ಜನಪದ ನಶಿಸುವುದಿಲ್ಲ ಮತ್ತಷ್ಟು ನವನವೀನವಾಗಿ ಸಾಗುತ್ತಿದೆ. ಅಕ್ಷರ ಬರದವರು, ಬರುವವರು ಜನಪದ ವರ್ಗೀಕರಣ ಮಾಡುವಂತಿಲ್ಲ. ಅಕ್ಷರ ಬಲ್ಲವರಿಗಿಂತ ಅಕ್ಷರ ಬಾರದವರಲ್ಲಿ ಜನಪದ ನಿರಂತರವಾಗಿದೆ. ಗ್ರಾಮೀಣರ ಆಡು ಭಾಷೆಯೇ ಜನಪದ ಎಂದು ಗೋವಿಂದ ರಾಜ ಬಾರಿಕೇರ್ ಉಪನ್ಯಾಸ ನೀಡಿದರು.
ನಗರದ ಶಂಕರ್ ಟ್ರಸ್ಟ್ ಕಾಲೇಜಿನಲ್ಲಿ ಶನಿವಾರದಂದು
ಕರ್ನಾಟಕ ಜಾನಪದ ಪರಿಷತ್ತು ತಾಲೂಕು ಘಟಕ ಸಿಂಧನೂರು ವತಿಯಿಂದ ಕಾಲೇಜಿಗೊಂದು ಜನಪದ
ಹಾಗೂ ಜನಪದ ಗಾದೆಗಳಲ್ಲಿ ಜೀವನಾನಭವ ಎಂಬ ವಿಷಯದ ಕುರಿತು ಉಪನ್ಯಾಸ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಸುದೀರ್ಘವಾಗಿ ಉಪನ್ಯಾಸ ನೀಡಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನ ಅಜೆಯಕುಮಾರ ಗದ್ರಟಗಿ, ಶಂಕರ್ ಟ್ರಸ್ಟ್ ಕಾಲೇಜಿನ ಪ್ರಿನ್ಸಿಪಾಲ್ ಶೇಕ್ಷಾವಲಿ, ವಹಿಸಿದ್ದರು ಕರ್ನಾಟಕ ಜನಪದ ಪರಿಷತ್ತು ತಾಲೂಕು ಅಧ್ಯಕ್ಷರಾದ ಬಸವರಾಜ ನಾಯಕ ಪ್ರಾಸ್ತಾವಿಕವಾಗಿ ನುಡಿಗಳನ್ನು ನುಡಿದರು.
ಈ ವೇಳೆ: ಮಹಿಳಾ ಸಂಚಾಲಕಿ ಗೌರಿ ವಾಲೇಕರ್, ಮಲ್ಲಯ್ಯ ಹಿರೇಮಠ, ಕವಿತಾ ಶರಣಬಸವ ಪಾಟೀಲ್, ಶಿಕ್ಷಕ ಶಿವರಾಜ, ಕಾಲೇಜಿನ ಸಿಬ್ಬಂದಿ ವರ್ಗ ಸೇರಿದಂತೆ ವಿದ್ಯಾರ್ಥಿಗಳು ಇದ್ದರು.

