ಸಿಂಧನೂರು— ಹೂವಿನ ಹಡಗಲಿ ತಾಲೂಕಿನ ಸುಪ್ರಸಿದ್ಧ ಸುಕ್ಷೇತ್ರ ಮೈಲಾರಲಿಂಗೇಶ್ವರ ದೇವಸ್ಥಾನದ ವಂಶ ಪಾರಂಪರ್ಯ ಧರ್ಮಾಧಿಕಾರಿಗಳಾದ ಶ್ರೀ ಕಪಿಲ ಪೀಠದ ಸಿಂಹಾಸನಾಧಿಪತಿಗಳಾದ ಶ್ರೀ ಶ್ರೀ ಶ್ರೀ ಗುರು ವೆಂಕಪ್ಪಯ್ಯ ಒಡೆಯರಿಂದ ಹಾಗೂ ಕರ್ನಾಟಕ ಗ್ರಾಮೀಣ ಯುವ ಕನ್ನಡ ಕ್ರಿಯಾ ಸಮಿತಿ ಮೈಲಾರ ಹಾಗೂ ಜನನಿ ಪುಷ್ಪ ಕಲಾ ಯುವಕ ಸಂಘ (ರಿ)ಹ್ಯಾರಡ ಇವರುಗಳಿಂದ ಸಿಂಧನೂರಿನ ಕಾರುಣ್ಯ ನೆಲೆ ವೃದ್ದಾಶ್ರಮ ಹಾಗೂ ವಯಸ್ಕರ ಬುದ್ಧಿಮಾಂದ್ಯ ಆಶ್ರಮದ ಡಾ. ಚನ್ನಬಸವ ಸ್ವಾಮಿ ಹಿರೇಮಠ ಅವರನ್ನು ಮೈಲಾರದ ಅವರ ನಿವಾಸದಲ್ಲಿ ಗೌರವಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಆಶ್ರಮದ ನಿರ್ವಹಣೆ ಮತ್ತು ನಿತ್ಯ ನಿರಂತರ ಬದುಕಿನ ಬಗ್ಗೆ ವಿವರಣೆ ಪಡೆದುಕೊಂಡರು. ನಂತರ ಸುಕ್ಷೇತ್ರ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದ ಧರ್ಮದರ್ಶಿಗಳಾದ ಶ್ರೀ ಗುರು ವೆಂಕಪ್ಪಯ್ಯ ಒಡೆಯರ್ ಅವರು ನಮ್ಮ ಕರುನಾಡಿನಲ್ಲಿ ಕಾರುಣ್ಯ ಎನ್ನುವ ಕೈಲಾಸದ ಅನುಭವ ಮಂಟಪಕ್ಕೆ ಶ್ರೀ ಮೈಲಾರಲಿಂಗೇಶ್ವರನ ಹಾಗೂ ಸಕಲ ದೇವಾನುದೇವತೆಗಳ ಶುಭಾಶೀರ್ವಾದವಿರುತ್ತದೆ.ಜಂಗಮರಾಗಿ ಹಿರೇಮಠ ಕುಟುಂಬ ಮಾಡುತ್ತಿರುವ ಸೇವೆ ಶ್ಲಾಘನೀಯ ನಮ್ಮ ಮೈಲಾರ ಸುಕ್ಷೇತ್ರದ ನಮ್ಮೆಲ್ಲರ ಮತ್ತು ಭಕ್ತರ ಸಹಕಾರ ನಿರಂತರವಾಗಿ ಕಾರುಣ್ಯ ಕುಟುಂಬಕ್ಕೆ ದೊರೆಯುತ್ತದೆ. ಮಾನವೀಯತೆಯ ಮಾನವ ಧರ್ಮದ ಸಂಸ್ಕೃತಿಯನ್ನು ಕಾಪಾಡುವ ನಿಟ್ಟಿನಲ್ಲಿ ಕಾರುಣ್ಯ ಆಶ್ರಮವು ಸತ್ಯ ಪ್ರಾಮಾಣಿಕ ಸೇವೆಯ ಮೂಲಕ ಮಾನವ ಧರ್ಮಕ್ಕೆ ಮಾದರಿಯಾಗಿದೆ. ಇಂತಹ ಸೇವೆ ಮಾಡುತ್ತಿರುವ ಅತ್ಯದ್ಭುತ ಸಾಧಕರಾದ ಚನ್ನಬಸವ ಸ್ವಾಮಿ ಹಿರೇಮಠ ಅತೀ ಕಿರಿಯ ವಯಸ್ಸಿನಲ್ಲಿ ಇಂತಹ ನಿರ್ಧಾರ ತೆಗೆದುಕೊಂಡು ಬಹುದೊಡ್ಡ ಸಾಮಾಜಿಕ ಜವಾಬ್ದಾರಿಯನ್ನು ನಿಭಾಯಿಸುತ್ತಿರುವುದು ನಮ್ಮೆಲ್ಲರಿಗೆ ಸಂತೋಷವಾಗಿದೆ. ಇವರಿಗೆ ಇವರ ಕುಟುಂಬಕ್ಕೆ ಹಾಗೂ ಆಶ್ರಮಕ್ಕೆ ಸಹಾಯ ಸಹಕಾರ ಮಾಡುವ ಸಮಸ್ತ ದಾನಿಗಳಿಗೆ ನಮ್ಮ ಸುಕ್ಷೇತ್ರದ ಶುಭಾಶೀರ್ವಾದವಿರುತ್ತದೆ ಎಂದು ಆಶೀರ್ವಚನೆ ನೀಡಿ ಆಶೀರ್ವದಿಸಿದರು. ಈ ಕಾರ್ಯಕ್ರಮದಲ್ಲಿ ಪುಟ್ಟಪ್ಪ ತಂಬೂರಿ ಸಂಸ್ಥಾಪಕರು ಕರ್ನಾಟಕ ಗ್ರಾಮೀಣ ಯುವ ಕನ್ನಡ ಕ್ರಿಯಾ ಸಮಿತಿ (ರಿ) ಮೈಲಾರ. ಹಾಗೂ ಚಮನ್ ಸಾಹೇಬ್ ಸಂಸ್ಥಾಪಕರು ಜನನಿ ಪುಷ್ಪಕಲಾ ಯುವಕ ಸಂಘ(ರಿ)ಹ್ಯಾರಡ. ಹಾಗೂ ಆಶ್ರಮದ ಸಿಬ್ಬಂದಿಗಳಾದ ಸಿದ್ದಯ್ಯ ಸ್ವಾಮಿ. ಬಸವ ಸ್ವಾಮಿ. ಮತ್ತು ಮೈಲಾರಲಿಂಗೇಶ್ವರನ ಸಮಸ್ತ ಭಕ್ತರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *