ಮಾನ್ವಿ : ಪಟ್ಟಣದ ತಹಶೀಲ್ದಾರ್ ಕಚೇರಿಯ ಅವರಣದಲ್ಲಿ ಗುರುವಾರ ತಹಶೀಲ್ದಾರ್ ಭೀಮರಾಯ ರಾಮಸಮುದ್ರ ಅವರು ಭಾರತದ ಜನಗಣತಿ 2027ರ ಅಂಗವಾಗಿ ಮಾನ್ವಿ ತಾಲೂಕಿನ ಗ್ರಾಮೀಣ ವಿಭಾಗದ ಮನೆಗಳ ಪಟ್ಟಿ ಹಾಗೂ ಮನೆಗಣತಿಗೆ ಚಾಲನೆ ನೀಡಿ ಮಾತನಾಡಿದರು.

ಏ.1ರಿಂದ ಏ.15ರವರೆಗೆ ಸಾರ್ವಜನಿಕರಿಗೆ ಸ್ವಯಂ ಗಣತಿ ಮಾಡಿಕೊಳ್ಳುವ ಅವಕಾಶ ನೀಡಲಾಗಿತ್ತು. ಈ ಅವಧಿಯಲ್ಲಿ ತಾಲೂಕಿನ ಗ್ರಾಮೀಣ ಭಾಗದಲ್ಲಿ ಸುಮಾರು 9 ಸಾವಿರಕ್ಕೂ ಹೆಚ್ಚು ನಾಗರಿಕರು ತಮ್ಮ ಮೊಬೈಲ್‌ಗಳ ಮೂಲಕ ಸ್ವಯಂ ಗಣತಿಯನ್ನು ದಾಖಲಿಸಿಕೊಂಡಿದ್ದಾರೆ. 38 ಗಣತಿ ಮೇಲ್ವಿಚಾರಕರು ಹಾಗೂ 239 ಗಣತಿದಾರರ ವ್ಯಾಪ್ತಿಯಲ್ಲಿ ಈ ಕಾರ್ಯ ನಡೆದಿದೆ ಎಂದು ತಿಳಿಸಿದರು. ಏ.16ರಿಂದ ಮೇ.15ರವರೆಗೆ ನಡೆಯುವ ಮೊದಲ ಹಂತದ ಮನೆಗಣತಿಯಲ್ಲಿ ಗಣತಿದಾರರು ಮನೆಮನೆಗೆ ತೆರಳಿ ವಾಸಿಸುವವರ 34 ಅಂಶಗಳ ಮಾಹಿತಿಯನ್ನು ಸಂಗ್ರಹಿಸಿ ದಾಖಲಿಸಲಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮಾನ್ವಿ ತಾಲೂಕಿನ ಗ್ರಾಮೀಣ ವಿಭಾಗದ ಗಣತಿ ಮೇಲ್ವಿಚಾರಕರು ಹಾಗೂ ಗಣತಿದಾರರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *