ಲಿಂಗಸಗೂರು : ಏ . 18 ನನ್ನ ಮತಕ್ಷೇತ್ರ ವ್ಯಾಪ್ತಿಯ ಲಿಂಗಸಗೂರು ತಾಲೂಕಿನ ಹಟ್ಟಿ, ಮಾವಿನಭಾವಿ, ನಾಗರಹಾಳ, ಆನೆಹೊಸೂರನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡುವಂತೆ ಎಂ ಎಲ್ ಸಿ ಶರಣುಗೌಡ ಬಯ್ಯಪುರ ಕಂದಾಯ ಸಚಿವ

ಕೃಷ್ಣ ಬೈರೇಗೌಡರವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ .

ಹಟ್ಟಿ ಪಟ್ಟಣವು ಸುಮಾರು 40 ಸಾವಿರಕ್ಕೂ ಹೆಚ್ಚು ಜನಸಂಖ್ಯೆಯನ್ನು ಹೊಂದಿದ್ದು, ಸುತ್ತಮುತ್ತಲಿನ ಸುಮಾರು

10-15 ಹಳ್ಳಿಯ ರೈತರು ತಮ್ಮ ದೈನಂದಿನ ಕೆಲಸ ಕಾರ್ಯಗಳಿಗಾಗಿ ಹಟ್ಟಿಯಿಂದ 10 ಕಿ.ಮೀ. ದೂರವಿರುವ ಹೋಬಳಿ ಕೇಂದ್ರ ಗುರುಗುಂಟಾಕ್ಕೆ ಹೋಗಿಬರಬೇಕಾಗುತ್ತದೆ. ಇದರಿಂದ ರೈತರಿಗೆ ಬಹಳ ಸಮಸ್ಯೆ ಯಾಗಿರುತ್ತದೆ. ಪ್ರಸ್ತುತ ಲಿಂಗಸಗೂರು ತಾಲೂಕಿನಲ್ಲಿ ಕೇವಲ ಮೂರು ಹೋಬಳಿ ಕೇಂದ್ರಗಳಿದ್ದು, ಈಗಿನ ಜನಸಂಖ್ಯೆಗೆ ಅನುಗುಣವಾಗಿ ತಾಲೂಕಿನಲ್ಲಿ ಹೊಸದಾಗಿ ಹಟ್ಟಿ, ನಾಗರಹಾಳ ಮತ್ತು ಮಾವಿನ ಭಾವಿಗಳನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡುವುದು ಅತ್ಯವಶ್ಯವಿರುತ್ತದೆ. ಇದು ರೈತರ ಬಹುದಿನಗಳ ಬೇಡಿಕೆ ಯಾಗಿರುವುದರಿಂದ ಲಿಂಗಸಗೂರು ತಾಲೂಕಿನ ಹಟ್ಟಿ, ನಾಗರಹಾಳ ಮತ್ತು ಮಾವಿನಭಾವಿ, ಆನೆಹೊಸೂರುಗಳನ್ನು ಹೋಬಳಿ ಕೇಂದ್ರಗಳನ್ನಾಗಿ ಮಾಡಬೇಕೆಂದು ಮನವಿ ಪತ್ರದ ಮೂಲಕ ಒತ್ತಾಯಿಸಿದ್ದಾರೆ .

Leave a Reply

Your email address will not be published. Required fields are marked *