ಸಿಂಧನೂರು – ವಿಜಯನಗರ ಜಿಲ್ಲೆಯ ಹೂವಿನಹಡಗಲಿ ಪಟ್ಟಣದ ಕೊಪ್ಪಳ ಗವಿಮಠದ ಶಾಖಾ ಮಠವಾದ ಡಾ. ಹಿರಿ ಶಾಂತವೀರ ಮಹಾಸ್ವಾಮಿಗಳು ಶ್ರೀಮಠದಲ್ಲಿ ಕಾರುಣ್ಯ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಹರೇಟನೂರು ಅವರನ್ನು ಗೌರವಿಸಿ ಸಹಾಯ ಸೌಜನ್ಯದ ಮೂಲಕ ಆಶೀರ್ವದಿಸಿದರು. ಈ ಕ್ಷಣದಲ್ಲಿ ಶ್ರೀಗಳ ಮುಂದೆ ಆಶ್ರಮದ ಕಾರ್ಯಾಧ್ಯಕ್ಷರಾದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರು ತಮ್ಮ ಆಶೀರ್ವಾದ ಮತ್ತು ನಾಡಿನ ರಾಜಕೀಯ ಧುರೀಣರ ಮತ್ತು ರೈತರ ಮತ್ತು ವಿವಿಧ ಇಲಾಖೆಯ ಅಧಿಕಾರಿಗಳ ಸಾರ್ವಜನಿಕರ ಸಹಾಯ ಸಹಕಾರದೊಂದಿಗೆ ಆಶ್ರಮದ ನಿರ್ವಹಣೆ ನಡೆಯುತ್ತಿದೆ. ಆದರೆ ಸರ್ಕಾರ ಸ್ವಂತ ಜಾಗ ಕಲ್ಪಿಸಿಕೊಟ್ಟು ಅನುದಾನ ನೀಡಿದರೆ ಇನ್ನು ಹೆಚ್ಚಿನ ಸೇವೆ ಮಾಡಲು ಅನುಕೂಲವಾಗುತ್ತದೆ. ಇದರ ಜೊತೆಯಲ್ಲಿ ಅನೇಕ ಸಮಾಜ ಪರ ಜನಪರ ಕಾರ್ಯಗಳನ್ನು ಮಾಡುವ ಉದ್ದೇಶವನ್ನು ಇಟ್ಟುಕೊಂಡಿರುವ ಕಾರುಣ್ಯ ಸಂಸ್ಥೆಗೆ ಸರ್ಕಾರದ ಸೌಲಭ್ಯಗಳು ದೊರೆಯದಿರುವುದು ಬೇಸರದ ಸಂಗತಿಯಾಗಿದೆ ಎಂದು ಶ್ರೀಗಳ ಮುಂದೆ ಭಾವನಾತ್ಮಕವಾಗಿ ಅಳಲು ತೋಡಿಕೊಂಡರು. ನಂತರ ಶ್ರೀಗಳು ಕಾರುಣ್ಯ ಕುಟುಂಬ ಮಾಡುತ್ತಿರುವ ಸತ್ಯ ಪ್ರಾಮಾಣಿಕ ಸೇವೆಗೆ ಮುಂದಿನ ದಿನಮಾನಗಳಲ್ಲಿ ಖಂಡಿತವಾಗಿಯೂ ಸ್ವಂತ ಜಾಗ ಹಾಗೂ ಅನುದಾನ ದೊರೆಯುತ್ತದೆ ನಮ್ಮ ಹಾಗೂ ನಾಡಿನ ಹರ ಗುರು ಚರಮೂರ್ತಿಗಳ ಮತ್ತು ಶರಣ ಸಂಸಾರ ಬಸವಾದಿ ಶರಣರ ಆಶೀರ್ವಾದ ಸದಾವಕಾಲ ಕಾರುಣ್ಯ ಕುಟುಂಬದ ಮೇಲಿರುತ್ತದೆ. ಜಂಗಮನ ಜೋಳಿಗೆಯು ಅನಾಥರ ಬಾಡಿಗೆ ಎನ್ನುವ ನಿಮ್ಮೆಲ್ಲರ ಸಂಕಲ್ಪ ಆದಷ್ಟು ಬೇಗನೆ ಈಡೇರುತ್ತದೆ ಎಂದು ಡಾ. ಹಿರಿ ಶಾಂತವೀರ ಮಹಾಸ್ವಾಮಿಗಳು ಡಾ.ಚನ್ನಬಸವ ಸ್ವಾಮಿ ಹಿರೇಮಠ ಅವರಿಗೆ ಆಶೀರ್ವದಿಸಿ ಸಮಾಧಾನಪಡಿಸಿದರು. ಈ ಸಮಯದಲ್ಲಿ ಆಶ್ರಮದ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ. ಬಸವ ಸ್ವಾಮಿ. ಹಾಗೂ ಶ್ರೀಮಠದ ಅಪಾರ ಭಕ್ತರು ಉಪಸ್ಥಿತರಿದ್ದರು

