾ ತೋರಗಲ್, ಬಸವರಾಜ ಹಳ್ಳಿ, ಡಾ. ಶರೀಫ್ ಹಸಂಕಲ್, ಸುಭಾಷ್ ಹಾರ್ವಪುರ ಸೇರಿದಂತೆ ಹಲವು ಪ್ರಗತಿಪರ ಹೋರಾಟಗಾರರು, ಉಪನ್ಯಾಸಕರು, ಶಿಕ್ಷಕರು ಹಾಗೂ ಸಾಹಿತ್ಯಾಸಕ್ತರು ಉಪಸ್ಥಿತರಿದ್ದರು. ಕಾರ್ಯಕ್ರಮದ ಕೊನೆಯಲ್ಲಿ ವೆಂಕಟೇಶ ಬುಕನಟ್ಟಿ ವಂದಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆಯಿಂದ ತಾಲೂಕಿನಲ್ಲಿ ದಲಿತ ಸಾಹಿತ್ಯ, ಸಂಸ್ಕೃತಿ ಹಾಗೂ ಸಾಮಾಜಿಕ ಜಾಗೃತಿಗೆ ಹೊಸ ಚೈತನ್ಯ ದೊರೆಯಲಿದ್ದು, ಸಂಘಟನೆಯು ಮತ್ತಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಿದೆ ಎಂಬ ವಿಶ್ವಾಸ ವ್ಯಕ್ತವಾಯಿತು.


